Breaking News

210 ಗ್ರಾಂನ 3 ಚಿನ್ನದ ಕಿರೀಟ ಗಿಫ್ಟ್ ನೀಡಿದ ಗ್ರಾಮಸ್ಥರು

Spread the love

ವಿಜಯಪುರ: ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ, ಮಾಜಿ ಸಚಿವ ಎಂಬಿ ಪಾಟೀಲ್ ಹಾಗೂ ಶಿವಾನಂದ್ ಪಾಟೀಲ್ ಗೆ ವಿಜಯಪುರದ ಕಾರಜೋಳ ಗ್ರಾಮಸ್ಥರು ಚಿನ್ನದ ಕಿರೀಟಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕಾರಜೋಳದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದ ವೇಳೆ ಈ ಮೂವರಿಗೆ 210 ಗ್ರಾಂ ನ ಮೂರು ಚಿನ್ನದ ಕಿರೀಟಗಳನ್ನು ಗ್ರಾಮಸ್ಥರು ಗಿಫ್ಟ್ ಮಾಡಿದ್ದಾರೆ. ಆದರೆ ಮೂವರು ನಾಯಕರು ಕೂಡ ಚಿನ್ನದ ಕಿರೀಟ ಗಿಫ್ಟ್ ಪಡೆಯಲು ನಿರಾಕರಿಸಿದ್ದಾರೆ.ಒತ್ತಾಯ ಪೂರ್ವಕವಾಗಿ ಗ್ರಾಮಸ್ಥರು ನಾಯಕರಿಗೆ ಕಿರೀಟ ತೊಡಿಸಿದ್ದಾರೆ. ಕಿರೀಟ ಹಾಕಿದ್ದಕ್ಕೆ ಬೇಸರಗೊಂಡು ಶಿವಾನಂದ ಪಾಟೀಲ್ ಸಮಾರಂಭದಿಂದಲೇ ಹೊರನಡೆದ ಪ್ರಸಂಗವೂ ನಡೆದಿದೆ.

ವಿಜಯಪುರದ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರವಾಹ, ಕೋವಿಡ್ ಸಂಕಷ್ಟದ ಮಧ್ಯೆಯೂ ಗ್ರಾಮಸ್ಥರು ಚಿನ್ನದ ಕಿರೀಟ ನೀಡಿದ ಕಾರಣಕ್ಕೆ ಶಿವನಾಂದ ಪಾಟೀಲ್ ಬೇಸರಗೊಂಡು ಹೊರನಡೆದಿದ್ದಾರೆ ಎನ್ನಲಾಗಿದೆ.


Spread the love

About Laxminews 24x7

Check Also

ದೇವೇಗೌಡರ ಆರೋಗ್ಯ ಚೇತರಿಕೆಗಾಗಿ 108 ತೆಂಗಿನಕಾಯಿ ಒಡೆದು ಹರಕೆ ಹೊತ್ತ ಜೆಡಿಎಸ್ ಕಾರ್ಯಕರ್ತರು

Spread the love ಚಿಕ್ಕಬಳ್ಳಾಪುರ: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ