RSSನ ಬಲವಂತವಾದ ಕೋಮುವಾದದ ತಂತ್ರಗಳಿಗೆ ಬಗ್ಗದ ಯಡಿಯೂರಪ್ಪ ಅವರನ್ನು ನಿರ್ದಯವಾಗಿ ಕೆಳಗೆ ಇಳಿಸಿದ ಬಿಜೆಪಿ ಮತ್ತು ಆರ್ ಎಸ್ ಎಸ್ ನವರು, ಇದೀಗ ಬೊಮ್ಮಾಯಿ ಅವರನ್ನು ಸಂಪೂರ್ಣ RSS ಗುಲಾಮಗಿರಿಗೆ ಒಳಪಡಿಸಿದ್ದಾರೆ.
ತಮ್ಮ ಮೆದುಳು ಮತ್ತು ಪಂಚೇಂದ್ರಿಯಗಳನ್ನು RSS ನವರಿಗೆ ಕೊಟ್ಟು ಕುಳಿತಿರುವ ಬೊಮ್ಮಾಯಿ ಅವರು ತಾವೊಬ್ಬ ಆರ್ ಎಸ್ ಎಸ್ ನ ತೊಗಲು ಗೊಂಬೆ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.
ಇನ್ನು ಹಾಸ್ಯಾಸ್ಪದ ಎಂಬಂತೆ ಬೊಮ್ಮಾಯಿಯವರು ನೀವು ಆರ್ಯರೋ ದ್ರಾವಿಡರೋ ಎಂದು ಪ್ರಶ್ನೆ ಕೇಳುತ್ತಿದ್ದಾರೆ.
ಮೂಲತಃ ಸಿರಿಗೆರೆಯ ಮರುಳ ಸಿದ್ದೇಶ್ವರ ಸ್ವಾಮಿಗೆ ನಡೆದುಕೊಳ್ಳುವ ಇವರು ಮೂಲತಃ ದ್ರಾವಿಡರೇ ಆಗಿದ್ದು ಆ ಸಂಗತಿಯನ್ನು ಬೇಕಾದರೆ ಸಿರಿಗೆರೆ ಶ್ರೀಗಳ ಬಳಿಯೇ ಕೇಳಿ ಖಚಿತ ಪಡಿಸಿಕೊಳ್ಳಲಿ. ಅನ್ನಭಾಗ್ಯ ಅಕ್ಕಿಯನ್ನು ಕಡಿತಗೊಳಿಸಿ ತಿನ್ನುವ ಅನ್ನಕ್ಕೆ ಕನ್ನ ಹಾಕಿರುವ ಬಿಜೆಪಿಗರು, ಯುವಕರ ಉದ್ಯೋಗವನ್ನು ಕಿತ್ತುಕೊಳ್ಳುವ ಕೆಲಸ ಮಾಡಿದ್ದಾರೆ.
ಸಾಲದು ಎಂಬಂತೆ ಹಗಲು ಇರುಳೂ ಓದುವ ಮಕ್ಕಳ ಶಾಲೆಯ ಮತ್ತು ಪಠ್ಯದ ವಾತಾವರಣ ಹಾಳು ಮಾಡುತ್ತಿರುವ ಬಿಜೆಪಿಗರು ಬಹುತೇಕ ಬಡವರು ಓದುವ ಸರ್ಕಾರಿ ಶಾಲೆಗಳನ್ನು ಹಿಜಾಬ್ ಹಾಗೂ ಇನ್ನಿತರೆ ಕೋಮು ಸಂಗತಿಗಳನ್ನು ಮುನ್ನಲೆಗೆ ತರುವ ಮೂಲಕ ಪೂರ್ಣವಾಗಿ ಹಾಳು ಮಾಡುತ್ತಿದ್ದು ಕೆಳವರ್ಗದ ಮಕ್ಕಳು ಶಿಕ್ಷಣ ಪಡೆಯಬಾರದು ಎಂಬ ಹುನ್ನಾರವನ್ನು ಅದು ಹೊಂದಿದೆ.