Breaking News

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಹೊನಕುಪ್ಪಿ ರಸ್ತೆ 2.50 ಕೋಟಿ ರೂ. ಅನುದಾನ ಬಿಡುಗಡೆ

Spread the love

 

ಮೂಡಲಗಿ : ತಾಲೂಕಿನ ಹೊನಕುಪ್ಪಿಯಿಂದ ಲಕ್ಷ್ಮೇಶ್ವರವರೆಗಿನ ರಸ್ತೆ ಕಾಮಗಾರಿಗೆ ಮಂಗಳವಾರದಂದು ಗುದ್ದಲಿ ಪೂಜೆ ನಡೆಯಿತು.

ಸುಣಧೋಳಿ ಗ್ರಾಪಂ ಅಧ್ಯಕ್ಷೆ ಜಮೇಲಾ ಮೋಮಿನ ಮತ್ತು ಉಪಾಧ್ಯಕ್ಷ ಬಸಪ್ಪ ಹೆಗಡೆ ಅವರು 2.50 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

 

ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಕಾಳಜಿಯಿಂದಾಗಿ ಹೊನಕುಪ್ಪಿ ರಸ್ತೆ ಸುಧಾರಣೆಗೆ ಅನುದಾನ ಬಿಡುಗಡೆಯಾಗಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಶಾಸಕರ ಜನಪರ ಕಾಳಜಿಗೆ ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಸಿದ್ಧಾಪೂರ, ಸದಸ್ಯರಾದ ರಂಗಪ್ಪ ಪುಗಶೆಟ್ಟಿ, ಉಮಾ ಮಠದ, ಮಹಾದೇವಿ ದೊಡಗೌಡರ, ಶಾರವ್ವ ಲಗಳಿ, ದುರಗಪ್ಪ ಹಡಗಿನಾಳ, ಪ್ರಮುಖರಾದ ಪಾಂಡಪ್ಪ ಹೆಗಡೆ, ಭೀಮಪ್ಪ ಗೊಡಚಿ, ಸಿದ್ದಪ್ಪ ಹೆಗಡೆ, ಮಹಾದೇವ ದೊಡಗೌಡರ, ಶರೀಫ ನದಾಫ, ಬಸಪ್ಪ ಪುಗಶೆಟ್ಟಿ, ಹನಮಂತ ಹೆಗಡೆ, ಪರಮೇಶ್ವರ ಹೆಗಡೆ, ಸೋಮಪ್ಪ ಗಂಗರಡ್ಡಿ, ಯಲ್ಲಪ್ಪ ಆಲಕನೂರ, ಬಸಪ್ಪ ಹೆಗಡೆ, ಯಲ್ಲಪ್ಪ ದೊಡಗೌಡರ, ರಮೇಶ ಸಣ್ಣಕ್ಕಿ, ಬಸವರಾಜ

ತೆಗ್ಗಿ,ಯಲ್ಲಪ್ಪ ದೊಡಗೌಡರ, ರಮೇಶ ಸಣ್ಣಕ್ಕಿ, ಬಸವರಾಜ ತೆಗ್ಗಿ, ಬಸವರಾಜ ಗಂಗರಡ್ಡಿ, ಬಸವರಾಜ ಪುಗಶೆಟ್ಟಿ, ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

 

 


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ