Breaking News

ಮೀಸಲು ಸವಾಲು : ಇನ್ನಷ್ಟು ಜಾತಿಗಳಿಂದ ಮುಖ್ಯಮಂತ್ರಿಗೆ ಹೆಚ್ಚಿದ ಒತ್ತಡ

Spread the love

ಬೆಂಗಳೂರು: ರಾಜ್ಯದಲ್ಲಿ ಮೀಸಲಾತಿ ಕೂಗು ಬಲವಾಗಿದೆ. ಕುರುಬ ಮತ್ತು ಪಂಚಮಸಾಲಿ ಜನಾಂಗದವರು ಪಾದಯಾತ್ರೆ ನಡೆಸಿ ಹೋರಾಟ ತೀವ್ರಗೊಳಿಸಿದ್ದಾರೆ. ಇದರ ಮಧ್ಯೆ ಇನ್ನಷ್ಟು ಜಾತಿಗಳು ವಿವಿಧ ಬೇಡಿಕೆಗಳೊಂದಿಗೆ ಹೋರಾಟಕ್ಕಿಳಿಯಲು ಸಜ್ಜಾಗಿವೆ. ಮೀಸಲಾತಿಯು ರಾಜ್ಯ ಸರಕಾರಕ್ಕೆ ಬಿಡಿಸಲಾರದ ಕಗ್ಗಂಟಾಗಿ ಪರಿಣಮಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಯಾರ ಬೇಡಿಕೆ ಏನು?
ಪಂಚಮಸಾಲಿ
ವೀರಶೈವ ಲಿಂಗಾಯತ ಸಮುದಾಯದ ಒಂದು ಒಳ ಪಂಗಡ. ಸದ್ಯ 3ಬಿ ಪ್ರವರ್ಗದಲ್ಲಿದೆ. ಈಗ 2ಎಗೆ ಸೇರಿಸಿ ಎಂಬುದು ಆಗ್ರಹ. ಸರಕಾರವು ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಹಿಂದುಳಿದ ವರ್ಗಗಳ ಆಯೋಗಕ್ಕೆ ನಿರ್ದೇಶನ ನೀಡಿದೆ.

ಕುರುಬ
ಹಿಂದುಳಿದ ವರ್ಗಗಳಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯ. ಸದ್ಯ 2ಎಯಲ್ಲಿದೆ. ಎಸ್ಟಿ ಸಮುದಾಯಕ್ಕೆ ಸೇರಿಸುವಂತೆ ಆಗ್ರಹ. ಸರಕಾರ ಕುಲ ಶಾಸ್ತ್ರೀಯ ಅಧ್ಯಯನಕ್ಕೆ ಆದೇಶ ನೀಡಿದೆ. ಕಾಡುಕುರುಬ, ಜೇನು ಕುರುಬ, ಗೊಂಡ ಸಮುದಾಯಗಳು ಈಗಾಗಲೇ ಎಸ್ಟಿಯಡಿ ಇವೆ.

ವಾಲ್ಮೀಕಿ
ವಾಲ್ಮೀಕಿ ಸಮುದಾಯ ಈಗಿರುವ ಮೀಸಲನ್ನು ಶೇ.3 ರಿಂದ 7.5ಕ್ಕೆ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದೆ. ಈಗಾಗಲೇ ನ್ಯಾ| ನಾಗಮೋಹನದಾಸ್‌ ನೇತೃತ್ವದ ಆಯೋಗ ವರದಿ ನೀಡಿದ್ದು, ಶೇ. 7.5ರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದೆ. ಶೀಘ್ರವೇ ಮೀಸಲಾತಿ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

ಗಾಣಿಗ
ವೀರಶೈವ ಲಿಂಗಾಯತದ ಒಳ ಪಂಗಡಗಳಲ್ಲಿ ಒಂದಾಗಿದ್ದು, ಪ್ರಸಕ್ತ ಪ್ರವರ್ಗ 2ಎಯಲ್ಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಗಾಣಿಗ ಎಂದು ನಮೂದಿಸಿದರೆ, ಪ್ರವರ್ಗ 3ಬಿ ಮೀಸಲಾತಿ ದೊರೆಯು ತ್ತದೆ. ಹಿಂದೂ ಗಾಣಿಗ ಎಂದು ನಮೂದಿಸಿದರೆ ಪ್ರವರ್ಗ 2ಎಯಲ್ಲಿ ಸಿಗುತ್ತಿದೆ. ಎಸ್ಟಿಗೆ ಸೇರಿಸುವಂತೆ ಆಗ್ರಹವಿದೆ.

ಗಂಗಾಮತಸ್ಥರು
ಮೊಗವೀರ, ಅಂಬಿಗ, ಬೆಸ್ತ, ಸುಣಗಾರ, ವಾಲಿ ಕಾರ, ಕೊಲಿಕಾರ, ಕೋಲಿ, ಕಬ್ಬಲಿಗ ಸಹಿತ 39 ಒಳ ಪಂಗಡಗಳಿವೆ. ರಾಷ್ಟ್ರ ಮಟ್ಟದಲ್ಲಿ ಕೋಲಿ ಸಮಾಜ ಎಸ್ಟಿ ಪ್ರವರ್ಗದಲ್ಲಿದೆ. ರಾಜ್ಯ ಸರಕಾರ ಈ ಸಮುದಾಯಗಳನ್ನು ಎಸ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದೆ.

2ಎಗೆ ಮರಾಠ ಬೇಡಿಕೆ
ಮರಾಠ ಸಮುದಾಯ ಪ್ರಸಕ್ತ ಪ್ರವರ್ಗ 3ಬಿಯ ಲ್ಲಿದೆ. ಪ್ರವರ್ಗ 2ಎಗೆ ಸೇರಿಸುವಂತೆ ಬೇಡಿಕೆ ಇದೆ. ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಈ ಬಗ್ಗೆ ಶಿಫಾರಸು ಮಾಡಿದೆ. ಕರಾವಳಿ, ಕೊಡಗು ಜಿಲ್ಲೆಗಳಲ್ಲಿ ಮರಾಠ ಮತ್ತು ಮರಾಠಿ ಹೆಸರಿನಲ್ಲಿರುವ ಸಮುದಾಯವನ್ನು ಎಸ್ಟಿಗೆ ಸೇರಿಸಲಾಗಿದೆ.

ಒಕ್ಕಲಿಗ
ಎರಡನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯ. ಪ್ರಸಕ್ತ ಪ್ರವರ್ಗ 3ಎಯಲ್ಲಿ ಮೀಸಲಾತಿ ಹೊಂದಿದೆ. ಹಿಂದುಳಿದಿರುವಿಕೆ ಆಧಾರದಲ್ಲಿ ಪ್ರವರ್ಗ 2ಎಗೆ ಸೇರಿಸುವಂತೆ ಒತ್ತಾಯವಿದೆ.

ಸವಿತಾ ಸಮಾಜ
ಪ್ರಸ್ತುತ ಪ್ರವರ್ಗ 2ಎಯಲ್ಲಿದೆ. ಶೇ. 15ರಷ್ಟು ಮೀಸಲಾತಿ ಇದ್ದು, ಸವಿತಾ ಸಮಾಜ ಸಹಿತ ವೃತ್ತಿ ಆಧಾರಿತ ಸಮುದಾಯಗಳಿಗೆ ಶೇ. 8ರಷ್ಟು ಮೀಸಲಾತಿ ನೀಡಿ ಪ್ರತ್ಯೇಕ ಪ್ರವರ್ಗ ರಚಿಸಬೇಕು ಎಂಬುದು ಬೇಡಿಕೆ.

ಈಡಿಗ
ಸದ್ಯ ಪ್ರವರ್ಗ 2 ಎಯಲ್ಲಿದೆ. ಪ್ರವರ್ಗ 3ಬಿ ಯಿಂದ 2ಎಗೆ ವರ್ಗಾಯಿಸಬೇಕು ಎಂಬ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮುದಾಯದ ಬೇಡಿಕೆ ಯನ್ನು ಮನ್ನಿಸಬಾರದು ಎಂಬುದು ಆಗ್ರಹ.

ಮಡಿವಾಳ
ಸದ್ಯ ಪ್ರವರ್ಗ 2ಎಯಲ್ಲಿದ್ದು, ಎಸ್ಸಿಗೆ ಸೇರಿಸ ಬೇಕೆಂಬುದು ಬೇಡಿಕೆ. ರಾಜ್ಯ ಸರಕಾರವು ಕೇಂದ್ರ ಶಿಫಾರಸು ಮಾಡಬೇಕಿದೆ.

ಕಳೆದ 70 ವರ್ಷದಲ್ಲಿ ಮೀಸಲಾತಿ ಜಾರಿಯಲ್ಲಿದೆ. ಎಸ್ಸಿ, ಎಸ್ಟಿ, ಒಬಿಸಿಯಲ್ಲಿ ಸಣ್ಣ ಸಣ್ಣ ಜಾತಿಗಳಿವೆ. ಅವರಿಗೆ ಮೀಸಲಾತಿಯೇ ಸಿಕ್ಕಿಲ್ಲ. ಯಾರಾದರೂ ಮೀಸಲಾತಿ ಕೇಳುವವರಿದ್ದರೆ, ಮೊದಲು ಇದುವರೆಗೂ ಯಾರಿಗೆ ಮೀಸಲಾತಿ ಸಿಕ್ಕಿಲ್ಲವೋ ಅವರಿಗೆ ತಲುಪಿಸುವ ಕೆಲಸ ಮಾಡಬೇಕು.
– ನ್ಯಾ| ನಾಗಮೋಹನ ದಾಸ್‌, ನಿವೃತ್ತ ನ್ಯಾಯಮೂರ್ತಿ

ಯಾವುದೇ ಸಮುದಾಯ ತನ್ನ ಬೇಡಿಕೆ ಕೇಳುವುದರಲ್ಲಿ ತಪ್ಪಿಲ್ಲ. ಮೀಸಲಾತಿಯನ್ನು ಸರಕಾರ ಆಯಾ ಸಮುದಾಯದ ಜನಸಂಖ್ಯೆ ಆಧಾರದಲ್ಲಿ ನಿಗದಿ ಮಾಡುತ್ತದೆ.
-ಎನ್‌. ಶಂಕರಪ್ಪ , ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ