Breaking News

Daily Archives: ಸೆಪ್ಟೆಂಬರ್ 21, 2025

ಹಾವೇರಿ ಜಿಲ್ಲಾಸ್ಪತ್ರೆಯಿಂದ ಮಾತೃ ಇಲಾಖೆಗೆ ವರ್ಗಾವಣೆಗೊಂಡಿದ್ದ 13 ವೈದ್ಯರ ಆದೇಶ ರದ್ದು

ಹಾವೇರಿ: ಹಾವೇರಿ ಜಿಲ್ಲಾಸ್ಪತ್ರೆಯಿಂದ ದಿಢೀರ್​ ಮಾತೃ ಇಲಾಖೆ ಆರೋಗ್ಯ ಇಲಾಖೆಗೆ 20ಕ್ಕೂ ಅಧಿಕ ತಜ್ಞವೈದ್ಯರನ್ನು ವರ್ಗಾವಣೆ ಮಾಡಿದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದಂತೆ ಇಲಾಖೆ ಎಚ್ಚೆತ್ತುಗೊಂಡಿದೆ. ಹಾವೇರಿ ಜಿಲ್ಲಾಸ್ಪತ್ರೆಯ 23 ವೈದ್ಯರಲ್ಲಿ 13 ವೈದ್ಯರ ಆದೇಶ ರದ್ದು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಆದೇಶ ಹೊರಡಿಸಿದೆ. 13 ವೈದ್ಯರನ್ನು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳಲು ಸೂಚನೆ ನೀಡಿದೆ. ಇದರಿಂದಾಗಿ ಬಡವರು ನಿಟ್ಟುಸಿರು ಬಿಡುವಂತಾಗಿದೆ. ಹಾವೇರಿ …

Read More »

ಹುಬ್ಬಳ್ಳಿ ಬೇಡ ಜಂಗಮ ಸಮಾವೇಶ ಕಂಪ್ಲೀಟ್ ಫ್ಲಾಪ್: ವಚನಾನಂದ ಶ್ರೀ

ಗದಗ : ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಬೇಡಜಂಗಮರ ಸಮಾವೇಶವು ಸಂಪೂರ್ಣ ವಿಫಲವಾಗಿದೆ ಎಂದು ಗದಗದ ಹರಿಹರ ಪೀಠದ ಜಗದ್ಗುರು ವಚನಾನಂದ ಶ್ರೀಗಳು ತೀಕ್ಷ್ಣವಾಗಿ ಟೀಕಿಸಿದ್ದಾರೆ. ಈ ಸಮಾವೇಶಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಶ್ರೀಗಳು, ಇದರಲ್ಲಿ ಭಾಗವಹಿಸಿದ್ದು ಕೇವಲ 7,000 ಜನರಷ್ಟೇ, ವ್ಯಾಪಕ ಪ್ರಚಾರ ಮತ್ತು ಖರ್ಚಿನ ಹೊರತಾಗಿಯೂ ಜನಸ್ಪಂದನೆ ಸಿಕ್ಕಿಲ್ಲ ಎಂದು ಕಿಚಾಯಿಸಿದ್ದಾರೆ. ನಗರದಲ್ಲಿಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೇದಿಕೆಯ ಮೇಲೆ ಕೆಲವು ಸ್ವಾಮೀಜಿಗಳನ್ನು ಬಿಟ್ಟರೆ, …

Read More »

ಜಾತಿ ಗಣತಿಯಲ್ಲಿ ಪೆನ್ನಿನಿಂದ ಬರೆಯಿರಿ, ಹಗರಣ ತಡೆಯಿರಿ

ಗದಗ: ” ರಾಜ್ಯಾದ್ಯಂತ ಆರಂಭವಾಗುತ್ತಿರುವ ಜಾತಿ ಗಣತಿ ಪ್ರಕ್ರಿಯೆಯಲ್ಲಿ ಸರ್ಕಾರಿ ಸಿಬ್ಬಂದಿಗಳು ಹಗರಣ ನಡೆಸಬಹುದು” ಎಂದು ಮಾಜಿ ಸಚಿವ ಸಿ. ಸಿ. ಪಾಟೀಲ್​ ಶಂಕೆ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಮೇಲಿನ ನಂಬಿಕೆ ಕಳೆದುಕೊಂಡಿದ್ದು, ಗಣತಿ ಸಂದರ್ಭದಲ್ಲಿ ವೀರಶೈವ-ಲಿಂಗಾಯತ ಸಮುದಾಯಗಳನ್ನು ಒಡೆಯುವ ಉದ್ದೇಶವೇ ಇದೆ. ಸಮುದಾಯದವರು ಎಚ್ಚರಿಕೆ ವಹಿಸಿ. ಗಣತಿ ಸಿಬ್ಬಂದಿಗಳಿಗೆ ಪೆನ್ಸಿಲ್ ಬಳಸದಂತೆ ಮತ್ತು ಪೆನ್ನಿನಿಂದ ಬರೆಯುವಂತೆ ಒತ್ತಾಯಿಸಿ ಎಂದು ಕರೆ ನೀಡಿದ್ದಾರೆ. ಈ ಸರ್ಕಾರ …

Read More »

ಪಂಚಮಸಾಲಿ ಪೀಠದಿಂದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ: ಶಾಸಕ ವಿಜಯಾನಂದ ಕಾಶಪ್ಪನವರ್

ಪಂಚಮಸಾಲಿ ಪೀಠದಿಂದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ: ಶಾಸಕ ವಿಜಯಾನಂದ ಕಾಶಪ್ಪನವರ್ ಬಾಗಲಕೋಟೆ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಪಂಚಮಸಾಲಿ ಪೀಠದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪಂಚಮಸಾಲಿ ಪೀಠದ ಟ್ರಸ್ಟ್​ ಅಧ್ಯಕ್ಷರಾಗಿರುವ ಶಾಸಕ ವಿಜಯಾನಂದ ಕಾಶಪ್ಪನವರ್​ ಭಾನುವಾರ ತಿಳಿಸಿದ್ದಾರೆ. ಕೂಡಲಸಂಗಮದಲ್ಲಿ ಪಂಚಮಸಾಲಿ ಪೀಠದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಎಲ್ಲ ಧರ್ಮದರ್ಶಿಗಳು, ಸಮುದಾಯದವರು ಸೇರಿ ಒಂದು ತತ್ವ ಆದರ್ಶದ ಮೇಲೆ ಈ ಪೀಠವನ್ನು ಕಟ್ಟಲಾಗಿತ್ತು. …

Read More »

ಭಾನುವಾರ ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಆನೆಗಳ ತಾಲೀಮಿಗೆ ಬ್ರೇಕ್

ಮೈಸೂರು: ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಯ ತಾಲೀಮಿಗೆ ಭಾನುವಾರ ವಿರಾಮ ನೀಡಲಾಯಿತು. ಇದರಿಂದ ಮಾವುತರು ಹಾಗೂ ಕಾವಾಡಿಗಳು ವಿಶ್ರಾಂತಿಯಲ್ಲಿದ್ದರು. ತಾಲೀಮಿಗೆ ವಿರಾಮ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಅಭಿಮನ್ಯು, ಭೀಮ, ಏಕಲವ್ಯ, ಪ್ರಶಾಂತ, ಲಕ್ಷ್ಮಿ, ಕಂಜನ್, ಧನಂಜಯ, ಮಹೇಂದ್ರ, ಕಾವೇರಿ, ಹೇಮಾವತಿ, ರೂಪ, ಶ್ರೀಕಂಠ, ಸುಗ್ರೀವ ಗೋಪಿ ಆನೆಗಳಿಗೆ ನೆತ್ತಿಗೆ ಎಣ್ಣೆ ಹಾಕಿ, ಸ್ನಾನ ಮಾಡಿಸಲಾಯಿತು. ತಾಲೀಮಿನ ಭಾಗವಾಗಿ ಎಲ್ಲಾ ಆನೆಗಳನ್ನು ನಿತ್ಯ ಅರಮನೆಯಿಂದ ಬನ್ನಿಮಂಟಪದವರಗೆ ಕರೆದುಕೊಂಡು ಹೋಗಿ ವಾಪಸ್ …

Read More »

ಜಿಲ್ಲಾ ದಸರಾ ಕೈ ಬಿಟ್ಟ ಸರ್ಕಾರ: ಕನ್ನಡ ಸಂಘದಿಂದಲೇ 9 ದಿನ ಅದ್ಧೂರಿ ಚಾಮರಾಜನಗರ ದಸರಾ

ಚಾಮರಾಜನಗರ: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಯುಕ್ತ ಚಾಮರಾಜನಗರದಲ್ಲಿ ಮೂರು ದಿನಗಳ ಕಾಲ ನಡೆಸುತ್ತಿದ್ದ ಚಾಮರಾಜನಗರ ದಸರಾವನ್ನು ಈ ಬಾರಿ ಕೈ ಬಿಟ್ಟಿದ್ದು, ಸಿಎಂ ಸಿದ್ದರಾಮಯ್ಯ ಅವರೇ ಚಾಮರಾಜನಗರದಲ್ಲಿ ದಸರಾ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಅಸಮಾಧಾನಗೊಂಡ ಕನ್ನಡಪರ ಹೋರಾಟಗಾರರು ಚಾಮರಾಜನಗರ ದಸರಾ ಮಾಡಲು ಮುಂದಾಗಿದ್ದಾರೆ. ಹೌದು, ಸರ್ಕಾರ ಜಿಲ್ಲಾ ದಸರಾ ಆಚರಣೆ ಕೈ ಬಿಟ್ಟ ಹಿನ್ನೆಲೆ ಕನ್ನಡಪರ ಹೋರಾಟಗಾರ ಚಾ.ರಂ. ಶ್ರೀನಿವಾಸಗೌಡ ನೇತೃತ್ವದಲ್ಲಿ ಚಾಮರಾಜನಗರ ದಸರಾ ಆಚರಣೆ ಮಾಡಲು ಸಿದ್ದತೆ ಮಾಡಿಕೊಂಡಿದ್ದು …

Read More »

ಕೂಡಲಸಂಗಮ ಪೀಠದ ಸ್ವಾಮೀಜಿ ಎದುರೇ ಪ್ರಚೋದನಕಾರಿ ಭಾಷಣ.

ರಾಯಬಾಗ : ಕೂಡಲಸಂಗಮ ಪೀಠದ ಸ್ವಾಮೀಜಿ ಎದುರೇ ಪ್ರಚೋದನಕಾರಿ ಭಾಷಣ. ಈ ಬಾರಿ ಮೀಸಲಾತಿ ಕೇಳಲು ವಿಧಾನಸೌಧಕ್ಕೆ ಹೋಗುವಾಗ ಬಡಿಗೆ ತೆಗೆದುಕೊಂಡು ಹೋಗೋಣ ಎಂದು ಪ್ರಚೋದನಕಾರಿ ಹೇಳಿಕೆ. ಪಂಚಮಸಾಲಿಗೆ ೨ಎ ಮೀಸಲಾತಿ ಹೋರಾಟ ಹಿನ್ನೆಲೆ. ಹಾರುಗೇರಿಯಲ್ಲಿ 08 ನೇ ಹಂತದ ಹೋರಾಟಕ್ಕೆ ಚಾಲನೆ. ಹಾರುಗೇರಿ ಕ್ರಾಸ್ ನಲ್ಲಿ 08 ಹಂತಕ್ಕೆ ಚಾಲನೆ ನೀಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ. ಭಾಷಣದಲ್ಲಿ ಮುಖಂಡನೊಬ್ಬನಿಂದ ಪ್ರಚೋದನಾಕಾರಿ ಭಾಷಣ

Read More »

ಮಾಣಿಕವಾಡಿ ಕೊಲೆ ಪ್ರಕರಣದ ತನಿಖೆ ಬಗ್ಗೆ ಪಾಲಕರು ಸೇರಿದಂತೆ ಗ್ರಾಮಸ್ಥರು ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರನ್ನು ಭೇಟಿಯಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ

ಮಾಣಿಕವಾಡಿ ಕೊಲೆ ಪ್ರಕರಣದ ತನಿಖೆ ಬಗ್ಗೆ ಪಾಲಕರು ಸೇರಿದಂತೆ ಗ್ರಾಮಸ್ಥರು ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರನ್ನು ಭೇಟಿಯಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಖಾನಾಪೂರ ತಾಲೂಕಿನ ಮಾಣಿಕವಾಡಿ ಗ್ರಾಮದ ಗ್ರಾಮಸ್ಥರು ಸೇರಿ ಮೃತ ಹುಡುಗ ವೆಂಕಪ್ಪ ಮಲ್ಹಾರಿ ಮಯೇಕರ ಅವರ ತಂದೆ ತಾಯಿ ಸೇರಿದಂತೆ ಪಂಚರು ಎಐಸಿಸಿ ಕಾರ್ಯದರ್ಶಿ ಮಾಜಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರನ್ನು ಭೇಟಿಯಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ …

Read More »

ಬಾಗಲಕೋಟೆಯಲ್ಲಿ 50 ಹಾಸಿಗೆಗೆ ಆಸ್ಪತ್ರೆಗೆ ಬೆಂಕಿ!!!

ಬಾಗಲಕೋಟೆಯಲ್ಲಿ 50 ಹಾಸಿಗೆಗೆ ಆಸ್ಪತ್ರೆಗೆ ಬೆಂಕಿ!!! ರೋಗಿಗಳು ಜಿಲ್ಲಾಸ್ಪತ್ರೆಗೆ ಶಿಫ್ಟ್… ಶಾರ್ಟ್ ಸರ್ಕ್ಯೂಟ್’ನಿಂದಾಗಿ ಬಾಗಲಕೋಟೆ ನಗರದ 50 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಬೆಳಗ್ಗೆ ಆಸ್ಪತ್ರೆಯಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವುದು ದೃಢಪಟ್ಟಿದೆ. ಯಾವುದೇ ದೊಡ್ಡ ಅನಾಹುತವಾಗದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿ ಆಕ್ಸಿಜನ್ ಗ್ಯಾಸ್ ಅನ್ನು ಹೊರ ಹಾಕಿದ್ದಾರೆ. ಅಪಾಯದ ಮುನ್ಸೂಚನೆ ಅರಿತ …

Read More »

ಸ್ಮಾರ್ಟ್ ಮೀಟರ್ ಸಂಪರ್ಕ ಪಡೆದ ಬೆಳಗಾವಿಯ ಗ್ರಾಹಕ ರಾಹುಲ್ ತಳವಳಕರ….

ಸ್ಮಾರ್ಟ್ ಮೀಟರ್ ಸಂಪರ್ಕ ಪಡೆದ ಬೆಳಗಾವಿಯ ಗ್ರಾಹಕ ರಾಹುಲ್ ತಳವಳಕರ…. ಬೆಳಗಾವಿ ನೆಹರು ನಗರ ಮೊದಲ ಅಡ್ಡ ರಸ್ತೆಯ ಗ್ರಾಹಕ ರಾಹುಲ್ ತಳವಳಕರ ಅವರು ಸ್ಮಾರ್ಟ್ ಮೀಟರ್ ಸಂಪರ್ಕವನ್ನು ಪಡೆದ ಮೊದಲ ಗ್ರಾಹಕರಾಗಿ ಹೊರ ಹೊಮ್ಮಿದ್ದಾರೆ. ಬೆಳಗಾವಿ ನೆಹರು ನಗರ ಮೊದಲ ಅಡ್ಡ ರಸ್ತೆಯ ಗ್ರಾಹಕರಾದ ರಾಹುಲ್ ತಳವಳಕರ ಅವರು ಸ್ಮಾರ್ಟ್ ಮೀಟರ್ ಸಂಪರ್ಕವನ್ನು ಪಡೆದ ಮೊದಲ ಗ್ರಾಹಕರಾಗಿದ್ದಾರೆ. ಸ್ಮಾರ್ಟ್ ಮೀಟರ್ ರಿಚಾರ್ಜ್, ಇಷ್ಟು ವಿದ್ಯುತ್ ಬಳಕೆಯಾಗಿದೆ. ಎಷ್ಟು ಉಳಿದಿದೆ. …

Read More »