Breaking News

Yearly Archives: 2025

ಟವೆಲ್ ವಿಚಾರಕ್ಕೆ ಕಾರ್ಮಿಕರ ನಡುವೆ ಜಗಳ

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಕೂಲಿಯಾಳುಗಳಾಗಿ ಬಂದಿದ್ದವರು, ಟವೆಲ್ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಇದೇ ಜಗಳ ಓರ್ವ ಕೂಲಿ ಕಾರ್ಮಿಕನ ಕೊಲೆಗೆ ಕಾರಣವಾಗಿದೆ. ದೊಡ್ಡಬಳ್ಳಾಪುರ ತಾಲೂಕು ಹೆಗ್ಗಡಿಹಳ್ಳಿಯಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ವಿಜಯಕುಮಾರ್ (34) ಕೊಲೆ ಮಾಡಲಾಗಿದೆ ಎಂದು ಮೃತನ ಹೆಂಡತಿ ಗೌರಮ್ಮ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಪೂಜಪ್ಪನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಾದ …

Read More »

ಮೂರು ದಿನದಲ್ಲಿ ಉತ್ತರಿಸುವಂತೆ ಕಾಂತಾರ ಚಿತ್ರ ತಂಡಕ್ಕೆ ನೋಟಿಸ್: ಶಿವಮೊಗ್ಗ ಡಿಸಿ

ಶಿವಮೊಗ್ಗ: ಕಾಂತಾರಾ -1 ಚಿತ್ರೀಕರಣದ ವೇಳೆ ದೋಣಿ ಮಗುಚಿ 30 ಜನ ಈಜಿ ದಡ ಸೇರಿದದ್ದು, ಒಂದು ಆಂಬ್ಯುಲೆನ್ಸ್ ಚಿತ್ರೀಕರಣ ಸ್ಥಳದಿಂದ ತೀರ್ಥಹಳ್ಳಿ ಕಡೆ ಹೋಗಿದೆ ಎಂದು ವರದಿಯಾದ ಬಗ್ಗೆ ಸ್ಪಷ್ಟನೆ ನೀಡುವಂತೆ ಕಾಂತಾರಾ -1 ಚಿತ್ರ ತಂಡಕ್ಕೆ ಹೊಸನಗರ ತಹಶೀಲ್ದಾರ್ ರೇಷ್ಮಾ ಅವರು ಇಂದು ನೋಟಿಸ್ ನೀಡಿದ್ದಾರೆ. ‘ನೀವು ಚಿತ್ರಿಕರಣ ನಡೆಸುತ್ತಿರುವ ಬಗ್ಗೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆದಿರುವ ಬಗ್ಗೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ. ಆದರೆ …

Read More »

ದೇಶದಲ್ಲೇ ಇವರು ಹಿರಿಯ ಶಾಸಕ!

ದಾವಣಗೆರೆ: ದಾವಣಗೆರೆ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ದೇಶದಲ್ಲೇ ಏಕೈಕ ಹಿರಿಯ ಶಾಸಕ, ಅಲ್ಲದೇ ರಾಜ್ಯ ರಾಜಕಾರಣದಲ್ಲಿ ಅನುಭವಿ ಹಾಗೂ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು ಅನ್ನೋದು ಹೆಮ್ಮೆಯ ಸಂಗತಿ. ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶಾಮನೂರು ಶಿವಶಂಕರಪ್ಪನವರು ಆರು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಹಿರಿಯ ಮುತ್ಸದ್ದಿ. ಇಂದು 95ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು, ಇಂದಿಗೂ ಹುಮ್ಮಸ್ಸಿನಲ್ಲೇ ಕ್ಷೇತ್ರದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ ರಾಜಕೀಯಕ್ಕೆ …

Read More »

ಖಾನಾಪುರ ಪೊಲೀಸ್ ತರಬೇತಿ ಶಾಲೆಯ 22 ಪ್ರಶಿಕ್ಷಣಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲ

ಬೆಳಗಾವಿ: ಖಾನಾಪುರ ಪೊಲೀಸ್ ತರಬೇತಿ ಶಾಲೆಯ 22 ಪ್ರಶಿಕ್ಷಣಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ವಿಷಪೂರಿತ ಆಹಾರ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಖಾನಾಪುರದಲ್ಲಿರುವ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಯಲ್ಲಿ‌ 9 ತಿಂಗಳ ಬುನಾದಿ ತರಬೇತಿ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪ್ರಶಿಕ್ಷಣಾರ್ಥಿಗಳ ಪೈಕಿ 22 ಪ್ರಶಿಕ್ಷಣಾರ್ಥಿಗಳು ವಿಷಪೂರಿತ ಆಹಾರ ಸೇವಿಸಿದ್ದರಿಂದ ಅಸ್ವಸ್ಥಗೊಂಡಿದ್ದರು. ವಾಂತಿ ಬೇಧಿ, ಜ್ವರ ಮತ್ತು ಸುಸ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ಬೆಳಗ್ಗೆ …

Read More »

ಕಲಬುರಗಿ ನ್ಯಾಯಾಲಯದ ಆವರಣದಲ್ಲೇ ತೀವ್ರ ಹೃದಯಾಘಾತ: ನ್ಯಾಯಾಧೀಶ ವಿಶ್ವನಾಥ ಮುಗುಟಿ ವಿಧಿವಶ

ಕಲಬುರಗಿ: ಜಿಲ್ಲಾ ನ್ಯಾಯಾಲಯ ಆವರಣದಲ್ಲೇ ತೀವ್ರ ಹೃದಯಾಘಾತ ಸಂಭವಿಸಿ ಮೂರನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಶ್ವನಾಥ್ ಮುಗುಟಿ (44) ಅವರು ಸೋಮವಾರ ವಿಧಿವಶರಾಗಿರುವ ಘಟನೆ ನಡೆದಿದೆ. ದೈನಂದಿನಂತೆ ಮನೆಯಿಂದ ಬೆಳಗ್ಗೆ ತಿಂಡಿ‌ ಮುಗಿಸಿ ನ್ಯಾಯಾಲಯಕ್ಕೆ ಬಂದು ತಮ್ಮ ಕಚೇರಿಯಲ್ಲಿ ಕುಳಿತಿರುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಕಲಬುರಗಿಯ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು …

Read More »

ಶಾಮನೂರು ಶಿವಶಂಕರಪ್ಪ ಅವರು ಆರೋಗ್ಯವಾಗಿದ್ದು ಶತಾಯುಷಿ ಆಗಲಿದ್ದಾರೆ: ಸಿ.ಎಂ ಸಿದ್ದರಾಮಯ್ಯ*

ಶಾಮನೂರು ಶಿವಶಂಕರಪ್ಪ ಅವರು ಆರೋಗ್ಯವಾಗಿದ್ದು ಶತಾಯುಷಿ ಆಗಲಿದ್ದಾರೆ: ಸಿ.ಎಂ ಸಿದ್ದರಾಮಯ್ಯ* *ಇವರ ಉತ್ಸಾಹ, ಕ್ರಿಯಾಶೀಲತೆ ನೋಡಿದರೆ ಮತ್ತೆ ಚುನಾವಣೆಗೆ ನಿಲ್ಲಬಹುದು: ಸಿ.ಎಂ* *ಅಂತರ್ಜಾತಿ ಸಾಮೂಹಿಕ‌ ವಿವಾಹಗಳು ಹೆಚ್ಚೆಚ್ಚು ಆದರೆ ಜಾತ್ಯತೀತ ಸಮಾಜ ನಿರ್ಮಾಣ ಸಾಧ್ಯ: ಸಿ.ಎಂ ಸಿದ್ದರಾಮಯ್ಯ* ದಾವಣಗೆರೆ ಜೂ 16: ಅಂತರ್ಜಾತಿ ಸಾಮೂಹಿಕ‌ ವಿವಾಹಗಳು ಹೆಚ್ಚೆಚ್ಚು ಆದರೆ ಜಾತ್ಯತೀತ ಸಮಾಜ ನಿರ್ಮಾಣ ಸಾಧ್ಯ ಎಂದು ಸಿ.ಎಂ ಸಿದ್ದರಾಮಯ್ಯ ಅವರು ನುಡಿದರು ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಶಾಮನೂರು …

Read More »

ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರಅಭಿಪ್ರಾಯ ಕನ್ನಡ ಸಾಹಿತ್ಯಕ್ಕೆ ಜೆಪಿ ಕೊಡುಗೆ ಅಪಾರ

ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರ ಅಭಿಪ್ರಾಯ ಕನ್ನಡ ಸಾಹಿತ್ಯಕ್ಕೆ ಜೆಪಿ ಕೊಡುಗೆ ಅಪಾರ ಬೆಳಗಾವಿ: ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕೃತಿಗಳನ್ನು ನೀಡಿದ ಡಾ. ಜೆ.ಪಿ.ದೊಡ್ಡಮನಿ ಕಾರ್ಯ ಶ್ರೇಷ್ಠವಾದುದು. ಅವರ ಅನುವಾದ ಜ್ಯೋತಿ, ಈ ಅಭಿನಂದನಾ ಗ್ರಂಥವು ಕೇವಲ ಒಂದು ಪುಸ್ತಕವಲ್ಲ. ಅವರ ಸಮಗ್ರ ವ್ಯಕ್ತಿತ್ವ ಅರ್ಥಮಾಡಿಕೊಳ್ಳುವ ಹೊತ್ತಿಗೆಯಾಗಿದೆ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ವೀರಣ್ಣ …

Read More »

ಆಷಾಢ ಶುಕ್ರವಾರ: ಚಾಮುಂಡಿ ವಿಶೇಷ ದರ್ಶನಕ್ಕೆ 2 ಸಾವಿರ ರೂ. ನಿಗದಿ ಖಂಡಿಸಿ ಪ್ರತಿಭಟನೆ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದ ವಿಶೇಷ ದರ್ಶನ ಪ್ಯಾಕೇಜ್​ಗಾಗಿ 2000 ರೂಪಾಯಿ ಟಿಕೆಟ್ ದರ ನಿಗದಿ ಮಾಡಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿ, ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಕರ್ನಾಟಕ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ದೇವರ ದರ್ಶನಕ್ಕೆ ಸರ್ಕಾರ ಇಷ್ಟೊಂದು ದುಬಾರಿ ಟಿಕೆಟ್ ಮಾಡಲು ಹೊರಟಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಜನರಿಗೆ ಒಂದು ಕೈಯಲ್ಲಿ ಕೊಟ್ಟು ದೇವರ ಹೆಸರಿನಿಂದ ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ …

Read More »

ಕೇಂದ್ರ ಸರ್ಕಾರ ಮಾಡುತ್ತಿರುವ ಜಾತಿಗಣತಿಗೂ ರಾಜ್ಯ ಸರ್ಕಾರ ಮಾಡುತ್ತಿರುವ ಸಮೀಕ್ಷೆಗೂ ವ್ಯತ್ಯಾಸವಿದೆ: ಸತೀಶ್ ಜಾರಕಿಹೊಳಿ

ರಾಯಚೂರು: ಕೇಂದ್ರ ಸರ್ಕಾರ ಕೇವಲ ಜನಗಣತಿ ಜೊತೆಗೆ ಜಾತಿಗಣತಿ ಮಾಡುತ್ತದೆ. ನಾವು ಶಿಕ್ಷಣ, ಸಾಮಾಜಿಕ ಆರ್ಥಿಕ ಸ್ಥಿತಿಗತಿ ಬಗ್ಗೆ ಸರ್ವೆ ಮಾಡುತ್ತಿದ್ದೇವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಯಲ್ಲಿ ಜಾತಿ ಒಂದು ಭಾಗವಷ್ಟೇ. 52 ಮಾನದಂಡದಲ್ಲಿ ಈ ಸಮೀಕ್ಷೆ ನಡೆಯುತ್ತೆ. ನಮ್ಮದು ಜಾತಿ ಸಮೀಕ್ಷೆ ಅಷ್ಟೇ ಅಲ್ಲ, ಸ್ಥಿತಿಗತಿ ಸಮೀಕ್ಷೆ ಆಗಿದೆ. ಆದಾಯ, ಉದ್ಯೋಗ, ಭೂಮಿ ಇದರ ಬಗ್ಗೆ ಕೇಂದ್ರ ಸಮೀಕ್ಷೆ …

Read More »

*ಕುಡಚಿ ದರ್ಗಾಕ್ಕೆ 05 ಲಕ್ಷ ರೂ. ನಿಧಿಗೆ ಅನುಮೋದನೆ..:ಲಖನ್ ಜಾರಕಿಹೊಳಿ,

ಕುಡಚಿ: ಇಲ್ಲಿನ ಹಜರತ್ ಮಾಸಾಹೇಬಿ ದರ್ಗಾಕ್ಕೆ ಐದು ಲಕ್ಷ ನಿಧಿ ಮಂಜೂರಾತಿ ಪತ್ರ ವಿತರಿಸಿದ ಎಂಎಲ್ಸಿ ಲಖನ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ವೀರಕುಮಾರ ಪಾಟೀಲ, ಶ್ಯಾಮ್ ಘಾಟಗೆ ಮತ್ತಿತರರು ಉಪಸ್ತಿತಿ. ಬೆಳಗಾವಿ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ಇಲ್ಲಿನ ಗ್ರಾಮ ದೇವತೆ ಹಜರತ್ ಮಾಸಾಹೇಬಿ ದರ್ಗಾಕ್ಕೆ ಐದು ಲಕ್ಷ ರೂಪಾಯಿಗಳ ನಿಧಿಯನ್ನು ಅನುಮೋದಿಸಿದ್ದಾರೆ. ಭಾನುವಾರ ಬೆಳಿಗ್ಗೆ, ಶಾಸಕ ಲಖನ್ ಜಾರಕಿಹೊಳಿ ಅವರು ಕುಡ್ಚಿಯಲ್ಲಿರುವ ಗ್ರಾಮ ದೇವತೆ ಹಜರತ್ …

Read More »