Breaking News

ಬ್ರೆಜಿಲ್ ತಲುಪಿದ ಭಾರತದ ಕೋವಿಶೀಲ್ಡ್ : ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಬ್ರೆಜಿಲ್ ಅಧ್ಯಕ್ಷ

Spread the love

ನವದೆಹಲಿ: ಭಾರತ ವಿವಿಧ ದೇಶಗಳಿಗೆ ಕೊರೊನಾ ಲಸಿಕೆ ರಫ್ತು ಮಾಡುತ್ತಿದ್ದು, ಈಗಾಗಲೇ ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್​​, ನೇಪಾಳಗೆ ಲಸಿಕೆ ಕಳುಹಿಸಿಕೊಟ್ಟಿರುವ ಭಾರತ ಇದೀಗ ಬ್ರೆಜಿಲ್​ಗೂ ಕೊವಿಶೀಲ್ಡ್​ ವ್ಯಾಕ್ಸಿನ್ ರವಾನೆ ಮಾಡಿದೆ.

ಕೊವಿಶೀಲ್ಡ್ ಲಸಿಕೆ ಬ್ರೆಜಿಲ್​ಗೆ ತಲುಪಿದ್ದು, ಅಲ್ಲಿನ ಅಧ್ಯಕ್ಷ ಜೈರ್​ ಎ ಬೋಲ್ಸನಾರೋ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಜಾಗತಿಕ ಸಮಸ್ಯೆ ನಿರಾರಣೆ ಮಾಡಲು ಉತ್ತಮ ಪಾಲುದಾರನಾಗಿರುವ ಭಾರತ ಬ್ರೆಜಿಲ್​ಗೆ ಲಸಿಕೆ ರಫ್ತು ಮಾಡಲು ನಮಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಟ್ವೀಟ್​ ಮಾಡಿದ್ದಾರೆ.

ತಮ್ಮ ಟ್ವೀಟ್ ಜೊತೆಗೆ ಬ್ರೆಜಿಲ್ ಅಧ್ಯಕ್ಷರು ಹನುಮಂತ ಸಂಜೀವಿನಿ ಪರ್ವತವನ್ನು ಹೊತ್ತುಕೊಂಡು ಹೋಗುತ್ತಿರುವ ಫೋಟೋ ಶೇರ್ ಮಾಡಿದ್ದಾರೆ.

ಭಾರತದಲ್ಲಿ ಮೊದಲ ಹಂತದಲ್ಲಿ 3 ಕೋಟಿ ಜನರಿಗೆ ಈ ವ್ಯಾಕ್ಸಿನ್ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ.

 


Spread the love

About Laxminews 24x7

Check Also

ಕರಾವಳಿಯಲ್ಲಿ ಜನಪದ ದೀಪಾವಳಿ: ನರಕಾಸುರ ವಧೆ ನೆನಪಿಸುವ ಮುಳ್ಳಮುಟ್ಟೆ ಆಚರಣೆ

Spread the loveಕಾಪು: ತುಳುನಾಡು ಹಲವಾರು ಆಚರಣೆ, ಸಂಸ್ಕೃತಿ ಮತ್ತು ಸಂಸ್ಕಾರಗಳ ತವರೂರು. ಇಲ್ಲಿ ನಡೆಯುವ ಪ್ರತಿಯೊಂದು ಹಬ್ಬ, ಆಚರಣೆಗಳಿಗೂ ಅದರದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ