ಬೆಂಗಳೂರು: ಹಾಸ್ಯನಟ ಮಿಮಿಕ್ರಿ ರಾಜ್‍ಗೋಪಾಲ್ ಅವರು ಇಂದು ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ.
ಇಡೀ ರಾಜ್ಯವೇ ಕೊರೊನಾ ವೈರಸ್ ಕಾಟದಿಂದ ತತ್ತರಿಸಿ ಹೋಗುತ್ತಿದೆ. ಈ ನಡುವೆ ಸಾಲು ಸಾಲು ನಟರು ಸಾವನ್ನಪ್ಪುತ್ತಿರುವುದು ಚಿತ್ರರಂಗಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇತ್ತೀಚೆಗಷ್ಟೇ ಸಾವನ್ನಪ್ಪಿದ ಯುವ ನಟ ಚಿರಂಜೀವಿ ಸರ್ಜಾ ಸಾವಿನ ಸುದ್ದಿ ಮರೆಯುವ ಮುನ್ನವೇ ಹಿರಿಯ ಹಾಸ್ಯನಟ ರಾಜ್‍ಗೋಪಾಲ್ ಅವರು ನಮ್ಮನ್ನು ಅಗಲಿದ್ದಾರೆ.

ಕಳೆದ ಕೆಲ ದಿನಗಳಿಂದ ಕಿಡ್ನಿ ಸಮಸ್ಯೆ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ರಾಜ್‍ಗೋಪಾಲ್, ಇಂದು ತಮ್ಮ ಕೆಂಗೇರಿ ನಿವಾಸದಲ್ಲಿ ತಮ್ಮ 69ನೇ ವಯಸ್ಸಿಗೆ ಮೃತಪಟ್ಟಿದ್ದಾರೆ. ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಹ್ಯಾಸನಟನಾಗಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ತಮ್ಮ ಮಿಮಿಕ್ರಿ ಮೂಲಕ ಜನರನ್ನು ರಂಜಿಸುತ್ತಿದ್ದ ರಾಜ್‍ಗೋಪಾಲ್ ಇನ್ನು ನೆನಪು ಮಾತ್ರ.

ಒಂದು ಕಡೆ ಕೊರೊನಾದಿಂದ ದೇಶ ತತ್ತರಿಸುತ್ತಿದ್ದರೆ, ಇತ್ತ ಚಿತ್ರರಂಗದಲ್ಲಿ ನಟರು ಸಾವನ್ನಪ್ಪುತ್ತಿದ್ದಾರೆ. ಬಾಲಿವುಡ್‍ನಲ್ಲಿ ನಟರಾದ ಸುಶಾಂತ್ ಸಿಂಗ್ ರಜಪೂತ್, ಇರ್ಫಾನ್ ಖಾನ್, ರಿಷಿ ಕಪೂರ್ ಮತ್ತು ವಾಜಿದ್ ಖಾನ್ ಸಾವನ್ನಪ್ಪಿದ್ದರು. ಇತ್ತ ಸ್ಯಾಂಡಲ್‍ವುಡ್‍ನಲ್ಲಿ ಚಿರು, ಬುಲೆಟ್ ಪ್ರಕಾಶ್, ಮೈಕಲ್ ಮಧು ಮತ್ತು ರಿಯಾಲಿಟಿ ಶೋ ವಿನ್ನರ್ ಮೆಬೀನಾ ಮೈಕಲ್ ಅವರು ಕೂಡ ಮೃತಪಟ್ಟಿದ್ದರು.
Laxmi News 24×7