ಗುವಾಹಟಿ/ಪಟ್ನಾ : ಅಸ್ಸಾಂ ಮತ್ತು ಬಿಹಾರದಲ್ಲಿ ಪ್ರವಾಹದಿಂದ ಸುಮಾರು 46ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಕೊಂಚ ಸುಧಾರಿಸಿದೆ. 22 ಜಿಲ್ಲೆಗಳ 22.34 ಲಕ್ಷ ಜನ ಪ್ರವಾಹದಿಂದ ಬಾಧಿತರಾಗಿದ್ದು, ಸೋಮವಾರ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯು ಗೋಲಾಘಾಟ್ ಜಿಲ್ಲೆಯ ಬೋಕಾಖಾಟ್‌ನಲ್ಲಿ ನೆಲೆಸಿದ್ದರು. ಇದರೊಂದಿಗೆ ಅಸ್ಸಾಂನಲ್ಲಿ ಪ್ರಕೃತಿ ವಿಕೋಪದಿಂದ ಸತ್ತವರ ಸಂಖ್ಯೆಯು 129ಕ್ಕೆ ಏರಿಕೆಯಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎಎಸ್‌ಡಿಎಂಎ) ತಿಳಿಸಿದೆ.
‘ಸೋಮವಾರ ಪ್ರವಾಹವು ಸ್ವಲ್ಪ ಮಟ್ಟಿಗೆ ತಗ್ಗಿದೆ. ಗೋಲಾಪರಾ (4.62 ಲಕ್ಷ), ಬಾರಪೇಟಾ (3.81 ಲಕ್ಷ) ಹಾಗೂ ಮೋರಿಗಾಂವ್ (3 ಲಕ್ಷ) ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಂದಿನ 24 ಗಂಟೆಗಳಲ್ಲಿ 97 ಮಂದಿಯನ್ನು ರಕ್ಷಿಸಲಾಗಿದೆ’ ಎಂದೂ ಎಎಸ್‌ಡಿಎಂಎ ಹೇಳಿದೆ.