ಬೆಂಗಳೂರು: ನಟಿ ಸುಧಾರಣಿ ಅವರಿಗೆ ಚಿಕಿತ್ಸೆ ನೀಡಲು ತಡಮಾಡಿದ ಶೇಷಾದ್ರಿಪುರಂ ಅಪೊಲೊ ಆಸ್ಪತ್ರೆ ವಿರುದ್ಧ ಕ್ರಮವಹಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
‘ನಟಿ ಸುಧಾರಣಿ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಬಂದರೂ ಚಿಕಿತ್ಸೆಗೆ ತಡಮಾಡಿದ್ದಾರೆ ಎಂಬ ಸುದ್ದಿ ನೋಡಿದೆ. ಅವರಷ್ಟೇ ಅಲ್ಲ, ಯಾರೊಬ್ಬರೂ ಚಿಕಿತ್ಸೆ ಸಿಗದೆ ಪರದಾಡಬಾರದು’ ಎಂದು ಸಚಿವರು ಹೇಳಿದ್ದಾರೆ.
ಸುಧಾಕರ್ ಅವರ ಆಪ್ತ ಸಹಾಯಕನಿಗೆ ಕೊರೊನಾ ಸೋಂಕು ತಗುಲಿದ್ದು ಅವರು ಮತ್ತೊಮ್ಮೆ ಕ್ವಾರಂಟೈನ್ ಆಗಬೇಕಿದೆ ಎಂಬ ವರದಿಗಳ ಕುರಿತು ಸ್ಪಷ್ಟನೆ ನೀಡಿರುವ ಅವರು, ‘ನಾನು ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿಲ್ಲ. ಹೀಗಾಗಿ ಕ್ವಾರಂಟೈನ್ ಆಗುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.