Breaking News

ಒಳ ಉಡುಪು ಹರಿದಿದೆ, ಬಟ್ಟೆ ಅಂಗಡಿ ಬಾಗಿಲು ತೆಗೆಸಿ ಸ್ವಾಮಿ’ : ಸಿಎಂ ‘BSY’ ಬಳಿ ವಿಚಿತ್ರ ಬೇಡಿಕೆಯಿಟ್ಟ ವ್ಯಕ್ತಿ.!

Spread the love

ಮೈಸೂರು : ರಾಜ್ಯದಲ್ಲಿ ಕೊರೊನಾ ಸ್ಪೋಟವಾದ ಹಿನ್ನೆಲೆ ಜೂನ್ 7 ರವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಹಿನ್ನೆಲೆ ಬಟ್ಟೆ ಅಂಗಡಿ ಸೇರಿದಂತೆ ಎಲ್ಲವೂ ಬಂದ್ ಆಗಿದೆ. ಕೊರೊನಾ ಲಾಕ್‌ಡೌನ್‌ ಸಂದರ್ಭ ಅಗತ್ಯ ವಸ್ತು ಹೊರತುಪಡಿಸಿ ಬೇರೆ ಯಾವುದೇ ಅಂಗಡಿಗಳು ತೆರೆಯಲು ಅವಕಾಶವಿಲ್ಲ.

ಈ ಹಿನ್ನೆಲೆ ಮೈಸೂರಿನಲ್ಲಿ ವ್ಯಕ್ತಿಯೋರ್ವ ನನ್ನ ಬಳಿ ಇರುವ ಎರಡು ಒಳಉಡುಪು ಹರಿದು ಹೋಗಿದೆ, ದಯವಿಟ್ಟು ಬಟ್ಟೆ ಅಂಗಡಿ ತೆರೆಸಿ ಎಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪರ ಬಳಿ ಮನವಿ ಮಾಡಿದ್ದಾರೆ. ಹೌದು, ಈ ಕುರಿತು ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿರುವ ಮೈಸೂರಿನ ಚಾಮರಾಜಪುರದ. ನರಸಿಂಹಮೂರ್ತಿ ಎಂಬವರು, ವಾರಕ್ಕೆ ಒಂದು ಸಲ ಬಟ್ಟೆ ಅಂಗಡಿಯನ್ನು ತೆರೆದು, ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ . ನನ್ನ ಬಳಿ ಇರುವ ಎರಡು ಒಳಉಡುಪು ಹರಿದು ಹೋಗಿದೆ, ದಯವಿಟ್ಟು ಬಟ್ಟೆ ಅಂಗಡಿ ತೆರೆಸಿ ಎಂದು ಬಿ ಎಸ್‌ ಯಡಿಯೂರಪ್ಪರ ಬಳಿ ಮನವಿ ಮಾಡಿದ್ದಾರೆ.

‘ಮಾನ್ಯ ಮುಖ್ಯಮಂತ್ರಿಗಳೇ, ಕಳೆದೆರಡು ತಿಂಗಳುಗಳಿಂದ ಎಲ್ಲಾ ಅಂಗಡಿಗಳು ತೆರೆಯುತ್ತಿದ್ದರೂ ಅದೇಕೋ ಬಟ್ಟೆ ಅಂಗಡಿಗಳು ತೆರೆಯಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಕೇವಲ ಎರಡು ಜೊತೆ ಒಳ ಉಡುಪುಗಳನ್ನು ಹೊಂದಿರುವ ನನ್ನಂತಹವರ ಒಳ ಉಡುಪುಗಳು ಹರಿಯುತ್ತಿದೆ. ಇನ್ನು ಪಾಪ ಹೆಣ್ಣುಮಕ್ಕಳ ಬಟ್ಟೆಗಳ ಕಥೆಯೂ ಹೀಗೇ ಇರಬಹುದು. ನಮ್ಮ ಕಷ್ಟ ಯಾರ ಬಳಿ ಹೇಳುವುದು,,,,,ತಿಂಗಳಲ್ಲಿ ವಾರಕ್ಕೆ ಒಮ್ಮೆಯಾದರೂ ಬಟ್ಟೆ ಅಂಗಡಿಯನ್ನು ತೆರೆದು ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ’ ಎಂದು ಸಿಎಂಗೆ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ