Breaking News

ಬೆಂಗಳೂರು

ತಣ್ಣಗಿದ್ದ ಹೊಂಗಸಂಧ್ರದಲ್ಲಿ ಮತ್ತೆ ಕೊರೊನಾ – ಕ್ವಾರಂಟೈನ್ ಮುಗಿಸಿದ್ದ 5 ಮಂದಿಗೆ ಸೋಂಕು

ಬೆಂಗಳೂರು: ಹೊಂಗಸಂಧ್ರದಲ್ಲಿ ಬಿಹಾರಿ ಕೂಲಿ ಕಾರ್ಮಿಕನಿಂದ 29 ಪ್ರಕರಣಗಳು ಪತ್ತೆಯಾಗಿತ್ತು. ಕೆಲ ದಿನಗಳ ನಂತರ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಹೊಂಗಸಂಧ್ರ ಸಹಜ ಸ್ಥಿತಿಯತ್ತ ಸಾಗುತ್ತಿದೆ ಎನ್ನುವಷ್ಟರಲ್ಲೇ ಬಿಹಾರಿ ಕೂಲಿ ಕಾರ್ಮಿಕನ ಸಂಬಂಧ ಕ್ವಾರಂಟೈನ್ ಮಾಡಿದ್ದವರಲ್ಲಿ ಬರೋಬ್ಬರಿ ಐದು ಜನರಿಗೆ ಸೊಂಕು ಪತ್ತೆಯಾಗಿದೆ. ಇದರಿಂದ ಮತ್ತೆ ಹೊಂಗಸಂಧ್ರದಲ್ಲಿ ಭೀತಿ ಎದುರಾಗಿದೆ. ಬಿಹಾರಿ ಕೂಲಿ ಕಾರ್ಮಿಕನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 184 ಜನರನ್ನ ಹೋಟೆಲ್ ಕ್ವಾರಂಟೈನ್ ಮಾಡಲಾಗಿತ್ತು. ಇವರನ್ನು 14 ದಿನಗಳು ಕ್ವಾರಂಟೈನ್ …

Read More »

ಬೆಂಗಳೂರಿನಲ್ಲಿ ಮತ್ತೊಬ್ಬ ಗರ್ಭಿಣಿಗೆ ಕೊರೊನಾ…………

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೊನಾಸುರ ಅಬ್ಬರಿಸುತ್ತಿದ್ದು, ಇಂದು ಇಬ್ಬರು ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲಿದೆ. ಮಧ್ಯಾಹ್ನ ಪಾದರಾಯನಪುರದ ಗರ್ಭಿಣಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಅದೇ ವ್ಯಾಪ್ತಿಯ ಮತ್ತೊಬ್ಬ ಗರ್ಭಿಣಿಗೆ ಸೋಂಕು ಕಾಣಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಇಂದು ಬೆಂಗಳೂರಿನ ಒಟ್ಟು 16 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಪಾದರಾಯನಪುರ 10ನೇ ಕ್ರಾಸ್ ನಿವಾಸಿ 19 ವರ್ಷದ 8 ತಿಂಗಳು ಗರ್ಭಿಣಿಗೆ ಸೋಂಕು ತಗುಲಿದೆ. ಮಹಿಳೆಯ ಪತಿ (ರೋಗಿ 706)ಗೆ ಸಾಮೂಹಿಕ ಪರೀಕ್ಷೆಯಲ್ಲಿ …

Read More »

ಕಂಠಪೂರ್ತಿ ಕುಡಿದಿದ್ದ ರೌಡಿಶೀಟರ್‌ನನ್ನ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು……….

ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಮದ್ಯ ಸಿಗದೆ ಸೈಲೆಂಟ್ ಆಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ವೈಲೆಂಟ್ ಆಗಿದೆ. ಮದ್ಯ ಮಾರಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದಾಗಿನಿಂತ ನಿತ್ಯವೂ ಒಂದಿಲ್ಲೊಂದು ಹಲ್ಲೆ, ಕೊಲೆ ಪ್ರಕರಣಗಳು ನಡೆಯುತ್ತಲೇ ಇವೆ. ಕೆಲ ದುಷ್ಕರ್ಮಿಗಳು ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದಿದ್ದ ಓರ್ವ ರೌಡಿಶೀಟರ್‌ನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದಿದ್ದಾರೆ. ಬ್ಯಾಟರಾಯನಪುರದ ಅಶೋಕ್ ಅಲಿಯಾಸ್ ದಡಿಯಾ ಕೊಲೆಯಾದ ರೌಡಿಶೀಟರ್. ಬ್ಯಾಟರಾಯನಪುರದ ಭಾರತೀನಗರದಲ್ಲಿ ಘಟನೆ ನಡೆದಿದೆ. ಗುರುವಾರ ತಡರಾತ್ರಿ ಕುಡಿದ …

Read More »

ಬಬ್ರುವಾಹನ ಸಿನಿಮಾ ಖ್ಯಾತಿಯ ಹಿರಿಯ ಛಾಯಾಗ್ರಾಹಕ ಇನ್ನಿಲ್ಲ……….

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಛಾಯಾಗ್ರಾಹಕರಾದ ಎಸ್.ವಿ ಶ್ರೀಕಾಂತ್(87) ಅವರು ಗುರುವಾರ ಸಂಜೆ ಬೆಂಗಳೂರಿನ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. “ಟ್ರಿಕ್ ಫೋಟೋಗ್ರಫಿ ಎಕ್ಸ್‌ಪರ್ಟ್” ಎಂದೇ ಹೆಸರಾಗಿದ್ದ ಎಸ್.ವಿ ಶ್ರೀಕಾಂತ್ ಅವರು ದ್ವಿಪಾತ್ರ ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು. ‘ಗೆಜ್ಜೆ ಪೂಜೆ’, ‘ಉಪಾಸನೆ’ ಹಾಗೂ ‘ಮಾರ್ಗದರ್ಶಿ’ ಚಿತ್ರಗಳ ಛಾಯಾಗ್ರಾಹಣಕ್ಕೆ ಶ್ರೀಕಾಂತ್ ಅವರಿಗೆ ರಾಜ್ಯ ಪ್ರಶಸ್ತಿ ಸಹ ಒಲಿದಿದೆ. 1960ರಿಂದ 40 ವರ್ಷಗಳ ಕಾಲ 60 ಕ್ಕೂ ಹೆಚ್ಚು ಚಿತ್ರಗಳಿಗೆ ಶ್ರೀಕಾಂತ್ ಅವರು ಕೆಲಸ …

Read More »

ಮೇ 9ರಿಂದ ಬಾರ್, ಲಾಡ್ಜ್, ಕ್ಲಬ್​ಗಳಲ್ಲೂ ಮದ್ಯ ಮಾರಾಟ: ಸಚಿವ ಹೆಚ್. ನಾಗೇಶ್…….

ಬೆಂಗಳೂರು(ಮೇ 08): ಮೂರನೇ ಹಂತದ ಲಾಕ್​ಡೌನ್​ನಲ್ಲಿ ರಾಜ್ಯಾದ್ಯಂತ ಕೆಂಪೇತರ ವಲಯಗಳಲ್ಲಿನ ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಲಾಗಿದೆ. ಈಗ ಬಾರ್, ಲಾಡ್ಜ್, ಕ್ಲಬ್​ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಇವತ್ತು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್. ನಾಗೇಶ್ ಈ ವಿಚಾರವನ್ನು ತಿಳಿಸಿದ್ಧಾರೆ. ನಾಳೆಯಿಂದ ಲಾಡ್ಜ್, ಬಾರ್ ಮತ್ತು ಕ್ಲಬ್​ಗಳಿಗೆ ಮದ್ಯ ಮಾರಾಟಕ್ಕೆ ಮಾಡಲು ಅನುಮತಿ ನೀಡಲಾಗುವುದು ಎಂದು ಹೇಳಿದ್ದಾರೆ. ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಇಲ್ಲಿ ಮದ್ಯ ಮಾರಾಟ …

Read More »

ಕೊರೋನಾ ಪರಿಹಾರಕ್ಕಾಗಿ ಆಟೋ ಚಾಲಕರು ಕ್ಯೂ ನಲ್ಲಿ ನಿಲ್ಲಬೇಕಿಲ್ಲ..! ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರು, ಮೇ 8-ಆಟೋ ರಿಕ್ಷಾ , ಟ್ಯಾಕ್ಸಿ ಚಾಲಕರಿಗೆ ಪರಿಹಾರ ಧನ ನೀಡಲು ಅರ್ಜಿಗಳನ್ನುಆನ್‍ಲೈನ್‍ನಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರು ಅರ್ಜಿಗಳನ್ನು ಸಲ್ಲಿಸಲು ಅನಾವಶ್ಯಕವಾಗಿ ಪರಿಶ್ರಮ ಪಡೆಯುವ ಅವಶ್ಯಕತೆ ಇಲ್ಲ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಎಲ್ಲ ಅರ್ಹ ಆಟೋ ಟ್ಯಾಕ್ಸಿ ಚಾಲಕರಿಗೆ ಪರಿಹಾರ ಧನವನ್ನು ಅವರವರ ಖಾತೆಗೆ ನೇರವಾಗಿ ವರ್ಗಾಯಿಸುವುದರಿಂದ ಯಾರೂ ಆತಂಕಕ್ಕೆ ಒಳಗಾಗಬಾರದೆಂದು ಸಾರಿಗೆ ಮತ್ತು ರಸ್ತೆ …

Read More »

ಪರಿಹಾರ ನಿಧಿಗೆ ಬಂದ ಹಣದ ಖರ್ಚು-ವೆಚ್ಚ ಕುರಿತು ಶ್ವೇತ ಪತ್ರ ಹೊರಡಿಸಬೇಕು : ವಿಪಕ್ಷಗಳ ಒತ್ತಾಯ

ಬೆಂಗಳೂರು, ಮೇ 8- ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಮಾಸಿಕ 10 ಸಾವಿರ ರೂಪಾಯಿ ನೀಡಬೇಕು, ರೈತರ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಬೇಕು, ಪಿಎಂ ಕೇರ್ ನಿಧಿಗೆ ಪಾವತಿಯಾಗಿರುವ ಹಣವನ್ನು ಹಿಂಪಡೆಯಬೇಕು ಹಾಗೆಯೇ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿರುವ ಹಣದ ಖರ್ಚು ವೆಚ್ಚದ ಕುರಿತು ಶ್ವೇತ ಪತ್ರ ಹೊರಡಿಸಬೇಕು ಎಂದು ವಿರೋಧ ಪಕ್ಷಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿರೋಧ ಪಕ್ಷಗಳ ಮುಖಂಡರು ಇಂದು ಮುಖ್ಯಮಂತ್ರಿ …

Read More »

ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ. ಇಂದು 45 ಮಂದಿಗೆ ಕೊರೊನಾ

ಭಟ್ಕಳದಲ್ಲಿ 5 ತಿಂಗಳ ಕಂದಮ್ಮ, 3 ವರ್ಷದ ಬಾಲಕಿ ಸೇರಿ 12 ಮಂದಿಗೆ ಸೋಂಕು – ಬೆಳಗಾವಿ, ದಾವಣಗೆರೆಯಲ್ಲಿ ಕೊರೊನಾ ಸ್ಫೋಟ ಇಂದು 45 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 750ಕ್ಕೆ ಏರಿಕೆಯಾಗಿದೆ.     ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ. ಇಂದು 45 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 750ಕ್ಕೆ ಏರಿಕೆಯಾಗಿದೆ. ರಾಜ್ಯ ಕುಟುಂಬ ಕಲ್ಯಾಣ ಹಾಗೂ …

Read More »

ಬೆಂಗಳೂರಿನಲ್ಲಿ ಮತ್ತೊಂದು ಹತ್ಯೆ; ಕುಡಿದ ಅಮಲಿನಲ್ಲಿ ಕೊಲೆಯಾದ ರೌಡಿಶೀಟರ್‌

ಬ್ಯಾಟರಾಯನಪುರ ರೌಡಿಶೀಟರ್‌ ಅಶೋಕ್‌ ನಿನ್ನೆ ಕುಡಿದ ಅಮಲಿನಲ್ಲಿದ್ದಾಗ ದಾಳಿ ಮಾಡಿದ್ದ ಕೆಲವರು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿಯೇ ಈ ಕೊಲೆ ನಡೆದಿರಬಹುದು ಎನ್ನಲಾಗುತ್ತಿದೆ. ಬೆಂಗಳೂರು (ಮೇ 08); ಕಳೆದ 47 ದಿನಗಳಿಂದ ಶಾಂತವಾಗಿದ್ದ ಬೆಂಗಳೂರು ಕ್ರೈಂ ಲೋಕ ಲಾಕ್‌ಡೌನ್ ಅನ್ನು ಸಡಿಲಿಸಿ ಮದ್ಯ ಮಾರಾಟಕ್ಕೆ ಅವಕಾಶ ನೀಡುತ್ತಿದ್ದಂತೆ ಮತ್ತೆ ಕ್ರಿಯಾಶೀಲವಾಗಿದೆ. ನಿನ್ನೆ ತಡರಾತ್ರಿ ಕುಡಿದ ಮತ್ತಿನಲ್ಲಿದ್ದ ರೌಡಿಶೀಟರ್‌ ಅಶೋಕ್‌ ಅಲಿಯಾಸ್ ದಡಿಯಾ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ …

Read More »

ಬೆಂಗ್ಳೂರಿಗರೇ ಎಚ್ಚರ- ಮೇ ಅಂತ್ಯಕ್ಕೆ ಹೆಚ್ಚಾಗಲಿದೆ ಕೊರೊನಾ ಅಬ್ಬರ……………

ಬೆಂಗಳೂರು: ಭಾರತದಲ್ಲಿ ಜೂನ್, ಜುಲೈ ಅಂತ್ಯಕ್ಕೆ ಕೊರೊನಾ ಇನ್ನಿಲ್ಲದಂತೆ ಬಾಧಿಸಲಿದೆ ಅಂತ ಎಚ್ಚರಿಸಲಾಗಿದೆ. ಆದರೆ ಬೆಂಗಳೂರಿಗೆ ಮಾತ್ರ ಮೇ ತಿಂಗಳೇ ಕಂಟಕವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮುಂದಿನ ವಾರ ಬೆಂಗಳೂರಿನಲ್ಲಿ ಮತ್ತಷ್ಟು ಕೊರೊನಾ ಹೆಚ್ಚಳವಾಗಲಿದ್ದು, ಮೇ ಅಂತ್ಯಕ್ಕೆ 5 ಸಾವಿರ ಪ್ರಕರಣ ಪತ್ತೆಯಾಗಬಹುದು ಅಂತ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಲಾಕ್‍ಡೌನ್ ಸಡಿಲಿಕೆ ಆಗಿ ನಾಲ್ಕು ದಿನದಲ್ಲಿ ಅಂತಹ ಕಂಟಕ ಬೆಂಗಳೂರಿಗೆ ಎದುರಾಗಿಲ್ಲ. ಆದರೆ ಮುಂದಿನ ವಾರ ಹೈ ರಿಸ್ಕ್ …

Read More »