Breaking News

ʼಲಾಕ್​ ಡೌನ್ʼ​ ವಿಸ್ತರಣೆ ಕುರಿತಂತೆ ಮಹತ್ವದ ಹೇಳಿಕೆ ನೀಡಿದ ಸಚಿವ ಮುರುಗೇಶ್​ ನಿರಾಣಿ

Spread the love

ರಾಜ್ಯದಲ್ಲಿ ಲಾಕ್​ಡೌನ್​ ಆದೇಶದ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಹೀಗಾಗಿ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಲಾಕ್​ಡೌನ್​​ ಆದೇಶವನ್ನ ಮುಂದುವರಿಸಲಿದ್ಯಾ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ. ಇದೇ ವಿಚಾರವಾಗಿ ಕಲಬುರಗಿಯಲ್ಲಿ ಮಾತನಾಡಿದ ಸಚಿವ ಮುರುಗೇಶ್​ ನಿರಾಣಿ ಲಾಕ್​ಡೌನ್​ ಮುಂದುವರಿಕೆ ಬಗ್ಗೆ ಸೂಚನೆ ನೀಡಿದ್ರು.

ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಇಳಿಕೆ ಕಂಡುಬರ್ತಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕನ್ನ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗ್ತಿದೆ. ಸದ್ಯದ ಪರಿಸ್ಥಿತಿ ನೋಡ್ತಿದ್ರೆ ಲಾಕ್​ಡೌನ್​ ಮುಂದುವರಿಸೋದೇ ಉತ್ತಮ ಎನಿಸ್ತಿದೆ. ಈ ಬಗ್ಗೆ ಸಿಎಂ ಯಡಿಯೂರಪ್ಪರಿಗೂ ಮನವಿ ಮಾಡಿದ್ದೇನೆ. ಇನ್ನೂ ಹತ್ತು ದಿನಗಳ ಲಾಕ್​ಡೌನ್​ ಅವಧಿ ವಿಸ್ತರಿಸಿದ್ರೆ ಉತ್ತಮ ಅನ್ನೋದು ನನ್ನ ಅಭಿಪ್ರಾಯವಾಗಿದೆ ಎಂದು ಹೇಳಿದ್ರು.

ಇನ್ನು ರಾಜ್ಯದಲ್ಲಿ ಆಕ್ಸಿಜನ್​ ಅಭಾವದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವ್ರು, ರಾಜ್ಯದಲ್ಲಿ ಪ್ರಾಣವಾಯುವಿನ ಕೊರತೆ ನೀಗಿಸಲು ಗಣಿ ಇಲಾಖೆಯಿಂದ 10 ಟ್ಯಾಂಕರ್​ ನೀಡ್ತಿದ್ದೇವೆ. ಹತ್ತು ದಿನದಲ್ಲಿ ಪ್ರತಿ ವಿಭಾಗಕ್ಕೆ ಎರಡೆರಡು ಆಕ್ಸಿಜನ್​ ಟ್ಯಾಂಕರ್​ ನೀಡಲಾಗುತ್ತದೆ. ಮೂರನೇ ಅಲೆಗೆ ಬೇಕಾದ ಎಲ್ಲಾ ಕ್ರಮಗಳನ್ನ ನಾವು ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದ್ರು


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ