ತಮಕೂರು: ಬಿಜೆಪಿಯವರೂ ನನ್ನನ್ನು ಮುಖ್ಯಮಂತ್ರಿ ಮಾಡಲೂ ಮುಂದಾಗಿದ್ದರು ಕೇಂದ್ರದಿಂದ ನರೇಂದ್ರ ಮೋದಿಯವರೇ ಆಫರ್ ಮಾಡಿದ್ದರು ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಹೇಳಿದ್ದಾರೆ.
ಇಂದು ತುಮಕೂರಿನ ಶಿರಾದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಷಣ ಮಾಡಿದ ಹೆಚ್‍ಡಿಕೆ, ಮೋದಿಯವರೇ ಮುಖ್ಯಮಂತ್ರಿಯಾಗಲು ನನಗೆ ಆಫರ್ ನೀಡಿ. ಐದು ವರ್ಷ ನಿನ್ನನ್ನು ಯಾರೂ ಟಚ್ ಮಾಡಲ್ಲ ಅಂದಿದ್ದರು. ಆದರೆ ಕಾಂಗ್ರೆಸ್ಸಿನವರ ಸಂಕುಚಿತ ಮನೋಭಾವದಿಂದ ರಾಜ್ಯದಲ್ಲಿ ದರಿದ್ರ ಸರ್ಕಾರ ಬಂದಿದೆ ಎಂದು ವಿಪಕ್ಷಗಳ ಮೇಲೆ ಕಿಡಿಕಾರಿದರು.ತಹಶೀಲ್ದಾರ್ ಗುರುಮೂರ್ತಿಗೆ ಯಲಹಂಕದಲ್ಲಿ ಪೋಸ್ಟಿಂಗ್ ಮಾಡುವಂತೆ ನಾನು ಸಿಎಂ ಆದಾಗ ಹೇಳಿದ್ದರು. 1 ಕೋಟಿ ರೂ. ಲಂಚ ಕೊಡುವ ಆಮಿಷ ಒಡಿದ್ದರು. ನಾನು ಒಪ್ಪಿಕೊಂಡಿರಲಿಲ್ಲ. ಇಂದು ಬಿಜೆಪಿ ಅವರು ಆತನಿಗೆ ಪೋಸ್ಟಿಂಗ್ ಕೊಟ್ಟಿದ್ದಾರೆ.
ಬಿಜೆಪಿಗೆ ಒಂದೂವರೆ ಕೋಟಿ ಪೇಮೆಂಟ್ ಆಗಿದೆ. ಅಲ್ಲಿಯ ಶಾಸಕರಿಗೆ 50 ಲಕ್ಷ ರೂ. ಹಣ ಹೋಗಿದೆ. ಇಂಥಹ ತಹಶೀಲ್ದಾರನ ಅಮಾನತಿಗೆ ಈಗ ಶಿಪಾರಸ್ಸು ಮಾಡಲಾಗಿದೆ. ಕೆ.ಆರ್.ಪೇಟೆಯಲ್ಲಿ ಗೆದ್ದಂತೆ ಇಲ್ಲೂ ಗೆಲ್ಲುತ್ತೇವೆ ಎಂದು ಬಂದಿದ್ದಾರೆ. ಲೂಟಿ ಸರ್ಕಾರದವರು ಶಿರಾ ಗೆಲ್ಲಲು ಮುಂದಾಗಿದ್ದಾರೆ ಎಂದು ಸಿಎಂ ಪುತ್ರ ವಿಜಯೇಂದ್ರಗೆ ಟಾಂಗ್ ನೀಡಿದರು.
Laxmi News 24×7