Breaking News

ಒಂದೇ ಕುಟುಂಬದ ಎಂಟು ಜನರು ರಾಜಕಾರಣದಲ್ಲಿ ಸ್ಥಾನಮಾನ ಪಡೆದ ಕರ್ನಾಟಕದ ಏಕೈಕ ಪಕ್ಷ J.D.S.: BJP TWEET

Spread the love

ಬೆಂಗಳೂರು: ಕುಟುಂಬ ರಾಜಕಾರಣದಲ್ಲೂ ( Family Politics ) ಮಾನದಂಡವನ್ನು ಹುಡುಕಲು ಹೊರಟರೆ ಅಲ್ಲಿಯೂ ಎಚ್‌ ಡಿ ದೇವೇಗೌಡರದು ( HD Devegowdha ) ಒಂದು ಆದರ್ಶ ಕುಟುಂಬ. ಒಂದೇ ಕುಟುಂಬದ ಎಂಟು ಜನರು ರಾಜಕಾರಣದಲ್ಲಿ ಸ್ಥಾನಮಾನ ಪಡೆದ ಕರ್ನಾಟಕದ ಏಕೈಕ ಪಕ್ಷ ಎಂಬ ಹೆಗ್ಗಳಿಕೆ ಪಡೆಯಲು ಕಾರಣವಾದ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು ಎಂದು ಬಿಜೆಪಿ ತಿಳಿಸಿದೆ.

ಈ ಕುರಿತು ಸರಣಿ ಟ್ವಿಟ್ ಮಾಡಿರುವಂತ ಬಿಜೆಪಿ ಕರ್ನಾಟಕ ( BJP Karnataka ), ಜೆಡಿಎಸ್‌ ಪಕ್ಷದಲ್ಲಿ ( JDS Party ) ದೊಡ್ಡಗೌಡರ ಕುಟುಂಬದ ಎಲ್ಲಾ ಕವಲುಗಳೂ ರಾಜಕೀಯ ಸ್ಥಾನಮಾನ ಪಡೆಯುತ್ತಿದೆ. ರೇವಣ್ಷ( Revanna ), ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ, ಕುಮಾರಸ್ವಾಮಿ ( HD Kumaraswamy ), ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ( Nikhil Kumaraswamy ) ಕುಟುಂಬದ ಕಾರ್ಯಕರ್ತರ ಉಳಿವಿಗಾಗಿ ಜೆಡಿಎಸ್‌ ನಡೆಸುತ್ತಿರುವ ತ್ಯಾಗ ಶ್ಲಾಘನೀಯ ಎಂದು ವ್ಯಂಗ್ಯವಾಡಿದೆ.

ಪಕ್ಷಕ್ಕೋಸ್ಕರ ನೀವು ದುಡಿಮೆ ಮಾಡಿ. ಅಧಿಕಾರವೂ ನಿಮ್ಮದೇ ಆಗಿರುತ್ತದೆ ಎಂದು ಈ ಹಿಂದೆ ಕುಮಾರಸ್ವಾಮಿ ಅವರು ಕಾರ್ಯಕರ್ತರಿಗೆ ಭರವಸೆ ನೀಡಿದ್ದರು. ಬಹುಷಃ, ಜೆಡಿಎಸ್ ಕಾರ್ಯಕರ್ತರು ಶ್ರಮಪಡದ ಕಾರಣ ಪಕ್ಷಕ್ಕಾಗಿ ದುಡಿದ ಸೂರಜ್ ರೇವಣ್ಣ ಅವರಿಗೆ ಈಗ ಟಿಕೆಟ್ ನೀಡಲಾಗಿದೆ ಎಂದು ಹೇಳಿದೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣ: ಬಂಧನದ ಭೀತಿಯಲ್ಲಿದ್ದ ಯೂಟ್ಯೂಬರ್ ಸಮೀರ್ ಎಂಡಿಗೆ ಬಿಗ್ ರಿಲೀಫ್

Spread the loveಮಂಗಳೂರು (ಆಗಸ್ಟ್ .21):  ಧರ್ಮಸ್ಥಳ ವಿರುದ್ಧ ವಿಡಿಯೋ ಮೂಲಕ ಅಪಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಎಂಡಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ