ಬೆಂಗಳೂರು, ಮಾ.16- ಮಾರ್ಚ್ 4ರಿಂದ ಪ್ರಾರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆ ಈವರೆಗೆ ಸುಲಲಿತವಾಗಿ ನಡೆದಿದ್ದು, ಇನ್ನೂ ಏಳು ದಿನಗಳ ಕಾಲ ನಡೆಯಲಿರುವ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಎದುರಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಹೇಳಿದ್ದಾರೆ. ಈಗಾಗಲೇ 39 ವಿಷಯಗಳ ಪರೀಕ್ಷೆ ಮುಗಿದಿದೆ. ಇನ್ನೂ 7 ಪರೀಕ್ಷೆಗಳು ನಡೆಯಬೇಕಿದೆ. ವಿದ್ಯಾರ್ಥಿಗಳು ನಿರ್ಭಯದಿಂದ ಪರೀಕ್ಷೆ ಬರೆಯಿರಿ. ವಿಜಯಪುರದಲ್ಲಿ ಯಾರೋ ಇಬ್ಬರು ಕಿಡಿಗೇಡಿಗಳು ಮಾಡಿದ ಕೃತ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ಕೆಲವು ವದಂತಿ …
Read More »ಕೊರೊನಾ ಹರಡದಂತೆ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚುವರಿ ವೇತನ
ಬೆಂಗಳೂರು, ಮಾ.16- ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಾಮಾರಿ ಕೊರೊನಾ ಸೋಂಕು ಹಬ್ಬದಂತೆ ಹಗಲಿರುಳು ಯೋಧರ ರೀತಿ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚುವರಿ ವೇತನ ಹಾಗೂ ಪಾಲಿಸಿ (ವಿಮೆ) ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸರ್ಕಾರಿ ವೈದ್ಯರು ಯೋಧರ ರೀತಿ ಕೊರೊನಾ ವೈರಸ್ ತಡೆಗಟ್ಟಲು ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ನಾನು ಅವರಿಗೆ ವಿಶೇಷವಾದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದ ಅವರು, ಸಿಬ್ಬಂದಿಗಳಿಗೆ ಆರ್ಥಿಕ ಬೆಂಬಲ ಹೆಚ್ಚಿಸುವ ನಿಟ್ಟಿನಲ್ಲಿ ವೇತನ ಹೆಚ್ಚಳ …
Read More »ಮೊದಲು ₹18 ಕೋಟಿ, ನಂತರ 12 ಕೋಟಿಗೆ ಮನವಿ; ಸುನೀಲ್ ಪುರಾಣಿಕ್‌ಗೆ ಸಿಎಂ ತರಾಟೆ
ಕರ್ನಾಟಕ ಚಲನಚಿತ್ರ ಅಕಾಡೆಮಿ ಒಂದಕ್ಕೇ ಬರೋಬ್ಬರಿ 18 ಕೋಟಿ ರೂಪಾಯಿ ಅನುದಾನ ಕೇಳಿದ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್‌ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ತರಾಟೆ ತೆಗೆದುಕೊಂಡಿದ್ದಾರೆ. ಸುನೀಲ್ ಪುರಾಣಿಕ್ ಸಿಎಂ ಬಳಿ ಒಂದು ವರ್ಷಕ್ಕೆ ₹18 ಕೋಟಿಯನ್ನ ಚಲನಚಿತ್ರ ಅಕಾಡೆಮಿಗೆ ಬಿಡುಗಡೆ ಮಾಡಿ ಎಂದು ಕೇಳಿದ್ದಾರಂತೆ.. 18 ಕೋಟಿ ರೂಪಾಯಿಗಳ ಮನವಿ ಪತ್ರ ತೆಗೆದುಕೊಂಡು ಸಿಎಂ ಬಳಿ ಹೋದ ಸುನೀಲ್ ಪುರಾಣಿಕ್ ಅದಕ್ಕೂ ಮುನ್ನ ಬಿಎಸ್ವೈ ಪುತ್ರ ಬಿ.ವೈ ವಿಜಯೇಂದ್ರರನ್ನು ಭೇಟಿ …
Read More »‘ದಿಯಾ’ ಚಿತ್ರಕ್ಕೆ ಆನ್ ಲೈನ್ ನಲ್ಲಿ ಮುಗಿಬಿದ್ದ ಜನ: ರಿ-ರಿಲೀಸ್ ಮಾಡುವಂತೆ ಪ್ರೇಕ್ಷಕರ ಮನವಿ
‘ದಿಯಾ’ ಚಿತ್ರಕ್ಕೆ ಆನ್ ಲೈನ್ ನಲ್ಲಿ ಮುಗಿಬಿದ್ದ ಜನ: ರಿ-ರಿಲೀಸ್ ಮಾಡುವಂತೆ ಪ್ರೇಕ್ಷಕರ ಮನವಿ ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ರಿಲೀಸ್ ಆದ ದಿಯಾ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕನ್ನಡ ಚಿತ್ರ ಪ್ರೇಕ್ಷಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಿನಿಮಾ ನೋಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಡಿಹೊಗಳುತ್ತಿದ್ದಾರೆ. ಚಿತ್ರಮಂದಿರಗಳ ಸಮಸ್ಯೆಯ ನಡುವೆಯೂ ಗೆದ್ದು ಬೀಗಿರುವ ದಿಯಾ ಇತ್ತೀಚಿಗೆ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಮಾಡಲಾಗಿದೆ. ಆನ್ ಲೈನಲ್ಲಿ ರಿಲೀಸ್ ಆಗುತ್ತಿದ್ದಂತೆ …
Read More »ಖಾಲಿ ಸರ್ಕಾರಿ ಕಟ್ಟಡಗಳನ್ನು ಕೊರೋನ ಚಿಕಿತ್ಸೆಗೆ ಬಳಸಿ : ಎಚ್‌ಡಿಕೆ ಸಲಹೆ
ಬೆಂಗಳೂರು,ಮಾ.15-ಕೊರೋನ ವೈರಸ್ ಸೋಂಕಿತರಿಗೆ ಖಾಲಿ ಇರುವ ಸರ್ಕಾರಿ ಕಟ್ಟಡಗಳನ್ನು ಚಿಕಿತ್ಸೆ ನೀಡಲು ಬಳಸಿಕೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ. ಇತರೆ ರೋಗಿಗಳ ಜೊತೆ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸರಿಯೇ ಎಂದು ಅವರು ಟ್ವೀಟ್‍ನಲ್ಲಿ ಪ್ರಶ್ನಿಸಿದ್ದಾರೆ. ಕೊರೋನ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವುದೇ ಮುಂಜಾಗ್ರತಾ ಕ್ರಮವಾಗಿದ್ದು ಇದಕ್ಕಾಗಿ ಕೆಲ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಆಸ್ಪತ್ರೆ ತೆರೆದಿರುವುದಾಗಿ ಸರ್ಕಾರ ಹೇಳುತ್ತಿದೆ. ಇತರೆ ರೋಗಿಗಳ ಜೊತೆ ಕೊರೋನ ಸೋಂಕಿತರಿಗೂ ಚಿಕಿತ್ಸೆ ನೀಡುವ …
Read More »ರಾಜ್ಯ ಸರ್ಕಾರದಿಂದ ಕೊರೋನಾ ತಡೆಗೆ ಸಕಲ ಸಿದ್ದತೆ: ಸಿಎಂ ಯಡಿಯೂರಪ್ಪ
ರಾಜ್ಯ ಸರ್ಕಾರದಿಂದ ಕೊರೋನಾ ತಡೆಗೆ ಸಕಲ ಸಿದ್ದತೆ: ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ 100 ಜನ ಕೊರೋನಾ ಶಂಕಿತರ ಮೇಲೆ ನಿಗಾ/ಕೊರೋನಾ ವೈರಸ್ ತಡೆಯಲು ಸರ್ಕಾರ ಸನ್ನದ್ಧ/ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ ಸರಕಾರ ಕೊರೋನಾ ಎದುರಿಸಲು ಸನ್ನದ್ದವಾಗಿ ಜನರು ಆತಂಕ ಪಡುವ ಅಗತ್ಯ ಇಲ್ಲ. ರಾಜ್ಯದಲ್ಲಿ 100ಜನ ಕರೋನಾ ಶಂಕಿತರ ಮೇಲೆ ನಿಗಾ ಇಡಿಸಲಾಗಿದೆ. ಎಂದು ಮುಖ್ಯಮಂತ್ರಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಅವರು ಇಂದು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಹಾಂತೇಶ್ ಕವಟಗಿಮಠ …
Read More »ಕೊರೊನಾ ಶಂಕೆ : ಬೆಂಗಳೂರಿನ ಇನ್ಫೋಸಿಸ್ ಕಚೇರಿ ಸ್ಥಳಾಂತರ
ಬೆಂಗಳೂರು, ಮಾ.14- ಕೊರೊನಾ ವೈರಸ್‍ನ ಪರಿಣಾಮ ಬಹುರಾಷ್ಟ್ರೀಯ ಕಂಪೆನಿ ಇನ್ಫೋಸಿಸ್‍ಗೂ ತಟ್ಟಿದ್ದು, ಬೆಂಗಳೂರಿನಲ್ಲಿರುವ ಐಐಪಿಎಂ ಇನ್ಫೋಸಿಸ್ ಕಚೇರಿಯ ಕಟ್ಟಡವನ್ನು ತಾತ್ಕಾಲಿಕವಾಗಿ ಖಾಲಿ ಮಾಡಲಾಗಿದೆ. ಇನ್ಫೋಸಿಸ್‍ನ ಉದ್ಯೋಗಿಯೊಬ್ಬರಿಗೆ ಕೊರೊನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗುತ್ತಿದ್ದಂತೆ ಸಂಸ್ಥೆ ಹೈ ಅಲರ್ಟ್ ಆಗಿದ್ದು, ಸದರಿ ಉದ್ಯೋಗಿ ಕೆಲಸ ಮಾಡುತ್ತಿದ್ದ ಕಚೇರಿಯ ಐಐಪಿಎಂ ಕಟ್ಟಡವನ್ನು ಖಾಲಿ ಮಾಡಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಇನ್ಫೋಸಿಸ್‍ನ ಅಧಿಕಾರಿಗಳು, ಸಂಸ್ಥೆಯ ಉದ್ಯೋಗಿಯೊಬ್ಬರಿಗೆ ಕೊರೊನಾ ವೈರಸ್‍ನ ಲಕ್ಷಣಗಳು ಕಂಡು ಬಂದಿರುವುದರಿಂದ …
Read More »ಕೆಪಿಸಿಸಿ ನಿಯೋಜಿತ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅವರು ಆಯ್ದೆಯಾದ ಕುರಿತು ಮಾಜಿ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ಕೆಪಿಸಿಸಿ ನಿಯೋಜಿತ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅವರು ಆಯ್ದೆಯಾದ ಕುರಿತು ಮಾಜಿ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿದ್ದಾರೆ. ದೆಹಲಿಯಿಂದ ಕೆಪಿಸಿಸಿ ಅಧ್ಯಕ್ಷರಾದ ಬಗ್ಗೆ ನಾನೇ ಅವರಿಗೆ ತಿಳಿಸಿದ್ದೆ, ಮುಂದಿನ ದಿನಗಳಲ್ಲಿ ಎಲ್ಲರನ್ನೂಒಟ್ಟುಗೂಡಿಸಿಕೊಂಡು ಪಕ್ಷವನ್ನ ಬಲಪಡಿಸುವ ಕೆಲಸ ಮಾಡ್ತಾರೆ. ಎಲ್ಲ ಹಿರಿಯ, ಕಿರಿಯ, ಕಾರ್ಯಕರ್ತರು ಅವರಿಗೆ ಸಹಕಾರ ಇದ್ರೆ ಮಾತ್ರ ಉತ್ತಮ ಸಂಘಟನೆ ಸಾಧ್ಯ. ಒಬ್ಬ ವ್ಯಕ್ತಿ ಎಷ್ಟೇ ಸಮರ್ಥನಾಗಿದ್ದರೂ ಎಲ್ಲರ ಸಹಕಾರ …
Read More »ಬೈಕ್‍ಗೆ ಕನ್ನಡದ ನಂಬರ್ ಪ್ಲೇಟ್ ಹಾಕಿದ್ದಕ್ಕಾಗಿ ದಂಡ ವಿಧಿಸಿದ ಪೊಲೀಸರು
ಬೆಂಗಳೂರು, ಮಾ.14- ಕನ್ನಡದಲ್ಲಿ ನಂಬರ್ ಪ್ಲೇಟ್ ಹಾಕಿದ್ದಕ್ಕಾಗಿ ಪೀಣ್ಯ ಸಂಚಾರಿ ಠಾಣೆ ಪೊಲೀಸರು 500 ರೂ. ದಂಡ ವಿಧಿಸಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಪೀಣ್ಯ ಬಳಿ ಸಂಚರಿಸುತ್ತಿದ್ದ ಹೀರೋ ವೊಂಡಾ ಬೈಕ್‍ನನ್ನು ತಡೆದ ಪೊಲೀಸರು ಚಾಲಕ ಮಹೇಶ್‍ಗೆ 500 ರೂ. ದಂಡ ವಿಧಿಸಿದ್ದಾರೆ. ಕಾರಣ ಕೇಳಿದಾಗ ದ್ವಿಚಕ್ರ ವಾಹನದ ನೊಂದಣಿ ಸಂಖ್ಯೆ ಸಂಪೂರ್ಣವಾಗಿ ಕನ್ನಡದಲ್ಲಿ ಬರೆಸಲಾಗಿದೆ. ಇದು ನಿಯಮ ಬಾಹೀರ, …
Read More »ವಿರೊಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿ ಸನ್ಮಾನಿಸಿದರು.
ಬೆಂಗಳೂರು: ವಿರೊಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿ ಸನ್ಮಾನಿಸಿದರು. ಇಲ್ಲಿನ ಸಿದ್ಧರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ ಶಿವಕುಮಾರ ಅವರನ್ನು ಸಿದ್ಧರಾಮಯ್ಯ ಅವರು ಅಭಿನಂದಿಸಿ ಶುಭ ಹಾರೈಸಿದರು ಪಕ್ಷ ಸಂಘಟನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಿದ್ಧರಾಮಯ್ಯ ಅವರ ಜೊತೆ ಶಿವಕುಮಾರ ಕೆಲಹೊತ್ತು ಚರ್ಚೆ ನಡೆಸಿದ್ದಾರೆ.ಡಿಕೆಶಿ ಸಹೋದರ ಸಂಸದ ಡಿ.ಕೆ.ಸುರೇಶ ಕೂಡ ಈ ಸಂದರ್ಭದಲ್ಲಿ ಇದ್ದರು
Read More »