ಕೋಲಾರ: ತಾಲೂಕಿನ ವೇಮಗಲ್ ಹೋಬಳಿಯ ಕುರುಬರಹಳ್ಳಿ ಗ್ರಾಮಕ್ಕೆ ಇತ್ತೀಚೆಗಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಕೋರಿದ್ದ ಬೆನ್ನಲ್ಲಿಯೇ ಗ್ರಾಮಸ್ಥರು ವರ್ತೂರು ಪ್ರಕಾಶ್ ಅವರನ್ನು ಆಹ್ವಾನಿಸಿ ಸಿದ್ದರಾಮಯ್ಯರಿಗೆ ಒಂದು ಮತವನ್ನೂ ಹಾಕುವುದಿಲ್ಲ ಎಂದು ಭರವಸೆ ನೀಡಿರುವ ಕುತೂಹಲ ಸಂಗತಿ ನಡೆದಿದೆ.
ಕುರುಬರಹಳ್ಳಿ ಗ್ರಾಮಸ್ಥರು ಸಾಮೂಹಿಕವಾಗಿ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಗ್ರಾಮಕ್ಕೆ ಕರೆಯಿಸಿ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಿ ಸನ್ಮಾನಿಸಿ, ನಮ್ಮ ಗ್ರಾಮದಿಂದ ಒಂದು ಮತ ಕೂಡ ಸಿದ್ಧರಾಮಯ್ಯನವರಿಗೆ ಹಾಕುವುದಿಲ್ಲ. ಸತತ 15 ವರ್ಷಗಳಿಂದ ವರ್ತೂರು ಪ್ರಕಾಶ್ ಅವರೇ ನಮಗೆ ದೇವರು. ನಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಸದಾ ನಮ್ಮೊಂದಿಗೆ ಇರುವ ಒಬ್ಬ ನಾಯಕ. ಇಂತಹ ನಾಯಕನನ್ನು ಕಳೆದುಕೊಳ್ಳುವುದಕ್ಕೆ ನಾವು ಒಪ್ಪಿಕೊಳ್ಳುವುದಿಲ್ಲ. ನಮ್ಮ ಬೆಂಬಲ ವರ್ತೂರು ಪ್ರಕಾಶ್‌ಗೆ ಎಂದು ಅಭಿಪ್ರಾಯಿಸಿದರು
Laxmi News 24×7