Breaking News

ಅಂತ್ಯಕ್ರಿಯೆ ಬೆನ್ನಲ್ಲೇ ಹಣಕಟ್ಟಿ ಹೆಣ ತೆಗೆದುಕೊಂಡು ಹೋಗಿ ಅಂತ ಕುಟುಂಬಸ್ಥರಿಗೆ ಸಿಬ್ಬಂದಿ ಕರೆ

Spread the love

ಮಂಗಳೂರು: ಅಂತ್ಯಸಂಸ್ಕಾರವೂ ಆಯ್ತು, ಶವ ಬೂದಿಯೂ ಆಗೋಯ್ತು. ಆದರೆ ಅಂತ್ಯಕ್ರಿಯೆ ಬೆನ್ನಲ್ಲೇ ಹಣಕಟ್ಟಿ ಹೆಣ ತೆಗೆದುಕೊಂಡು ಹೋಗಿ ಅಂತ ಕುಟುಂಬಸ್ಥರಿಗೆ ಸಿಬ್ಬಂದಿ ಕರೆ ಮಾಡಿದ ಘಟನೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದಿದೆ.

 

ಹೌದು. ಮೃತನ ಅಂತ್ಯಸಂಸ್ಕಾರದ ಬಳಿಕ ಆಸ್ಪತ್ರೆಯಲ್ಲಿ ಅದೇ ಹೆಸರಿನ ಮತ್ತೊಂದು ಮೃತದೇಹ ಪ್ರತ್ಯಕ್ಷವಾಗಿದೆ. ಈ ಮೂಲಕ ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್ ಲಾಕ್ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿಕೊಂಡಿದ್ದಾರೆ. ಮೃತದೇಹ ಸುಟ್ಟು ಬೂದಿಯಾದ ಬೆನ್ನಲ್ಲೇ ಆಸ್ಪತ್ರೆ ಸಿಬ್ಬಂದಿ ಕುಟುಂಬಸ್ಥರಿಗೆ ಕರೆ ಮಾಡಿದ್ದಾರೆ. ಈ ವೇಳೆ ನಿಮ್ಮವರ ಮೃತದೇಹ ತೆಗೆದುಕೊಂಡು ಹೋಗಿ ಎಂದು ಪದೇ ಪದೇ ಕಾಲ್ ಮಾಡಿದ್ದಾರೆ.

ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ವಿನೋದ್ ಎಂಬಾತ ಆ.19ರಂದು ವೆನ್ ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಉಳಾಯಿಬೆಟ್ಟು ನಿವಾಸಿ ವಿನೋದ್ ಅನಾಥರಾಗಿರುವ ಕಾರಣ ಆ.19 ರಂದೇ ಸ್ಥಳೀಯರು ಅಂತ್ಯಕ್ರಿಯೆ ನೆರವೇರಿಸಿದ್ದರು. ಅಂತ್ಯಕ್ರಿಯೆ ಬೆನ್ನಲ್ಲೇ ಹಣ ಕಟ್ಟಿ ಹೆಣ ತೆಗೆದುಕೊಂಡು ಹೋಗಿ ಅಂತ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿದ್ದಾರೆ. ಅಲ್ಲದೆ ಅ.20 ಮತ್ತು 21ಕ್ಕೆ ಮತ್ತೆ ಫೋನ್ ಕ4 ಸಾವಿರ ಕಟ್ಟಿ ಹೆಣ ತೆಗೆದುಕೊಂಡು ಹೋಗಿ ಅಂತ ವೆನ್ ಲಾಕ್ ಆಸ್ಪತ್ರೆ ಸಿಬ್ಬಂದಿ ಪದೇ ಪದೇ ಕರೆ ಮಾಡಿದ್ದಾರೆ. ಈ ಮೂಲಕ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ ಕೊಡಲು ಸಿಬ್ಬಂದಿ ಹಣ ಕೇಳಿರುವುದು ಬಯಲಾಗಿದೆ. ಖಾಲಿ ಹಾಳೆಯಲ್ಲಿ ಬಿಲ್ ಬರೆದು ಹೆಣ ಕೊಡಲು ಹಣಕ್ಕೆ ಬೇಡಿಕೆ ಇಡುವ ಮೂಲಕ ಅಂತ್ಯಸಂಸ್ಕಾರ ನಡೆದರೂ ಮತ್ತೆ ಅದೇ ಹೆಸರಿನಲ್ಲಿ ಹೆಣ ತೆಗೆದುಕೊಂಡು ಹೋಗಲು ದುಂಬಾಲು ಬಿದ್ದ ಪ್ರಸಂಗ ನಡೆದಿದೆ.ರೆ ಮಾಡಿ ಕಿರಿಕ್ ಮಾಡಿದ್ದಾರೆ.

 


Spread the love

About Laxminews 24x7

Check Also

ಕೊನೆಗೂ ರಾಸಲೀಲೆ ಡಿಜಿಪಿ ರಾಮಚಂದ್ರರಾವ್ ಸಸ್ಪೆಂಡ್- ದೂರು ಕೊಡಲು ಬಂದವ್ರ ಜೊತೆ ಚಕ್ಕಂದ- ಇಲಾಖೆ ಮರ್ಯಾದೆ ತೆಗೆದ IPS – DGP ramachandra roa case

Spread the love ಕೊನೆಗೂ ರಾಸಲೀಲೆ ಡಿಜಿಪಿ ರಾಮಚಂದ್ರರಾವ್ ಸಸ್ಪೆಂಡ್- ದೂರು ಕೊಡಲು ಬಂದವ್ರ ಜೊತೆ ಚಕ್ಕಂದ- ಇಲಾಖೆ ಮರ್ಯಾದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ