ಸವದತ್ತಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸವದತ್ತಿಯ ರೇಣುಕಾ ಯಲ್ಲಮ್ಮಾ ದೇವಸ್ಥಾನದ ವರಾಂಡಾಕ್ಕೆ ನೀರು ನುಗ್ಗಿದ್ದು ದೇವಿಯ ದರ್ಶನವನ್ನು ಪಡೆಯಲು ಭಕ್ತರು ಪರದಾಡುವ ಪ್ರಸಂಗ ನಿರ್ಮಾಣವಾಗಿತ್ತು.
ಹೌದು ಇಂದು ಗುರುವಾರ ಮಧ್ಯಾಹ್ನದ ವೇಳೆಗೆ ಸವದತ್ತಿಯಲ್ಲಿ ಸುರಿದ ಧಾರಾಕಾರ ಮಳಿಯಿಂದಾಗಿ ಸವದತ್ತಿ ಅಧಿದೇವತೆ ರೇಣುಕಾ ಯಲ್ಲಮ್ಮಾ ದೇವಸ್ಥಾನದ ವರಾಂಡಾಕ್ಕೆ ನೀರು ನುಗ್ಗಿದೆ. ಪರಿಣಾಮವಾಗಿ ದೇವಿಯ ದರ್ಶನಕ್ಕೆ ಬಂದಿದ್ದ ಭಕ್ತರು ದೇವಿಯ ದರ್ಶನವನ್ನು ಪಡೆಯಲು ಪರದಾಡಬೇಕಾಯಿತು. ಏಕಾಏಕಿಯಾಗಿ ಮಳೆ ರಭಸವಾಗಿ ಬೀಳಲಾರಂಭಿಸಿದ್ದರಿಂದ ಭಕ್ತರು ಓಡಿ ಹೋಗಿ ದೇವಸ್ಥಾನಕ್ಕೆ ನುಗ್ಗಿದ್ದಾರೆ. ಈ ವೇಳೆ ವರಾಂಡದ ನೀರು ಹೊರಹಾಕಲು ದೇಗುಲ ಆಡಳಿತ ಮಂಡಳಿ ಹೈರಾಣಾಗಿದ್ದಾರೆ.
Laxmi News 24×7