Breaking News

ವರಮಹಾಲಕ್ಷ್ಮಿ ಹಬ್ಬದಂದೇ ವ್ಯಾಪಾರಿಗಳಿಗೆ ಶಾಕ್; ತಹಶೀಲ್ದಾರ್ ನೇತೃತ್ವದಲ್ಲಿ ಅಕ್ರಮ ಅಂಗಡಿಗಳ ತೆರವು

Spread the love

 

ಆನೇಕಲ್:  ಸರ್ಕಾರಿ ಆಸ್ಪತ್ರೆಗೆ ಸಾಗುವ ದಾರಿಯ ಇಕ್ಕೆಲಗಳಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳನ್ನು ತಾಲ್ಲೂಕು ಆಡಳಿತ ತೆರವುಗೊಳಿಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ನಡೆದಿದೆ. 

ಆನೇಕಲ್ ತಹಶಿಲ್ದಾರ್ ಮಹಾದೇವಯ್ಯ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಿದ ತಾಲ್ಲೂಕು ಆಡಳಿತ ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿದ್ದ ಸುಮಾರು ಐವತ್ತಕ್ಕೂ ಅಧಿಕ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎರಡು ಬದಿಗಳಲ್ಲಿ ತಾತ್ಕಾಲಿಕ ಟೆಂಟ್​​ಗಳನ್ನು ನಿರ್ಮಿಸಿಕೊಂಡಿದ್ದ ವ್ಯಾಪಾರಿಗಳಿಗೆ ಹಲವು ಬಾರಿ ಸ್ಥಳೀಯ ಪುರಸಭೆ ಅಧಿಕಾರಿಗಳು ತೆರವುಗೊಳಿಸಿ ಸಂತೆ ಕಟ್ಟೆಗೆ ಮೀಸಲಿರುವ ಸ್ಥಳದಲ್ಲಿ ಅಂಗಡಿಗಳನ್ನು ಇಟ್ಟುಕೊಳ್ಳುವಂತೆ ಸೂಚಿಸಿದ್ದರು. ಆದರೂ ಸಹ ಸ್ಥಳಾಂತರಗೊಂಡಿರಲಿಲ್ಲ.

ವರಮಹಾಲಕ್ಷ್ಮಿ ಹಬ್ಬದಂದೇ ವ್ಯಾಪಾರಿಗಳಿಗೆ ಶಾಕ್; ತಹಶೀಲ್ದಾರ್ ನೇತೃತ್ವದಲ್ಲಿ ಅಕ್ರಮ ಅಂಗಡಿಗಳ ತೆರವು

ಇಂದು ಆನೇಕಲ್ ತಹಶಿಲ್ದಾರ್ ಮಹಾದೇವಯ್ಯ, ಜಿಗಣಿ ಠಾಣೆ ಇನ್ಸ್ಪೆಕ್ಟರ್ ವಿಶ್ವನಾಥ್ ನೇತೃತ್ವದಲ್ಲಿ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಿ ವರ ಮಹಾಲಕ್ಷ್ಮೀ ಹಬ್ಬದಂದೇ ವ್ಯಾಪಾರಿಗಳಿಗೆ ಶಾಕ್ ನೀಡಿದ್ದಾರೆ. ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು ಹದಿನೈದಕ್ಕೂ ಅಧಿಕ ಕುಗ್ರಾಮಗಳು ಇದ್ದು, ನಿತ್ಯ ಒಂದಿಲ್ಲೊಂದು ರೋಗಿ ತುರ್ತು ಚಿಕಿತ್ಸೆಗೆ ಆಗಮಿಸುತ್ತಾರೆ. ಅದೆಷ್ಟೋ ಸಂದರ್ಭಗಳಲ್ಲಿ ಎರಡು ಬದಿಗಳಲ್ಲಿ ವ್ಯಪಾರಿಗಳು ಅಂಗಡಿಗಳನ್ನು ಇಟ್ಟುಕೊಂಡಿದ್ದರಿಂದ ಜನ ಜಂಗುಳಿಯಿಂದಾಗಿ ಆ್ಯಂಬುಲೆನ್ಸ್ ಆಸ್ಪತ್ರೆ ಬಳಿಗೆ ಬರಲು ಪ್ರಯಾಸ ಪಡಬೇಕಾಗಿತ್ತು


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ