ಚೆನ್ನೈ: ವಯಸ್ಸಾದ ತಾಯಿಯನ್ನು ವಯೋಸಹಜ ಕಾಯಿಲೆ ಹಾಗೂ ಅಸಹನೀಯ ನೋವಿನಿಂದ ಶಾಶ್ವತವಾಗಿ ಮುಕ್ತಗೊಳಿಸಲು ಆಕೆಯ ಮಗನೇ ಚಾಕುವಿನಿಂತ ಕತ್ತು ಸೀಳಿ ಅಮಾನವೀಯವಾಗಿ ಹತ್ಯೆ ಗೈದಿದ್ದಾನೆ.
36 ವರ್ಷದ ಆನಂದನ್ ಕೊಲೆಗೈದ ಆರೋಪಿ. ಗೋವಿಂದಮ್ಮಾಳ್ (66) ಕೊಲೆಗೀಡಾದ ದುರ್ದೈವಿ ತಾಯಿ.
ಈ ಘಟನೆ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಶ್ರೀಪೆರುಪುದೂರ್ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಗೋವಿಂದಮ್ಮಾಳ್ ತನ್ನ ಪತಿ ಮತ್ತು ಮಗನೊಂದಿಗೆ ವಾಸಿಸುತ್ತಿದ್ದು, ಕುಟುಂಬದವರು ಮರಿಯಮ್ಮನ್ ಕೋಲಿ ಗಲ್ಲಿಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ.
ಧೂಮಪಾನಿಗಳೇ ಹುಷಾರ್: ಧೂಮಪಾನದಿಂದ ಕರೊನಾ ತಗುಲಿ ಬೇಗ ಸಾವು ಸಂಭವಿಸುತ್ತದೆ : ಆರೋಗ್ಯ ಸಚಿವಾಲಯ
ಸುದ್ದಿ ಸಂಸ್ಥೆಯೊಂದರ ವರದಿಯ ಪ್ರಕಾರ, ಕಳೆದ ಫೆಬ್ರವರಿಯಲ್ಲಿ ಸಂತ್ರಸ್ತೆಗೆ ಕ್ಷಯ ಮತ್ತು ಮಧುಮೇಹ ಕಾಯಿಲೆ ಇರುವುದು ಪತ್ತೆಯಾಗಿತ್ತು.
ಪೆರುಂಬುದೂರ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ವೃದ್ಧೆಯನ್ನು ಜುಲೈನಲ್ಲಿ ಮನೆಗೆ ಕರೆತರಲಾಗಿತ್ತು.
ಯಾವುದೇ ಚಿಕಿತ್ಸೆಯು ತನ್ನ ಸ್ಥಿತಿಯನ್ನು ಸುಧಾರಿಸುವುದಿಲ್ಲ ಎಂದು ನಂಬಿದ್ದ ಆಕೆ ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದಳು.
ಜುಲೈ 24 ರಂದು, ಅಸಹನೀಯ ನೋವಿನಿಂದ ಬಳಲುತ್ತಿದ್ದ ಆಕೆ ತನ್ನನ್ನು ಕೊಂದು ಶಾಶ್ವತವಾಗಿ ನೋವಿನಿಂದ ಪಾರುಮಾಡುವಂತೆ ಮಗನಿಗೆ ಮನವಿ ಮಾಡಿದಳು.
:ಫ್ರಾನ್ಸ್ ಟು ಇಂಡಿಯಾ : ರಫೇಲ್ ಭಾರತಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಿಲಾಲ್
ಸೋಮವಾರ, ಆಕೆಯ ಪತಿ ಕೆಲಸದಿಂದ ಹಿಂತಿರುಗಿದಾಗ ಆಕೆಯ ಗಂಟಲು ಸೀಳಿದ ಸ್ಥಿತಿಯಲ್ಲಿದ್ದು, ಆಕೆ ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡುತ್ತಿದ್ದುದನ್ನು ಕಂಡ. . ಸಂತ್ರಸ್ತೆಯ ಮಗಳು ಪಕ್ಕದ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ.
ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ಆನಂದನ್ ತನ್ನ ತಾಯಿ ಅಸಹನೀಯ ನೋವಿನಿಂದ ಬಳಲುತ್ತಿದ್ದ ಕಾರಣ ತಾನೇ ಕೊಂದಿದ್ದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ಅಡುಗೆ ಮಾಡಲು ಬಳಸುವ ಚಾಕು ಬಳಸಿ ತಾಯಿಯ ಗಂಟಲು ಸೀಳಿ ಕೊಂದಿದ್ದ.
ಲಾಕ್ ಡೌನ್ ವೇಳೆ ಅವರ ವ್ಯವಹಾರ ಕುಂಠಿತಗೊಂಡಿದ್ದು, ಅವರ ಕುಟುಂಬ ಬಡತನದ ಬೇಗೆಯಲ್ಲಿ ಬೇಯುತ್ತಿದೆ. ಅವರ ತಾಯಿಯ ವೈದ್ಯಕೀಯ ವೆಚ್ಚಗಳಿಗೆ ಖರ್ಚು ಮಾಡಲು ಸಾಕಷ್ಟು ಹಣ ಕೂಡ ಅವರ ಬಳಿ ಇಲ್ಲ ಎಂದು ಶ್ರೀಪೆರುಂಬುದೂರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜೆ ವಿನಯಗಂ ಅವರ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರು ಆನಂದನ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
‘ರಾಮಮಂದಿರ ಭೂಮಿ ಪೂಜೆಗೆ ದಯವಿಟ್ಟು ಬರಬೇಡಿ…ಅಂದು ಸಂಜೆ ಮನೆಯಲ್ಲಿ ದೀಪ ಹಚ್ಚಿ’