ಬೆಂಗಳೂರು: ‘ಬಿಗ್ ಬಾಸ್ – ಸೀಸನ್ 8’ ರಿಯಾಲಿಟಿ ಶೋ ರದ್ದಾಗಿದೆ. ಎಲ್ಲ ಸ್ಪರ್ಧಿಗಳು ಅವರವರ ಮನೆ ತಲುಪಿದ್ದಾರೆ. ಒಂದಷ್ಟು ಮಂದಿ ಮನೆಯಿಂದ ಹೊರಬಂದು ಕೈಲಾದ ಸಹಾಯಕ್ಕೆ ಧುಮುಕಿದ್ದಾರೆ. ಇನ್ನು ಕೆಲವರು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಪ್ರಶಾಂತ್ ಸಂಬರಗಿ ‘ಬಿಗ್ ಬಾಸ್’ನಿಂದ ಹೊರಬರುತ್ತಿದ್ದಂತೆ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರಂತೆ!
ಈ ಪೈಕಿ ಮೊದಲನೆಯದು ಹಂಸಲೇಖ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಇದಲ್ಲದೆ, ರವಿ ಶ್ರೀವತ್ಸ ನಿರ್ದೇಶನದ ಮತ್ತೊಂದು ಚಿತ್ರ ಮತ್ತು ಎನ್ ಕುಮಾರ್ ನಿರ್ಮಾಣ ಮಾಡಲಿರುವ ಚಿತ್ರದಲ್ಲಿಯೂ ಪ್ರಶಾಂತ್ ಸಂಬರಗಿ ಪ್ರಮುಖ ಪಾತ್ರವೊಂದನ್ನು ಮಾಡಲಿದ್ದಾರೆ. ಅಷ್ಟೇ ಅಲ್ಲ, ಅವರೆಲ್ಲರೂ ಮುಂಗಡ ಚೆಕ್ ಸಹ ನೀಡಿದ್ದಾರೆ. ‘ರವಿ ಶ್ರೀವತ್ಸ ಜತೆಗೆ ಈ ಮೊದಲೇ ಸಿನಿಮಾ ಒಪ್ಪಿಕೊಂಡಿದ್ದೆ. ಇದೀಗ ‘ಬಿಗ್ ಬಾಸ್’ನಿಂದ ಬಂದ ಬಳಿಕ ಆ ಸಿನಿಮಾ ಸೇರಿ ಮತ್ತೆರಡು ಚಿತ್ರಗಳು ಅಧಿಕೃತವಾಗಿವೆ. ಜಾಹೀರಾತುಗಳಿಂದಲೂ ಅವಕಾಶ ಬಂದಿವೆ. ಕೋವಿಡ್ ಬಿಕ್ಕಟ್ಟು ಕಡಿಮೆ ಆಗುತ್ತಿದ್ದಂತೆ ಆ ಎಲ್ಲ ಕೆಲಸಗಳು ಶುರುವಾಗಲಿವೆ’ ಎನ್ನುತ್ತಾರೆ. ಇನ್ನುಳಿದಂತೆ ಅವಕಾಶ ಸಿಕ್ಕರೆ ಮತ್ತೆ ‘ಬಿಗ್ ಬಾಸ್’ ಶೋಗೆ ಹೋಗುವ ಇಂಗಿತವನ್ನೂ ಪ್ರಶಾಂತ್ ವ್ಯಕ್ತಪಡಿಸುತ್ತಾರೆ.
Laxmi News 24×7