ಹುಬ್ಬಳ್ಳಿ: ದೈನಂದಿನ ವಿಶೇಷ ಪ್ಯಾಸೆಂಜರ್ ರೈಲುಗಳನ್ನು ಖಾಯಂಗೊಳಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ರೈಲ್ವೆ ಮಂಡಳಿಯು ರೈಲು ಸಂಖ್ಯೆ 07301/07302 ಬೆಳಗಾವಿ–ಮೀರಜ್–ಬೆಳಗಾವಿ ಮತ್ತು 07303/07304 ಬೆಳಗಾವಿ–ಮೀರಜ್–ಬೆಳಗಾವಿ ಕಾಯ್ದಿರಿಸದ ದೈನಂದಿನ ವಿಶೇಷ ಪ್ಯಾಸೆಂಜರ್ ರೈಲುಗಳನ್ನು ಖಾಯಂಗೊಳಿಸಲು ಅನುಮೋದನೆ ನೀಡಿದೆ.
ಅದರಂತೆ ಈ ರೈಲುಗಳು 51461/51462 ಬೆಳಗಾವಿ–ಮೀರಜ್–ಬೆಳಗಾವಿ ಮತ್ತು 51463/51464 ಬೆಳಗಾವಿ–ಮೀರಜ್–ಬೆಳಗಾವಿ ಎಂದು ಮರು-ಸಂಖ್ಯೆ ಪಡೆಯಲಿವೆ. ರೈಲು ಸಂಖ್ಯೆ 51461 ಬೆಳಗಾವಿ-ಮೀರಜ್ ಡೈಲಿ ಪ್ಯಾಸೆಂಜರ್ ಬೆಳಗಾವಿಯಿಂದ ಬೆಳಗ್ಗೆ 05:45ಕ್ಕೆ ಹೊರಟು, ಅದೇ ದಿನ ಬೆಳಗ್ಗೆ 09:00ಕ್ಕೆ ಮೀರಜ್ ತಲುಪಲಿದೆ. ವಾಪಸ್, ರೈಲು ಸಂಖ್ಯೆ 51462 ಮೀರಜ್-ಬೆಳಗಾವಿ ಡೈಲಿ ಪ್ಯಾಸೆಂಜರ್ ಮೀರಜ್ನಿಂದ ಬೆಳಗ್ಗೆ 09:55ಕ್ಕೆ ಹೊರಟು, ಅದೇ ದಿನ ಮಧ್ಯಾಹ್ನ 01:00ಕ್ಕೆ ಬೆಳಗಾವಿ ತಲುಪಲಿದೆ.
ರೈಲು ಸಂಖ್ಯೆ 51463 ಬೆಳಗಾವಿ-ಮೀರಜ್ ಡೈಲಿ ಪ್ಯಾಸೆಂಜರ್ ಬೆಳಗಾವಿಯಿಂದ ಮಧ್ಯಾಹ್ನ 01:30ಕ್ಕೆ ಹೊರಟು, ಅದೇ ದಿನ ಸಂಜೆ 04:30ಕ್ಕೆ ಮೀರಜ್ ತಲುಪಲಿದೆ. ವಾಪಸ್, ರೈಲು ಸಂಖ್ಯೆ 51464 ಮೀರಜ್-ಬೆಳಗಾವಿ ಡೈಲಿ ಪ್ಯಾಸೆಂಜರ್ ಮೀರಜ್ನಿಂದ ಸಂಜೆ 07:10ಕ್ಕೆ ಹೊರಟು ಅದೇ ದಿನ ರಾತ್ರಿ 10:25ಕ್ಕೆ ಬೆಳಗಾವಿ ತಲುಪಲಿದೆ.
ಈ ಖಾಯಂ ಸೇವೆಗಳು ಅಕ್ಟೋಬರ್ 15, 2025 ರಿಂದ ಜಾರಿಗೆ ಬರಲಿವೆ. ಈ ಮೂಲಕ ಸ್ಥಳೀಯ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗಾವಿ ಮತ್ತು ಮೀರಜ್ ನಡುವೆ ದೈನಂದಿನ ಕಾಯ್ದಿರಿಸದ ಪ್ರಯಾಣ ಸೌಲಭ್ಯವನ್ನೇ ಮುಂದುವರಿಸಲಿವೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.