ಬೆಂಗಳೂರು: ಲಾಕ್‍ಡೌನ್ ಸಡಿಲಿಕೆ ನಿಜಕ್ಕೂ ಬೆಂಗಳೂರಿಗೆ ಮಾರಕವಾಗ್ತಿದೆಯಾ ಅನ್ನೋ ಅನುಮಾನ ಮೂಡಿದೆ. ಲಾಕ್‍ಡೌನ್ ಸಡಿಲಿಕೆ ಬಳಿಕ ಬೆಂಗಳೂರಿನ ಕಂಟೈನ್‍ಮೆಂಟ್ ಝೋನ್‍ಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲಿದೆ. ಕಳೆದ ವಾರ 20-22 ರಷ್ಟಿದ್ದ ಸಂಖ್ಯೆ 39ಕ್ಕೆ ಏರಿಕೆ ಕಂಡಿದೆ. ಮಂಗಳವಾರ ಬಿಬಿಎಂಪಿ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ 39 ಕಂಟೈನ್‍ಮೆಂಟ್ ಝೋನ್ ಗಳನ್ನು ಗುರುತಿಸಿದ್ದಾರೆ. ಗ್ರೀನ್ ಝೋನ್ ಏರಿಯಾಗಳಾದ ನಾಗರಬಾವಿಯ ಸೆಕೆಂಡ್ ಸ್ಟೇಜ್, ನಗರ್ ದ ಪೇಟೆ, ದಾಸಸರಹಳ್ಳಿಯ ಚಿಕ್ಕಲಸಂದ್ರ, …
Read More »ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಹೆಬ್ಬಾವಿನ ಮರಿಯೊಂದು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡಿದೆ.
ಬೆಂಗಳೂರು: ಲಾಕ್‍ಡೌನ್‍ನಿಂದಾಗಿ ಕಳೆದ ಎರಡು ತಿಂಗಳಿನಿಂದ ಸಂಚಾರ ಬಂದ್ ಆಗಿತ್ತು. ಈಗ ಮತ್ತೆ ಬಸ್ ಸಂಚಾರ ಶುರು ಆಗಿದೆ. ಆದರೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಹೆಬ್ಬಾವಿನ ಮರಿಯೊಂದು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡಿದೆ. ಮಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್ಸೊಂದು ಮಂಗಳವಾರ ರಾತ್ರಿ ಸುಮಾರು 10:30ರ ಸುಮಾರಿಗೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಪ್ರಯಾಣಿಕರ ಸಮೇತ ಬಂದಿತ್ತು. ಪ್ರಯಾಣಿಕರನ್ನ ಕೆಳಗಿಳಿಸಿ ಬಸ್ಸನ್ನು ಸ್ಯಾನಿಟೈಸರ್ ಮಾಡುವ ವೇಳೆ ಬಸ್ಸಿನ ಮೀಟರ್ ಬೋರ್ಡ್ ಬಳಿ ಹೆಬ್ಬಾವಿನ ಮರಿ ಕಾಣಿಸಿಕೊಂಡಿದೆ. …
Read More »ಜುಲೈ 1ರಿಂದ ಹಂತ ಹಂತವಾಗಿ ಶಾಲೆಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಬೆಂಗಳೂರು: ಕೊರೊನಾ ಸ್ಫೋಟದ ಮಧ್ಯೆ, ರಾಜ್ಯದಲ್ಲಿ ಜುಲೈ 1ರಿಂದ ಹಂತ ಹಂತವಾಗಿ ಶಾಲೆಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಜೂನ್ 8ರಿಂದಲೇ ದಾಖಲಾತಿ ಪ್ರಕ್ರಿಯೆಗಳು ಶುರುವಾಗಲಿವೆ. ಮೊದಲು ರಾಜ್ಯದಲ್ಲಿ ಶಾಲೆ ಪ್ರಾರಂಭ ಮಾಡುವ ಸಂಬಂಧ ಜೂನ್ 10ರಿಂದ ಮೂರು ದಿನಗಳ ಕಾಲ ಎಲ್ಲ ಶಾಲೆಗಳಲ್ಲಿ ಪೋಷಕರ, ಎಸ್‍ಡಿಎಂಸಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಶಾಲೆಗಳ ಪ್ರಾರಂಭಕ್ಕೆ ಚಾಲನೆ ಕೊಟ್ಟಿರುವ ಸರ್ಕಾರ ಮೊದಲ ಹಂತವಾಗಿ ಶಾಲೆಗಳ ಕಚೇರಿ …
Read More »ನಾನು ಯಾರ ಋಣದಲ್ಲಿಯೂ ಸಿಎಂ ಆಗಿರಲಿಲ್ಲ. ಅವರೇ ನನ್ನ ಮನೆ ಬಾಗಿಲಿಗೆ ಬಂದು ಸಿಎಂ ಆಗಿ ಎಂದು ಹೇಳಿಕೊಂಡಿದ್ರು
ರಾಮನಗರ: ನಾನು ಯಾರ ಋಣದಲ್ಲಿಯೂ ಸಿಎಂ ಆಗಿರಲಿಲ್ಲ. ಅವರೇ ನನ್ನ ಮನೆ ಬಾಗಿಲಿಗೆ ಬಂದು ಸಿಎಂ ಆಗಿ ಎಂದು ಹೇಳಿಕೊಂಡಿದ್ರು ಅಂತಾ ಮಾಜಿ ಸಿಎಂ ಹೆಚ್ . ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾರಸ್ವಾಮಿ ಅವರನ್ನು ಸಿಎಂ ಮಾಡಿ ಕೆಲವರು ಬಾರಿ ಬೆಂಬಲ ಕೊಟ್ಟಿದ್ರು. ಯಾರಿಂದ ಅಧಿಕಾರ ಕಳೆದುಕೊಂಡೆ ಅಂತಾ ನನಗೆ ಗೊತ್ತು. ಕೆಲವರು ಕುಮಾರಸ್ವಾಮಿ ಅವರನ್ನು ಉಳಿಸಿದ್ದೆ ನಾವು ಅಂತಾ ಪ್ರಚಾರ ಪಡೆದುಕೊಂಡಿದ್ದಾರೆ …
Read More »ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್…………………
ಬೆಂಗಳೂರು: ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಲಾಕ್‍ಡೌನ್ ವೇಳೆ ಮದ್ಯ ಮಾರಾಟದ ಸಮಯವಾಕಾಶವನ್ನು 2 ಗಂಟೆ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಕೊರೊನಾ ಲಾಕ್‍ಡೌನ್‍ನಿಂದ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿತ್ತು. ಆ ನಂತರ ಮೇ 4ರಂದು ಷರತ್ತು ವಿಧಿಸಿ ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ಒಪನ್ ಮಾಡಲಾಗಿತ್ತು. ಆಗ ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಓಪನ್ ಮಾಡುವಂತೆ ಸೂಚಿಸಲಾಗಿತ್ತು. ಈಗ ಈ ಸಮಯವನ್ನು ವಿಸ್ತರಣೆ ಮಾಡಲಾಗಿದೆ. ಈ ವಿಚಾರವಾಗಿ ರಾಜ್ಯ …
Read More »ಔಷಧಿ ಪೂರೈಕೆ ಬಿಲ್ ಬಿಡುಗಡೆಗೂ ಕಮಿಷನ್..!
ಬೆಂಗಳೂರು, ಜೂ.2- ಲಾಕ್‍ಡೌನ್‍ನಿಂದ ಔಷಧ ಪೂರೈಕೆ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ. ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮುನ್ನ ಕರ್ನಾಟಕ ಸ್ಟೇಟ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಗೆ ಹತ್ತಾರು ಕೋಟಿ ಮಲ್ಯದ ಔಷಧ ಪೂರೈಸಲಾಗಿದ್ದರೂ ಬಿಲ್ ಕ್ಲಿಯರ್ ಆಗುತ್ತಿಲ್ಲ. ಇದೀಗ ಬರೀ ಕೋವಿಡ್‍ಗೆ ಸಂಬಂಧಪಟ್ಟ ಔಷಧಿಗಳಿಗೆ ಮಾತ್ರ ಪೇಮೆಂಟ್ ಆಗುತ್ತಿದ್ದು, ಸೋಂಕಿನ ನೆಪವೊಡ್ಡಿ ಬಾಕಿ ಬಿಲ್‍ಗಳನ್ನು ಚುಕ್ತಾ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಔಷಧ ಪೂರೈಸಿದ್ದ ಸರಬರಾಜುದಾರರಿಗೆ …
Read More »ಜಾರಕಿಹೊಳಿ, ಗೋಪಾಲಯ್ಯ, ಕುಮಟಳ್ಳಿಗೆ ಸರ್ಕಾರದಿಂದ ಸಿಹಿಸುದ್ದಿ………..
ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಗೋಪಾಲಯ್ಯ ಮತ್ತು ಶಾಸಕ ಮಹೇಶ್ ಕುಮಟಳ್ಳಿಯಯವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ಬೆಳಗಾವಿ, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಅವರಿಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ನೀಡಲಾಗಿದೆ. ಮಹೇಶ್ ಕುಮಟಳ್ಳಿಗೆ ಕರ್ನಾಟಕ ಕೊಳಗೆರೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. https://youtu.be/OYEMtBeW6b0 ಶಾಸಕ …
Read More »ನಮಗೆ ಚಪ್ಪಾಳೆ ಬೇಡ ಸೌಲಭ್ಯ ನೀಡಿ ಎಂದು ಕೊರೊನಾ ವಾರಿಯರ್ಸ್………………
ಬೆಂಗಳೂರು: ನಮಗೆ ಚಪ್ಪಾಳೆ ಬೇಡ ಸೌಲಭ್ಯ ನೀಡಿ ಎಂದು ಕೊರೊನಾ ವಾರಿಯರ್ಸ್‍ಗಳು ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ಸಿದ್ಧವಾಗಿದ್ದಾರೆ. ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಜೂನ್ ನಾಲ್ಕರಂದು ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ಕರೆ ನೀಡಲಾಗಿದೆ. ಈ ಮೂಲಕ ಕೊರೊನಾ ಸಮಯದಲ್ಲೇ ಕರ್ನಾಟಕಕ್ಕೆ ಮಹಾ ಶಾಕ್ ಕಾದಿದೆ. ಕೊರೊನಾ ಸಮಯದಲ್ಲಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ …
Read More »ಮುಂಬೈನಿಂದ ಆಗಮಿಸಿದ ಪ್ರಯಾಣಿಕರು ಕ್ವಾರಂಟೈನ್ ಗೆ ಒಳಗಾಗದೇಪೊಲೀಸರ ಮುಂದೆಯೇ ಆಟೋ ಹತ್ತಿ ಎಸ್ಕೇಪ್
ಬೆಂಗಳೂರು: ಮುಂಬೈನಿಂದ ಆಗಮಿಸಿದ ಪ್ರಯಾಣಿಕರು ಕ್ವಾರಂಟೈನ್ ಗೆ ಒಳಗಾಗದೇ ಆಟೋ ಹತ್ತಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮುಂಬೈನಿಂದ ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಇಂದು 1700ಕ್ಕೂ ಹೆಚ್ಚು ಪ್ರಯಾಣಿಕರು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದು ಇಳಿದಿದ್ದು, ಅದರಲ್ಲಿ ಇಬ್ಬರು ಪ್ರಯಾಣಿಕರು ಪೊಲೀಸರ ಮುಂದೆಯೇ ಆಟೋ ಹತ್ತಿ ಎಸ್ಕೇಪ್ ಆಗಿದ್ದಾರೆ. ರೈಲಿನಲ್ಲಿ ರಾಜ್ಯದ ಕಾರ್ಮಿಕರು ಆಗಮಿಸಿರಬಹುದು ಎಂಬ ಗೊಂದಲಕ್ಕೀಡಾದ ಪೊಲೀಸರು ಹಾಗೂ ಅಧಿಕಾರಿಗಳು ಇಬ್ಬರು ಪ್ರಯಾಣಿಕರ ತಪಾಸಣೆ ಕೂಡ …
Read More »ಜಿಲ್ಲಾಧಿಕಾರಿ, ಜಿಪಂ ಇಸಿಒ, ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ವಿಡಿಯೋ ಸಂವಾದದಲ್ಲಿ ಬಿ.ಎಸ್. ಯಡಿಯೂರಪ್
ಬೆಂಗಳೂರು: ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ತಾಲೂಕು ಕೇಂದ್ರಗಳಲ್ಲಿ ವಾಸ ಮಾಡಿ ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚನೆ ನೀಡಿದ್ರು. ಕೋವಿಡ್ -19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಪಂ ಇಸಿಒ, ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಅಧಿಕಾರಿಗಳು ತಾಲೂಕುಗಳನ್ನು ವಿಭಾಗಿಸಿಕೊಂಡು ತಾಲೂಕು ಕೇಂದ್ರದಲ್ಲಿ ಮೊಕ್ಕಾಂ …
Read More »
Laxmi News 24×7