Breaking News
Home / ರಾಜಕೀಯ / ಐಎನ್‌ಡಿಐಎಯ ಅರ್ಧದಷ್ಟು ನಾಯಕರು ಜೈಲಿನಲ್ಲಿ: ನಡ್ಡಾ

ಐಎನ್‌ಡಿಐಎಯ ಅರ್ಧದಷ್ಟು ನಾಯಕರು ಜೈಲಿನಲ್ಲಿ: ನಡ್ಡಾ

Spread the love

ಹುಬ್ಬಳ್ಳಿ: ಭ್ರಷ್ಟಚಾರಿಗಳು ಹಾಗೂ ಪರಿವಾರವಾದಿಗಳ ಸಮ್ಮಿಲ ನವೇ ಐಎನ್‌ಡಿಐಎ ಮೈತ್ರಿಕೂಟ ವಾಗಿದೆ. ಭ್ರಷ್ಟಾಚಾರಿಗಳ ರಕ್ಷಣೆಯೇ ಮೈತ್ರಿಕೂಟದ ಮುಖ್ಯ ಅಜೆಂಡಾ ಆಗಿದೆ.

ಮೈತ್ರಿಕೂಟದೊಂದಿಗೆ ಇರುವವರಲ್ಲಿ ಅರ್ಧ ಜನ ಜಾಮೀನಿನಲ್ಲಿದ್ದರೆ, ಇನ್ನರ್ಧಷ್ಟು ಜನ ಜೈಲಿನಲ್ಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವ್ಯಂಗ್ಯವಾಡಿದರು.

ಐಎನ್‌ಡಿಐಎಯ ಅರ್ಧದಷ್ಟು ನಾಯಕರು ಜೈಲಿನಲ್ಲಿ: ನಡ್ಡಾ

ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ರವಿವಾರ ಸಂಜೆ ವಿವಿಧ ಸಮಾಜಗಳ ಪ್ರಮುಖರು, ಕೇಂದ್ರ ಸರಕಾರದ ಹಲವು ಯೋಜನೆಗಳ ಫಲಾನುಭವಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರ ಇದ್ದಾಗ ಹಗರಣಗಳನ್ನು ನಡೆಸಿ, ಭ್ರಷ್ಟಾಚಾರದಲ್ಲಿ ಮುಳಗಿದವರೆಲ್ಲ ಈಗ ಒಗ್ಗೂಡಿಕೊಂಡು ಮೈತ್ರಿಕೂಟ ಮಾಡಿ ಕೊಂಡಿದ್ದಾರೆ. ತಮ್ಮ ಕುಟುಂಬ ರಕ್ಷಿಸಬೇಕು, ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡಬೇಕು ಇದೇ ಅವರ ಪ್ರಮುಖ ಉದ್ದೇಶವಾಗಿದೆ.

ಹತ್ತು ವರ್ಷಗಳ ಹಿಂದೆ ರಾಜಕೀಯ ಸಂಸ್ಕೃತಿ ಬದಲಾಗಿದೆ. ದೇಶದಲ್ಲಿ ಬದಲಾವಣೆ, ಹೊಸತನ ಅಸಾಧ್ಯ ಎಂಬ ಮನೋಭಾವದ ಜತೆಗೆ ಎಲ್ಲ ರಾಜಕಾರಣಿಗಳು ಭ್ರಷ್ಟಾ ಚಾರಿಗಳು ಯಾರು ಬಂದರೂ ವ್ಯತ್ಯಾಸವೇನು ಆಗುವುದಿಲ್ಲ ಎಂಬ ನಕಾರಾತ್ಮಕ ವಾತಾವರಣ ಉಂಟಾ ಗಿತ್ತು. ರಾಜಕೀಯ ವಾತಾವರಣ, ದೇಶದಲ್ಲಿ ಬದಲಾವಣೆ ಸಾಧ್ಯವೆಂಬ ಸಕಾರಾತ್ಮಕ ವಾತಾವರಣ 10 ವರ್ಷಗಳಿಂದ ಸಾಧ್ಯವಾಗಿದೆ. ಅದರ ಪ್ರತೀಕವೇ ವಿಕಸಿತ ಭಾರತ ಸಂಕಲ್ಪವಾಗಿದೆ.

ಪೂರ್ಣತೆಯೇ ಮೋದಿ ಗ್ಯಾರಂಟಿ
ಕತ್ತಲು ದಿನಗಳನ್ನು ನೋಡಿದಾಗ ಮಾತ್ರ ಬೆಳಕಿನ ದಿನಗಳ ಮಹತ್ವ ಗೊತ್ತಾಗುತ್ತದೆ. ಅಂತಹ ಅನುಭವವನ್ನು ದೇಶದ ಜನತೆ ಕಳೆದ ಹತ್ತು ವರ್ಷಗಳಿಂದ ಅದನ್ನು ಆನಂದಿಸಿದ್ದಾರೆ. ಕೇವಲ ಜಾತಿ, ಧರ್ಮ, ಒಂದು ಸಮು ದಾಯ ರೂಪದಲ್ಲಿ, ಮತಬ್ಯಾಂಕ್‌ ಉದ್ದೇಶ ದೊಂದಿಗೆ ಅಧಿಕಾರಕ್ಕೆ ಬರುವ ವಾತಾವರಣ ಬದಲಾಯಿಸಿರುವ ಪ್ರಧಾನಿ ಮೋದಿಯವರು ರೈತ, ಮಹಿಳೆ, ವಿದ್ಯಾರ್ಥಿ, ಯುವಕ, ಕಾರ್ಮಿಕ, ದಲಿತ, ಶೋಷಿತ ಸಹಿತ ಎಲ್ಲ ವರ್ಗದವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿಯ ಸ್ಪರ್ಶವಾಗಬೇಕೆಂಬ ನಿಟ್ಟಿನಲ್ಲಿ ಆಡಳಿತ ನೀಡಿದ್ದಾರೆ ಎಂದರು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ