ನವದೆಹಲಿ: ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದು ಕೆಲವೇ ದಿನಗಳಲ್ಲಿ ಕಾರ್ಯಾಚರಣೆ ಆರಂಭಿಸಿವೆ. ಭಾರತ ಚೀನಾ ನಡುವಿನ ವಾಸ್ತವಿಕ ಗಡಿ ರೇಖೆ ಬಳಿ ರಾತ್ರಿ ತಾಲೀಮು ಶುರು ಮಾಡಿವೆ.ವಾರಗಳ ಹಿಂದೆಯಷ್ಟೇ ಭಾರತೀಯ ವಾಯುಪಡೆ ಸೇರಿರುವ ಐದು ರಫೇಲ್ ಯುದ್ಧ ವಿಮಾನಗಳು ಕಾರ್ಯಾಚರಣೆ ಆರಂಭಿಸಿವೆ. ರಫೇಲ್ ಯುದ್ಧವಿಮಾನಗಳು ಹರಿಯಾಣದ ಅಂಬಾಲಾ ವಾಯುನೆಲೆಗೆ ಬಂದಿಳಿದಿವೆ. ಈಗಾಗಲೇ ಲಡಾಖ್ ಪ್ರದೇಶಗಳಲ್ಲಿ ರಾತ್ರಿ ವೇಳೆ ತಾಲೀಮು ಶುರುಮಾಡಿವೆ. ರಫೇಲ್ ಆರ್ಭಟ ಕಂಡು ಕೊಟ್ಟ ವಾಗ್ದಾನ ಮರೆತು ಭಾರತದ ಗಡಿಯಲ್ಲಿ ಬೀಡುಬಿಟ್ಟಿರುವ ಚೀನಾ ಸೈನಿಕರಿಗೆ ಆತಂಕ ಶುರುವಾಗಿದೆ. ಶುರುವಾಗಿದೆ.
ಲಡಾಖ್ ಪೂರ್ವಭಾಗದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಯೋಧರು ಅತಿಕ್ರಮಣ ಮಾಡಿದ್ದಾರೆ. ಟೆಂಟ್ ಹಾಕಿ ಸಂಚು ರೂಪಿಸಿದ್ದಾರೆ. ಯಾವುದೇ ಸಯಮದಲ್ಲಿ ಯುದ್ಧ ಆರಂಭವಾಗಬಹುದು ಎಂಬ ಆತಂಕದ ಕಾರ್ಮೋಡ ಸೃಷ್ಟಿಯಾಗಿದೆ. ವಾಸ್ತವಿಕ ನಿಯಂತ್ರಣ ಗಡಿ ರೇಖೆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಈ ಪರಿಸ್ಥಿತಿಗೆ ಪೂರಕವಾಗಿ ಲಡಾಖ್‍ನ ಹಿಮಪರ್ವತಗಳ ನಡುವೆ ರಾತ್ರಿ ವೇಳೆ ತಾಲೀಮು ನಡೆಸುತ್ತಿರುವುದಾಗಿ ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ.