ಬೆಳಗಾವಿ : ಪ್ರತಿಭಟನೆ ನಡೆಸುತ್ತಿರುವ ರೈತರ ಬಳಿ ಇದುವರೆಗೂ ಪ್ರಧಾನಿ ಮೋದಿ ಭೇಟಿ ನೀಡಿಲ್ಲ, ಸೆಲೆಬ್ರಿಟಿಗಳ ಬರ್ಥ್ ಡೇ ಗೆ ವಿಶ್ ಮಾಡಲು ಸಮಯ ಇದೆ, ಆದರೆ ರೈತರ ಬಳಿ ಬರಲು ಪ್ರಧಾನಿ ಮೋದಿಗೆ ಸಮಯ ಇಲ್ಲ ಎಂದು ‘ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಏಪ್ರಿಲ್ 17 ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಯಳ್ಳೂರು ಗ್ರಾಮದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಶುರುವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಜೊತೆ ಗ್ಯಾಸ್ ಬೆಲೆ ಏರಿಕೆ ತಡೆಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಜನಪರ ಸರ್ಕಾರ ಬೇಕು. ಯಾವುದೇ ಅದಾನಿಗಾಗಲಿ, ಅಂಬಾನಿಗಾಗಲಿ ಸರ್ಕಾರ ಇರಬಾರದದು, ದೆಹಲಿ ಸರ್ಕಾರ ಕೇವಲ ಎರಡ್ಮೂರು ಜನರಿಗಾಗಿ ನಡೆಯುತ್ತಿದೆ ಎಂದು ವಾಗ್ಧಾಳಿ ನಡೆಸಿದರು.
ರೈತರ ಬಳಿ ಬರಲು ಪ್ರಧಾನಿ ಮೋದಿಗೆ ಸಮಯ ಇಲ್ಲ, ರಾಮ ಮಂದಿರ ನಿರ್ಮಾಣದಿಂದ ರಾಮರಾಜ್ಯ ಆಗಲ್ಲ ಎಂದು ಸತೀಶ್ ಜಾರಕಿಹೊಳಿ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
Laxmi News 24×7