Breaking News

ರಿಯಾಂಕ್ ಖರ್ಗೆ ಅವರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಆದ್ದರಿಂದ ಸದನ ಸಭೆಯಿಂದ ದೂರ ಉಳಿಯಲು ಹೇಳಿ : ಮಾಧುಸ್ವಾಮಿ

Spread the love

ಬೆಂಗಳೂರು: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಆದ್ದರಿಂದ ಸದನ ಸಭೆಯಿಂದ ದೂರ ಉಳಿಯಲು ಹೇಳಿ ಎಂದು ಡಿಸಿಎಂ ಮಾಧುಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಘಟನೆ ಇಂದು ಸದನದಲ್ಲಿ ನಡೆಯಿತು.

ವಿಧಾನಸಭೆಯಲ್ಲಿ ಮಾತನಾಡಿದ ಚಿವ ಮಾಧುಸ್ವಾಮಿ ಅವರು, ಪ್ರಿಯಾಂಕ್ ಖರ್ಗೆ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸಭೆಯಿಂದ ದೂರ ಉಳಿಯಲು ಹೇಳಿ ಎಂದು ಮನವಿ ಮಾಡಿದರು. ಆದರೆ ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಇಲ್ಲ ಅವರ ವರದಿ ನೆಗೆಟಿವ್ ಬಂದಿದೆ ಎಂದು ಸ್ಪಷ್ಟಪಡಿಸಿದರು.

ಮಾಧುಸ್ವಾಮಿ ಅವರ ಮನವಿಗೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ ಅವರು, ನನಗೆ ನೆಗೆಟಿವ್ ರಿಪೋರ್ಟ್ ಬಂದಿದೆ. ನನಗೂ ಜವಾಬ್ದಾರಿ ಇದೆ. ಹೀಗಾಗಿಯೇ ನಾನು ಮೊದಲ ಎರಡಯ ದಿನ ಸಭೆಯಿಂದ ದೂರವಿದ್ದೆ. ಒಂದು ಸಾರಿ ಪಾಸಿಟಿವ್, ಎರಡು ಬಾರಿ ನೆಗೆಟಿವ್ ಬಂತು. ಆ ಕಾರಣಕ್ಕಾಗಿ ಸ್ವಲ್ಪ ಗೊಂದಲ ಆಗಿತ್ತು, ನಾನು ನೆಗೆಟಿವ್ ರಿಪೋರ್ಟ್ ಬಂದಿರೋದನ್ನು ಹಾಕಿರಲಿಲ್ಲ ಅಷ್ಟೇ ಎಂದರು.

ಸ್ಪೀಕರ್ ಕಾಗೇರಿ ಅವರು ಸದನಕ್ಕೆ ಮಾಹಿತಿ ನೀಡಿ, ಪ್ರಿಯಾಂಕ ಖರ್ಗೆ ಅವರದ್ದು ಕೊರೊನಾ ನೆಗೆಟಿವ್ ರಿಪೋರ್ಟ್ ನನ್ನ ಬಳಿ ಇದೆ. ಡೋಂಟ್ ವರಿ ಎಂದು ಸ್ಪಷ್ಟಪಡಿಸಿದರು.

ಮೊದಲು ನನಗೆ ಪಾಸಿಟಿವ್ ಎಂದು ವರದಿ ಕೊಟ್ಟಿದ್ದರು. ನಂತರ 48 ಗಂಟೆಗಳ ಬಳಿಕ ನೆಗೆಟಿವ್ ಬಂತು. ಮತ್ತೆ ಅನುಮಾನ ಬಂದು ವೈದ್ಯರನ್ನು ಸಂಪರ್ಕಿಸಿದೆ. ಮತ್ತೆ ಟೆಸ್ಟ್ ಮಾಡಿಸಿದ ಸಂದರ್ಭದಲ್ಲಿ ನೆಗೆಟಿವ್ ಬಂತು. ಆ ವೇಳೆ ವೈರಲಾಜಿಸ್ಟ್ ಅವರನ್ನು ಭೇಟಿ ಮಾಡಿ ಆರ್ ಟಿಪಿಸಿಆರ್ ಟೆಸ್ಟ್ ಗೆ ಮಾಡಿಸಿದೆ. ಅಲ್ಲದೇ ಯಾರಿಗೂ ತೊಂದರೆಯಾಗಬಾರದೆಂದು ಎರಡು ದಿನ ಮನೆಯಲ್ಲೇ ಇದ್ದೆ. ಕೊರೊನಾ ಬಂದೇ ಇಲ್ಲ ಎಂದು ವೈದ್ಯರು ಹೇಳಿದ್ದ ಕಾರಣ ನಾನು ಸದನಕ್ಕೆ ಹಾಜರಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ