: ಬೆಳಗಾವಿ,: 16ನೇ ಮಾರ್ಚ್-2024 : ಮಲಬಾರ್ ಗೋಲ್ಡ್ & ಡೈಮೊಂಡ್ಸ್ ಸಿಎಸ್‌ಆರ್ ಉಪಕ್ರಮ ಕಾರ್ಯಕ್ರಮದ ಅಂಗವಾಗಿ ಇಂದು ಬೈಲಹೊಂಗಲ್, ಕೆ ಕೆ ಕೊಪ್ಪ, ಬೀಡಿ, ಖಾನಾಪುರ, ಸರ್ದಾರ್ ಪ್ರಥಮ ಧರ್ಜೆ ಮಹಿಳಾ ಕಾಲೇಜುಚಿಂತಾಮನರಾವ್ ಪದವಿ ಪೂರ್ವ ಕಾಲೇಜುನಲ್ಲಿರುವ 06 ಕಾಲೇಜುಗಳ 89 ವಿದ್ಯಾರ್ಥಿನಿಯರಿಗೆ ರೂ. 8.9 ಲಕ್ಷ (ಎಂಟು ಲಕ್ಷದ ತೊಂಬತ್ತು ಸಾವಿರ ರೂಪಾಯಿಗಳು) ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮವು ಟೌನ್ ಹಾಲ್ ಭಾಗ್ಯನಗರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀಮತಿ
ಲೀಲಾವತಿ ಶಿವಪ್ರಸಾದ್ ಹಿರೇಮರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆಳಗಾವಿ ನಗರ, ಶ್ರೀ. ಅಭಿಜಿತ್ ಜವಾಲ್ಕರ್, ಕಾರ್ಪೊರೇಟರ್ ಬೆಳಗಾವಿ, ಶ್ರೀ. ಕಪಿಲ್ ದೇವ್ ಏ. ಜೆ, ಪೊಲೀಸ್ ಇನ್ಸೆಕ್ಟರ್ ತಿಲಕವಾಡಿ ಮತ್ತು ಮಲಬಾರ್ ಗೋಲ್ಡ್ & ಡೈಮಂಡ್ಸ್ ಮ್ಯಾನೇಜೆಂಟ್ತಂಡದ ಸದಸ್ಯರು ಉಪಸ್ಥಿತರಿದ್ದರು.
ಮಲಬಾರ್ ಸಮೂಹದ ಸಿಎಸ್‌ಆರ್ ಉಪಕ್ರಮದ ಭಾಗವಾಗಿ, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಸ್ಟೋರ್ ಗಳಿಸಿದ ಲಾಭದ 5% ಅನ್ನು ಪ್ರದೇಶಗಳಲ್ಲಿನ ವಿವಿಧ ದತ್ತಿ ಮತ್ತು ಲೋಕೋಪಕಾರಿ ಚಟುವಟಿಕೆಗಳಿಗೆ ನಿಯೋಜಿಸುವುದಾಗಿ ಘೋಷಿಸಿದೆ