Breaking News

ಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿ ಅದರಲ್ಲಿಯೂ ಕ್ಷೇತ್ರದ ಮನೆಯ ಮಗಳಾಗಿ ಸಾರ್ಥಕತೆಯನ್ನು ಕಂಡಿದ್ದೇನೆ ” :ಲಕ್ಷ್ಮೀ ಹೆಬ್ಬಾಳಕರ

Spread the love

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿ ಅದರಲ್ಲಿಯೂ ಕ್ಷೇತ್ರದ ಮನೆಯ ಮಗಳಾಗಿ ಸಾರ್ಥಕತೆಯನ್ನು ಕಂಡಿದ್ದೇನೆ “

ಸುಮಾರು ವರ್ಷಗಳಿಂದ ಅಪಘಾತ ವಲಯ (Accident Zone) ಅಂತಾನೇ ಕರೆಯಲ್ಪಡುವ ಚಿನ್ನವಾರಿ ಗುಡ್ಡ (ಕೆಕೆ ಕೊಪ್ಪ) ಈ ಪ್ರದೇಶದಲ್ಲಿ ತಡೆಗೊಡೆಗಳಿಲ್ಲದೆ ಸುಮಾರು ಅಪಘಾತಗಳು ಸಂಭವಿಸಿ ಕೆಲವರು ಕೈ ಕಾಲುಗಳನ್ನು ಕಳೆದುಕೊಂಡು ಕತ್ತಲೆಯ ಜೀವನವನ್ನು ಅನುಭವಿಸುತ್ತಿದ್ದಾರೆ, ಹಾಗೂ ಸುಮಾರು ರೈತರು ಟ್ರಾಕ್ಟರ್ ಮೂಲಕ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವ ಸಂದರ್ಭದಲ್ಲಿ ಅನೇಕ ಟ್ರಾಕ್ಟರ್ ಗಳು ಉರುಳಿ ಬಿದ್ದು ರೈತರು ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ.

ಈ ಚಿನ್ನವಾರಿ ಗುಡ್ಡ ಪ್ರದೇಶವು ಮುಖ್ಯ ರಸ್ತೆಯ ಮೇಲಿದ್ದು, ಅನೇಕ ಗ್ರಾಮಗಳಾದ ಕೆಕೆ ಕೊಪ್ಪ, ಹಲಗಿಮರ್ಡಿ, ನಾಗೇರಹಾಳ, ನಾಗೇನಹಟ್ಟಿ, ಬಡಾಲ್ ಅಂಕಲಗಿ, ಹುಲಿಕವಿ ಹಾಗೂ ಇನ್ನಿತರ ಗ್ರಾಮಗಳ ಜನರಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.

ಈ ಎಲ್ಲ ಗ್ರಾಮಗಳ ಜನರ ಬಹುಮುಖ್ಯ ಬೇಡಿಕೆ ಸರಿ ಸುಮಾರು ನಲವತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಂತಹ ತಡೆಗೊಡೆ ಹಾಗೂ ಸುಸಜ್ಜಿತ ರಸ್ತೆ ನಿರ್ಮಾಣವಾಗಬೇಕೆನ್ನುವುದಾಗಿತ್ತು.

ಈ ಬೇಡಿಕೆ ನನ್ನ ಗಮನಕ್ಕೆ ಬಂದ ತಕ್ಷಣ ತ್ವರಿತವಾಗಿ ಈ ಎಲ್ಲ ಗ್ರಾಮಗಳ ಜನರ ಸಂಕಷ್ಟಗಳಿಗೆ ಸ್ಪಂದಿಸಿ, ಭವಿಷ್ಯದಲ್ಲಿ ಯಾವುದೇ ಪ್ರಾಣಹಾನಿಯಾಗವುದು ಬೇಡ ಎಂದು ಮನಗಂಡು ಸುಮಾರು ನಾಲ್ಕೂವರೆ ಕೋಟಿ ರೂ,ಗಳ ವೆಚ್ಚದಲ್ಲಿ ಕೋಳಿವಾಡ ಗ್ರಾಮದಿಂದ ಕೆಕೆ ಕೊಪ್ಪ ಗ್ರಾಮದವರೆಗೆ ವರೆಗೆ ರಸ್ತೆಯ ಡಾಂಬರೀಕರಣ ಹಾಗೂ ತಡೆಗೊಡೆಗಳನ್ನು ನಿರ್ಮಿಸಿಕೊಟ್ಟಿದ್ದೇನೆ.

ಈಗ ಈ ರಸ್ತೆ ಮೇಲೆ ಎಲ್ಲ ಗ್ರಾಮಗಳ ಜನರ ಯಾವುದೇ ಭಯವಿಲ್ಲದೆ ತಮ್ಮ ತಮ್ಮ ಗ್ರಾಮಗಳಿಗೆ ಸರಾಗ ಹಾಗೂ ಸುಗಮವಾಗಿ ಸಾಗುತ್ತಿರುವುದನ್ನು ನೋಡಿ ಮನಸ್ಸಿಗೆ ತುಂಬಾ ಖುಷಿ ಎನಿಸುತ್ತಿದೆ.

ನಾನು ಶಾಸಕಿಯಾಗಿ ಕೈಗೊಳ್ಳುವಂತಹ ಕೆಲಸಗಳು ಹಾಗೂ ತೆಗೆದುಕೊಳ್ಳುವ ಜವಾಬ್ದಾರಿಗಳು ನನಗೆ ತೃಪ್ತಿಯನ್ನು ತಂದುಕೊಟ್ಟಿವೆ. ಸದಾಕಾಲವೂ ಹೀಗೆಯೇ ನಿಮ್ಮ ಸೇವೆಯಲ್ಲಿ ನಿಮ್ಮ ಮನೆಯ ಮಗಳಾಗಿ ಸದಾ ನಿಮ್ಮ ಜೊತೆ ನಿಮ್ಮ ಲಕ್ಷ್ಮೀ ಹೆಬ್ಬಾಳಕರ


Spread the love

About Laxminews 24x7

Check Also

ತುಮಕೂರು: ಮುಂಬೈ ಮಾದರಿ ಗಣಪತಿ ವಿಗ್ರಹಗಳಿಗೆ ಹೆಚ್ಚು ಬೇಡಿಕೆ

Spread the loveತುಮಕೂರು: 2025ರ ಚೌತಿ ಬಂದೇ ಬಿಡ್ತು. ಭಕ್ತರು ವಿಭಿನ್ನ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಮುಂಬೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ