ಝಾಂಗ್ ಹೋಂಗ್ ಎಂಬ 46 ವರ್ಷ ವಯಸ್ಸಿನ ಅಂಧ ವ್ಯಕ್ತಿ ಮೌಂಟ್ ಎವರೆಸ್ಟ್ ಪರ್ವತ ಏರಿದ್ದಾರೆ. ಚೀನಾ ಮೂಲದ ಇವರು ನೇಪಾಳ ಕಡೆಯಿಂದ ಪರ್ವತ ಹತ್ತಿ ದಾಖಲೆ ಬರೆದಿದ್ದಾರೆ. ಇಡೀ ಏಷ್ಯಾದಲ್ಲೇ ಮೌಂಟ್ ಎವರೆಸ್ಟ್ ಏರಿದ ಮೊದಲ ಅಂಧ ಅನ್ನೋ ಬಿರುದು ಪಡೆದಿದ್ದು, ವಿಶ್ವದಲ್ಲಿ ಮೌಂಟ್ ಎವರೆಸ್ಟ್ ಏರಿದ 3ನೇ ಅಂಧ ವ್ಯಕ್ತಿಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರೋ ಝಾಂಗ್ ಹೋಂಗ್, ಗಟ್ಟಿ ಮನಸ್ಸೊಂದಿದ್ರೆ ನಿನ್ ಕೈಲಿ ಆಗಲ್ಲ ಅನ್ನೋ ವಿಚಾರವನ್ನು ಹೇಗಾದ್ರೂ ಮಾಡಿ ತೋರಿಸಬಹುದು. ಕಣ್ಣಿಲ್ಲ, ಕಾಲಿಲ್ಲ, ಕೈ ಇಲ್ಲ ಅನ್ನೋದೇಲ್ಲಾ ಮ್ಯಾಟರ್ರೇ ಅಲ್ಲ ಅಂತ ಹೇಳಿದ್ಧಾರೆ. ಅಂದಹಾಗೆ ಮೊಟ್ಟ ಮೊದಲ ಬಾರಿಗೆ 2001ರಲ್ಲಿ ಅಮೆರಿಕದ ಅಂಧ ಪರ್ವತಾರೋಹಿ ಎರಿಕ್ ವೇಯ್ಹೆನ್ಮೇಯರ್ ಮೌಂಟ್ ಎವರೆಸ್ಟ್ ಏರಿದ್ರು. ಇವರ ಬಳಿಕ ಆಸ್ಟ್ರೇಲಿಯಾದ ಆಯಂಡಿ ಹೋಲ್ಜರ್ ಎಂಬುವವರು 2ನೇ ಅಂಧ ಪರ್ವತಾರೋಹಿಯಾಗಿ 2017ರಲ್ಲಿ ಮೌಂಟ್ ಎವರೆಸ್ಟ್ ಏರಿದ್ರು.
Laxmi News 24×7