Breaking News
Home / Uncategorized / ಮಾಸ್ಟರ್ ಸಿನಿಮಾ ಲಿಂಕ್ : 25 ಕೋಟಿ ರೂ. ಪರಿಹಾರಕ್ಕೆ ನಿರ್ಮಾಪಕರು ಬೇಡಿಕೆ ಇಟ್ಟಿದ್ದಾರೆ

ಮಾಸ್ಟರ್ ಸಿನಿಮಾ ಲಿಂಕ್ : 25 ಕೋಟಿ ರೂ. ಪರಿಹಾರಕ್ಕೆ ನಿರ್ಮಾಪಕರು ಬೇಡಿಕೆ ಇಟ್ಟಿದ್ದಾರೆ

Spread the love

ದಳಪತಿ’ ವಿಜಯ್ ಮತ್ತು ‘ಮಕ್ಕಳ್ ಸೆಲ್ವನ್‌’ ವಿಜಯ್ ಸೇತುಪತಿ ಒಟ್ಟಿಗೆ ಅಭಿನಯಿಸಿರುವ ‘ಮಾಸ್ಟರ್‌’ ಸಿನಿಮಾ ಜನವರಿ 13ರಂದು ತೆರೆಕಂಡು ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಶೇ.50 ಆಸನ ಭರ್ತಿಗೆ ಮಾತ್ರ ಅವಕಾಶ ಇದ್ದರೂ, ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆಯುತ್ತಿದೆ. ಈ ಮಧ್ಯೆ ಪೈರಸಿ ಕಾಟವೂ ಚಿತ್ರಕ್ಕೆ ಇದೆ. ಸದ್ಯ ಇದರ ವಿರುದ್ಧ ನಿರ್ಮಾಪಕರು ಹೋರಾಟಕ್ಕೆ ನಿಂತಿದ್ದಾರೆ. ಈ ಪ್ರಕರಣವೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ! ಜೊತೆಗೆ 25 ಕೋಟಿ ರೂ. ಪರಿಹಾರಕ್ಕೆ ನಿರ್ಮಾಪಕರು ಬೇಡಿಕೆ ಇಟ್ಟಿದ್ದಾರೆ.’ಮಾಸ್ಟರ್‌’ ಸಿನಿಮಾ ಬಿಡುಗಡೆ ಸನಿಹದಲ್ಲಿದ್ದಾಗ ಒಂದಷ್ಟು ಕ್ಲಿಪಿಂಗ್‌ಗಳು ಸೋರಿಕೆಯಾಗಿದ್ದವು. ಆಗ ತಂಡ ಪೈರಸಿಯನ್ನು ಮಾಡದಂತೆ, ಅಂಥ ಬೆಳವಣಿಗೆ ಕಂಡುಬಂದಲ್ಲಿ ನಮಗೆ ತಿಳಿಸುವಂತೆ ಮನವಿ ಮಾಡಿತ್ತು.ಜೊತೆಗೆ ಪೊಲೀಸ್‌ ಠಾಣೆಗೆ ದೂರನ್ನೂ ನೀಡಿತ್ತು. ಇದೀಗ ಸಿನಿಮಾದ ದೃಶ್ಯಗಳನ್ನು ಸೋರಿಕೆ ಮಾಡಿದ್ದು ಯಾರು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಚಿತ್ರವನ್ನು ವಿದೇಶದಲ್ಲಿ ರಿಲೀಸ್ ಮಾಡುವುದಕ್ಕೆ ಒಂದು ಡಿಜಿಟಲ್ ಕಂಪನಿ ಜೊತೆ ಒಪ್ಪಂದ ಆಗಿತ್ತು. ಆ ಸಲುವಾಗಿ ಅವರಿಗೆ ಸಿನಿಮಾದ ಕಾಪಿಯನ್ನು ನೀಡಲಾಗಿತ್ತು.

ಆದರೆ, ಅಲ್ಲಿನ ಓರ್ವ ಸಿಬ್ಬಂದಿ ಸಿನಿಮಾದ ದೃಶ್ಯಗಳನ್ನು ಲೀಕ್ ಮಾಡಿದ್ದರು. ಅದೀಗ ತನಿಖೆಯಿಂದ ಬಯಲಾಗಿದೆ!ಇಂಥ ಕಷ್ಟಕಾಲದಲ್ಲಿ ಸಿನಿಮಾವನ್ನು ಧೈರ್ಯದಿಂದ ಚಿತ್ರಮಂದಿರದಲ್ಲಿ ರಿಲೀಸ್ ಮಾಡಿರುವುದೇ ದೊಡ್ಡ ಸಾಹಸವಾಗಿದೆ. ಹೀಗಿರುವಾಗ ಚಿತ್ರದ ದೃಶ್ಯಗಳನ್ನು ಲೀಕ್ ಮಾಡಿರುವುದು ‘ಮಾಸ್ಟರ್’ ತಂಡಕ್ಕೆ ಬೇಸರ ಮೂಡಿಸಿದೆ. ಹಾಗಾಗಿ, ಚಿತ್ರದ ಸಹ ನಿರ್ಮಾಪಕ, ಸೆವೆನ್ ಸ್ಕ್ರೀನ್ ಸ್ಟುಡಿಯೋದ ಲಲಿತ್‌ ಕುಮಾರ್‌ ಆ ಡಿಜಿಟಲ್‌ ಸಂಸ್ಥೆಗೆ ನೋಟಿಸ್ ನೀಡಿದ್ದಾರೆ.

ದೃಶ್ಯಗಳನ್ನು ಸೋರಿಕೆ ಮಾಡಿದ ತಪ್ಪಿಗಾಗಿ 25 ಕೋಟಿ ರೂ. ಪರಿಹಾರ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ!ಬರೀ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್‌ ಅಲ್ಲ, ಇಡೀ ಜಗತ್ತಿನ ಬಾಕ್ಸ್ ಅಫೀಸ್‌ನಲ್ಲಿ ಕಳೆದ ವಾರಾಂತ್ಯ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ‘ಮಾಸ್ಟರ್‌’ ಹೊಸ ದಾಖಲೆ ಬರೆದಿದೆ. ಏಳು ದಿನಗಳಲ್ಲಿ ತಮಿಳುನಾಡಿನಲ್ಲಿ 81 ಕೋಟಿ ರೂ., ಆಂಧ್ರ ಪ್ರದೇಶ-ತೆಲಂಗಾಣದಲ್ಲಿ 20 ಕೋಟಿ ರೂ., ಕರ್ನಾಟಕದಲ್ಲಿ 14 ಕೋಟಿ ರೂ., ಕೇರಳದಿಂದ 7.5 ಕೋಟಿ ರೂ. ಮತ್ತು ಇತರೆ ರಾಜ್ಯಗಳಿಂದ 2.5 ಕೋಟಿ ಸಂಗ್ರಹ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಅಲ್ಲಿಗೆ ಭಾರತದ ಗಲ್ಲಾಪೆಟ್ಟಿಗೆಯಿಂದಲೇ ಈ ಚಿತ್ರದ ನಿರ್ಮಾಪಕರಿಗೆ ಬರೋಬ್ಬರಿ 125 ಕೋಟಿ ರೂ.

ಆದಾಯ ಸಿಕ್ಕಿದೆ. ವಿದೇಶದ ಗಳಿಕೆಯನ್ನೂ ಸೇರಿಸಿದರೆ ಒಟ್ಟು 150 ಕೋಟಿ ರೂ. ಆಗುತ್ತದೆ ಎಂಬ ಮಾತು ಬಾಕ್ಸ್ ಆಫೀಸ್‌ ಮೂಲಗಳಿಂದ ಕೇಳಿಬಂದಿದೆ.


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ