ಬಾಗಲಕೋಟೆ: ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಕಾರ್ಖಾನೆ ಬಳಿ ಕಬ್ಬು ತುಂಬಿ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ಗುರುವಾರ ನಡೆದಿದೆ. ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ಇದ್ದ ಹಲವು ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಲಾಗಿದೆ.
ಗೋದಾವರಿ ಸಕ್ಕರೆ ಕಾರ್ಖಾನೆಯನ್ನು ಶುಕ್ರವಾರದಿಂದ ಕಾರ್ಯಾರಂಭ ಮಾಡುವ ಉದ್ದೇಶದಿಂದ ಕಾರ್ಖಾನೆಯವರು ಸುಮಾರು, 150 ಟ್ರ್ಯಾಕ್ಟರ್ಗಳಲ್ಲಿ ಕಬ್ಬು ತುಂಬಿಸಿ ಇರಿಸಿದ್ದರು. ಆದರೆ ಕಾರ್ಖಾನೆಯ ಆಡಳಿತ ಮಂಡಳಿಯವರು ಹಿಂದಿನ ಬಾಕಿ ಹಣ ನೀಡುವ ಬಗ್ಗೆ ಚಕಾರ ಎತ್ತಿಲ್ಲ. ಜೊತೆಗೆ ಪ್ರತಿ ಟನ್ಗೆ ಸರ್ಕಾರ ಆದೇಶದಂತೆ 3,300 ರೂ. ದರ ನೀಡುವುದಾಗಿ ಮಾಹಿತಿ ನೀಡಿದ್ದಾರೆಂದು ಆಕ್ರೋಶಗೊಂಡ ರೈತರು ಮಹಾಲಿಂಗಪುರ ಪಟ್ಟಣದಲ್ಲಿ ಪ್ರತಿಭಟನೆ ಕೈಗೊಂಡಿದ್ದರು. ಜೊತೆಗೆ, ಮುಧೋಳ ಪಟ್ಟಣದಲ್ಲಿ ನಡೆಯುತ್ತಿರುವ ರೈತರ ಹೋರಾಟದ ಸಂಬಂಧ ಕಾರ್ಖಾನೆಯವರು ದರ ಘೋಷಣೆ ಮಾಡಲು ಹಾಗೂ ಸಂಧಾನಕ್ಕೂ ಬರಲಿಲ್ಲ ಎಂದು ಆರೋಪಿಸಿ, ರೈತರು ಆಕ್ರೋಶ ಹೊರಹಾಕಿದ್ದಾರೆ.
Laxmi News 24×7