ಹುಬ್ಬಳ್ಳಿ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು, ಸಮರ್ಥರು ಇದ್ದಾರೋ ಇಲ್ಲೊ ಅನ್ನೊದಕ್ಕಿಂತ, ಇದ್ದವರು ಸಮರ್ಥರಿದ್ದಾರೋ ಇಲ್ಲವೊ, ಅವರನ್ನು ಮುಂದುವರೆಸಬೇಕು ಬೇಡವೋ ಅನ್ನೊ ಪ್ರಶ್ನೆ ಇದೆ ಎಂದು ಕುತೂಹಲ ಕಾರಿ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೆಡ್ ಕ್ವಾರ್ಟರ್ಸ್ ದೆಹಲಿ, ಆ ಕಾರಣಕ್ಕೆ ದೆಹಲಿಯಲ್ಲಿ ಇರುತ್ತೇನೆ. ಮುಖ್ಯಮಂತ್ರಿ ಹುದ್ದೆ ಈಗ ಖಾಲಿ ಇಲ್ಲ ಯಡಿಯೂರಪ್ಪ ನವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ.
ವಯಸ್ಸಿನ ಕಾರಣ ಹೇಳಿ ಅವರನ್ನು ಕೆಳಗಿಳಿಸುವುದು ಸೂಕ್ತವಲ್ಲ ಎಂದು ಹೇಳಿದರು.
ಇನ್ನು ನಮ್ಮ ಆದ್ಯತೆ, ಏನೇ ಇದ್ದರು ಕೊರೊನಾ ನಿಯಂತ್ರಿಸುವುದು. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ.
ನಾನು ಕೇಂದ್ರ ಸಚಿವನಾಗಿರುವುದರಿಂದ ರಾಜ್ಯದ ಹಲವಾರು ಜನ ಭೇಟಿಯಾಗ್ತಾರೆ.
ಕೇಂದ್ರದಿಂದ ಆಗಬೇಕಿರುವ ಕೆಲಸದ ಬಗ್ಗೆ ಕೇಳಿಕೊಂಡು ಬರ್ತಾರೆ ಎಂದು ಸಿ.ಪಿ.ಯೋಗೇಶ್ವರ್ ದೆಹಲಿ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದರು.
Laxmi News 24×7