Breaking News

Daily Archives: ಜುಲೈ 31, 2024

ಸಂತ್ರಸ್ತರಿಗೆ ಪರಿಹಾರದ ಅಭಯ ನೀಡಿದ ಯುವ ಮುಖಂಡ ಸರ್ವೋತ್ತಮ

ತಿಗಡಿ, ಸುಣಧೋಳಿ, ಹುಣಶ್ಯಾಳ ಪಿವೈ, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ ಗ್ರಾಮಗಳಿಗೆ ಭೇಟಿ ನೀಡಿದ ಸರ್ವೋತ್ತಮ ಜಾರಕಿಹೊಳಿ ಮೂಡಲಗಿ- ಪ್ರವಾಹಕ್ಕೀಡಾಗಿರುವ ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಭರವಸೆ ನೀಡಿದರು. ತಾಲೂಕಿನ ಘಟಪ್ರಭಾ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಸಂತ್ರಸ್ತರಿಗೆ ಅಗತ್ಯವಿರುವ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಈಗಾಗಲೇ ಮನವಿ ಮಾಡಿಕೊಂಡಿದ್ದೇನೆ ಎಂದು …

Read More »

ವಿವಾದದ ಸುಳಿಯಲ್ಲಿ ನಟ ದರ್ಶನ್‌ ಬಂಧಿಸಿದ್ದACP ಚಂದನ್‌ ಕುಮಾರ್‌.

ಬೆಂಗಳೂರು: ನಟ ದರ್ಶನ್ ಬಂಧಿಸಿ ಸುದ್ದಿಯಾಗಿದ್ದ ಎಸಿಪಿ ಚಂದನ್‌ ಕುಮಾರ್‌ ವಿರುದ್ದ ಕೆಲ ಆರೋಪಗಳು ಕೇಳಿ ಬರುತ್ತಿವೆ. ನಟ ದರ್ಶನ್‌ ಬಂಧನವಾದ ಬೆನ್ನಲೇ ಸುದ್ದಿಯಾಗಿರುವ ಎಸಿಪಿ ಚಂದನ್‌ ಕುಮಾರ್ ಈಗ ದಲಿತ ವಿರೋಧಿ ಎನ್ನುವ ಆರೋಪ ಕೇಳಿ ಬಂದಿದ್ದು, ಚಂದನ್‌ ಅವರ ಬಗ್ಗೆ ಕೇಳಿ ಬರುತ್ತಿರುವ ಆರೋಪ ಇನ್ನೂ ಸಾಬೀತಾಗಿಲ್ಲ. ಎಸಿಪಿ ಚಂದನ್‌ ಕುಮಾರ್ ಅವರ ಬಗ್ಗೆ ಹರಿರಾಮ್ ಎ ಎನ್ನುವವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಈತನು …

Read More »

ಓಟಿಎಸ್ ಯೋಜನೆ 15 ದಿನ ವಿಸ್ತರಿಸಲು ಆಗ್ರಹ

ಬೆಂಗಳೂರು, ಜುಲೈ 31: ಒಂದು ಬಾರಿ ಪರಿಹಾರ (ಓಟಿಎಸ್) ಯೋಜನೆಯನ್ನು ಬಿಬಿಎಂಪಿ ಜಾರಿಗೆ ತಂದು ಬೆಂಗಳೂರಿನ ಆಸ್ತಿ ಮಾಲೀಕರುಗಳಿಗೆ ಅನುಕೂಲ ಮಾಡಿಕೊಟ್ಟಿದ್ದು ಸ್ವಾಗತಾರ್ಹ. ತೆರಿಗೆ ಬಾಕಿ ಬರುವುದಿದೆ, ಹೀಗಾಗಿ ಇನ್ನು ಎರಡು ವಾರಗಳ ಕಾಲ ಈ ಯೋಜನೆಯನ್ನು ವಿಸ್ತರಣೆ ಮಾಡುವಂತೆ ಎಎಪಿ ರಾಜ್ಯಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸರ್ಕಾರದ ಒಂದು ಬಾರಿ ಪರಿಹಾರ (ಓಟಿಎಸ್) ಯೋಜನೆಯಿಂದಾಗಿ ಈಗಾಗಲೇ ಬೆಂಗಳೂರಿನ ಆಸ್ತಿ ಮಾಲೀಕರು ಪ್ರಯೋಜನವನ್ನು ಪಡೆದುಕೊಂಡು ತಮ್ಮ …

Read More »

ರಾಜ್ಯದಲ್ಲಿ ನಾಳೆ ‘ವ್ಯಸನ ಮುಕ್ತ ದಿನಾಚರಣೆ’

ಬೆಂಗಳೂರು : ಬಾಗಲಕೋಟೆಯ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನವನ್ನು ರಾಜ್ಯದಲ್ಲಿ ವ್ಯಸನ ಮುಕ್ತ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತದೆ. ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು. ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ 1930 ರ ಆಗಸ್ಟ್ 1 ರಂದು ಜನಿಸಿದ ಅವರು ತಮ್ಮ 10ನೇ ವಯಸ್ಸಿಗೆ …

Read More »

‘ಪಾರ್ಟಿ’ ಕೊಟ್ಟ ಗೆಳತಿಯನ್ನೇ ‘ಗ್ಯಾಂಗ್ ರೇಪ್’ ಮಾಡಿದ ಸ್ನೇಹಿತರು..!

24 ವರ್ಷದ ಸಾಫ್ಟ್ವೇರ್ ಉದ್ಯೋಗಿಯ ಮೇಲೆ ಇಬ್ಬರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. 24 ವರ್ಷದ ಸಂತ್ರಸ್ತ ಯುವತಿ ದೂರು ದಾಖಲಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಲು ಅವರು ಹುಡುಕಾಟವನ್ನು ಪ್ರಾರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಸಿಕ್ಕ ಖುಷಿಗೆ ಯುವತಿ ತನ್ನ ಸ್ನೇಹಿತರಿಗೆ ಪಾರ್ಟಿ ಆಯೋಜಿಸಿದ್ದರು. ಅವಳ ಬಾಲ್ಯದ ಸ್ನೇಹಿತ ಸ್ಥಳೀಯ ಪಬ್ ಗೆ ಹೋಗಿ ಮದ್ಯ ಸೇವಿಸಿದ್ದು, ನಂತರ ಕೋಣೆಯೊಂದರಲ್ಲಿ …

Read More »

ಭೀಕರ ಭೂಕುಸಿತದಲ್ಲಿ ಚಾಮರಾಜನಗರದ ನಾಲ್ವರು ಮೃತ್ಯು

ಚಾಮರಾಜನಗರ/ಮಂಡ್ಯ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಚಾಮರಾಜನಗರದ ನಾಲ್ವರು ಮೃತಪಟ್ಟಿದ್ದು, ಕೆ.ಆರ್.ಪೇಟೆ ಮೂಲದ ಮಹಿಳೆಯ ಮಗು ಸೇರಿ ಇಬ್ಬರು ನಾಪತ್ತೆಯಾಗಿದ್ದು, ಕುಟುಂಬದ ಮೂವರು ಆಸ್ಪತ್ರೆಯಲ್ಲಿದ್ದಾರೆ. ವಯನಾಡಿನ ಮೇಪ್ಪಾಡಿಯಲ್ಲಿ ನೆಲೆಸಿದ್ದ ಪುಟ್ಟಸಿದ್ದಶೆಟ್ಟಿ (62) ಹಾಗೂ (55), ಚಾಮರಾಜನಗರ ತಾಲೂಕಿನ ಇರಸವಾಡಿ ಮೂಲದ, ವಯ ನಾಡು ಜಿಲ್ಲೆಯಲ್ಲಿ ವಾಸವಿದ್ದ ರಾಜೇಂದ್ರ (50), ರತ್ನಮ್ಮ (45) ಮೃತ ದುರ್ದೈವಿಗಳು. ಈ ಪೈಕಿ ರಾಜೇಂದ್ರ, ರತ್ನಮ್ಮ ಮೃತ ದೇಹ ಪತ್ತೆಯಾಗಿಲ್ಲ. ಘಟನೆ ನಡೆದ ಸ್ಥಳಕ್ಕೆ ಗುಂಡ್ಲುಪೇಟೆ …

Read More »

NDA ಮೈತ್ರಿಕೂಟದಲ್ಲಿ ಮೂಡಿದ ಒಡಕು? ಬಿಜೆಪಿ ವಿರುದ್ಧವೇ ಕೇಂದ್ರ ಸಚಿವ HD ಕುಮಾರಸ್ವಾಮಿ ಕಿಡಿ!

NDA ಮೈತ್ರಿಕೂಟದಲ್ಲಿ ಮೂಡಿದ ಒಡಕು? ಬಿಜೆಪಿ ವಿರುದ್ಧವೇ ಕೇಂದ್ರ ಸಚಿವ HD ಕುಮಾರಸ್ವಾಮಿ ಕಿಡಿ! ನವದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಸರ್ಕಾರ (NDA Govt) ಆಡಳಿತಕ್ಕೆ ಬಂದು ಒಂದು ತಿಂಗಳು ಕಳೆಯುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಜೊತೆ ಜೆಡಿಎಸ್‌ ಕೂಡ ಮೈತ್ರಿ ಮಾಡಿಕೊಂಡ ಪರಿಣಾಮ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಕೇಂದ್ರ ಸಚಿವ ಸ್ಥಾನವನ್ನು ದಕ್ಕಿಸಿಕೊಂಡಿದ್ದಾರೆ. ಆದರೆ ಇದೀಗ ಅಚ್ಚರಿಯ ಸಂಗತಿಯೊಂದು ದಿಢೀರನೇ …

Read More »

ಬೀಡಾಡಿ ದನ ತಿವಿದು ವೃದ್ಧ ಸಾವು

ಗದಗ: ಬೀಡಾಡಿ ದನವೊಂದು ತಿವಿದ ಪರಿಣಾಮ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಟಗೇರಿಯ ಹೊಸ ಬನಶಂಕರಿ ಗುಡಿ ಸಮೀಪ ಬುಧವಾರ ಬೆಳಿಗ್ಗೆ ನಡೆದಿದೆ. ಬೆಟಗೇರಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿ ಗ್ರಾಮದ ಶಂಕರಪ್ಪ ಹೊಳೆ (70) ಮೃತಪಟ್ಟವರು.   ಬುಧವಾರ ಬೆಳಿಗ್ಗೆ 8ರ ಸುಮಾರಿಗೆ ಬೆಟಗೇರಿಯ ಸರ್ಕಾರಿ ಪ್ರಾಥಮಿಕ ಶಾಲೆ ನಂ.7ರ ಸಮೀಪ ಬೀಡಾಡಿ ದನಗಳು ಕಾದಾಡುತ್ತಿದ್ದವು. ಈ ವೇಳೆ ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಶಂಕಪ್ಪ …

Read More »

ಸಿಎಂ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ವಯನಾಡಿಗೆ

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ಅವರು ಪ್ರವಾಹ ಪೀಡಿತ ವಯನಾಡಿಗೆ ತೆರಳಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳು, ಸಂತ್ರಸ್ಥರ ರಕ್ಷಣೆ ಸೇರಿದಂತೆ ಅಗತ್ಯ ಎಲ್ಲಾ ರೀತಿಯ ನೆರವುಗಳಿಗೆ ಕೇರಳ ಸರ್ಕಾರದ ಜೊತೆ ಕೈ ಜೋಡಿಸಿ ಜನರ ಜೀವ, ಆರೋಗ್ಯ ರಕ್ಷಣೆಗೆ ನೆರವಾಗುವಂತೆ ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ. ದೂರವಾಣಿ ಕರೆ ಸ್ವೀಕರಿಸುತ್ತಿದ್ದಂತೆ ವಯನಾಡಿಗೆ ಹೊರಟ ಸಚಿವ ಸಂತೋಷ್ ಲಾಡ್ ಸದ್ಯ …

Read More »

BJP, ಕಾಂಗ್ರೆಸ್‌ಗೆ ದಲಿತರು, ಮುಸ್ಲಿಮರ ಬಗ್ಗೆ ಕಾಳಜಿ ಇಲ್ಲ: ಪ್ರಕಾಶ್ ಅಂಬೇಡ್ಕರ್

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ‘ಆರಕ್ಷಣ ಬಚಾವೊ ಯಾತ್ರೆ’ ನಡೆಸುತ್ತಿರುವ ವಂಚಿತ್ ಬಹುಜನ ಅಘಾಡಿ ಸಂಸ್ಥಾಪಕ ಪ್ರಕಾಶ್ ಅಂಬೇಡ್ಕರ್ ಅವರು ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಆ ಎರಡು ಪಕ್ಷಗಳಿಗೂ ದಲಿತರು, ಆದಿವಾಸಿಗಳು, ಮುಸ್ಲಿಮರು ಮತ್ತು ಇತರ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇಲ್ಲ. ಆದರೆ, ಚುನಾವಣೆಗಳಲ್ಲಿ ಅವರ ಮತಗಳ ಪಡೆಯಲು ಬಯಸುತ್ತಾರೆ ಎಂದು ಪ್ರಕಾಶ್ ಟೀಕಿಸಿದ್ದಾರೆ. …

Read More »