Breaking News

Monthly Archives: ಅಕ್ಟೋಬರ್ 2023

ಮಾಜಿ ಕಾರ್ಪೊರೇಟರ್ ಸಂಬಂಧಿ ಮನೆಯಲ್ಲಿ ಐಟಿ ದಾಳಿ.. 40 ಕೋಟಿಗೂ ಹೆಚ್ಚು ನಗದು ಪತ್ತೆ!

ಬೆಂಗಳೂರು : ನಗರದಲ್ಲಿ ಗುತ್ತಿಗೆದಾರರು, ಜ್ಯುವೆಲ್ಲರಿ ಶಾಪ್​ ಮಾಲೀಕರು ಹಾಗೂ ಮಾಜಿ ಕಾರ್ಪೊರೇಟರ್​ಗಳ ಮನೆಗಳ ಮೇಲೆ ತಡರಾತ್ರಿ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ, ಮಾಜಿ ಕಾರ್ಪೊರೇಟರ್ ಅವರ ಸಂಬಂಧಿಯ ಫ್ಲ್ಯಾಟ್​ನಲ್ಲಿ 42 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ. ಆರ್​ಟಿ ನಗರದ ಆತ್ಮಾನಂದ ಕಾಲೋನಿಯಲ್ಲಿರುವ ಫ್ಲ್ಯಾಟ್​ನಲ್ಲಿ ಈ ದಾಳಿ ನಡೆದಿದೆ. ಫ್ಲ್ಯಾಟ್​ನಲ್ಲಿನ ಮಂಚದ ಕೆಳಗಡೆ ಬಾಕ್ಸ್​ನಲ್ಲಿ ಹಣ ಕಂಡುಬಂದಿದೆ ಎಂದು ಆದಾಯ ತೆರಿಗೆ …

Read More »

ಮುರುಘಾ ಶರಣರ ವಿರುದ್ಧದ ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಪರಮಶಿವಯ್ಯಗೆ ಜಾಮೀನು ನೀಡಿದ ಹೈಕೋರ್ಟ್.

ಬೆಂಗಳೂರು: ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ದಾಖಲಾಗಿದ್ದ ಮೊದಲನೇ ಪೋಕ್ಸೋ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಮಠದ ವಿದ್ಯಾಪೀಠಗಳ ಕಾರ್ಯದರ್ಶಿ ಪರಮಶಿವಯ್ಯ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.   ಪರಮಶಿವಯ್ಯ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರ ನೇತೃತ್ವದ ಏಕಸದಸ್ಯ ಅರ್ಜಿಯನ್ನು ಪುರಸ್ಕರಿಸಿದ್ದು, ಜಾಮೀನು ನೀಡಿದೆ. ವಿಸ್ತೃತ ಆದೇಶ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಅಲ್ಲದೇ, ಅರ್ಜಿದಾರರು ಎರಡು ಲಕ್ಷ ರೂಪಾಯಿ ಮೌಲ್ಯದ ಬಾಂಡ್, …

Read More »

ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಭಾರತದ್ದೇ ಮೇಲುಗೈ.. ಹೀಗಿದೆ ಟೀಂ ಇಂಡಿಯಾ ವಿಜಯ ಯಾತ್ರೆ !

ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಮೇಲೆ ಭಾರತ ಪ್ರಾಬಲ್ಯ ಸಾಧಿಸಿರುವುದು ಗೊತ್ತಿರುವ ಸಂಗತಿ.. ಆದರೆ ಆ ಪಂದ್ಯಗಳು ಯಾವಾಗ, ಎಲ್ಲಿ, ಗೆಲುವಿಗೆ ಮುಖ್ಯ ಪಾತ್ರ ವಹಿಸಿದ್ದು ಯಾರೆಂಬುದನ್ನು ತಿಳಿಯೋಣ ಬನ್ನಿ.. ಅಹಮದಾಬಾದ್​, ಗುಜರಾತ್​: ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕ್​ ನಡುವಿನ ಕದನಕ್ಕೆ ಕಾಲ ಕೂಡಿ ಬಂದಿದೆ. ಇಡೀ ಕ್ರಿಕೆಟ್ ಜಗತ್ತು ಕುತೂಹಲದಿಂದ ಕಾಯುತ್ತಿರುವ ಭಾರತ – ಪಾಕಿಸ್ತಾನ ಪಂದ್ಯ ನಾಳೆ ಅಹಮದಾಬಾದ್ ಮೈದಾನದಲ್ಲಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ಏಕದಿನ ವಿಶ್ವಕಪ್‌ನಲ್ಲಿ ಏಳು ಬಾರಿ …

Read More »

ಕಿತ್ತೂರು ಚೆನ್ನಮ್ಮ, ಟಿಪ್ಪು ಸುಲ್ತಾನ್​ ಸ್ವಾಭಿಮಾನದ ಹೋರಾಟ ನಮ್ಮೆಲ್ಲರಿಗೆ ಸ್ಫೂರ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪು ಸುಲ್ತಾನ್​​ ಸ್ವಾಭಿಮಾನಿ ಹೋರಾಟದ ಸ್ಫೂರ್ತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಬಳಿ ಕಿತ್ತೂರು ರಾಣಿ ಚೆನ್ನಮ್ಮನ ಉತ್ಸವ-2023ರನ್ನು ಆಯೋಜಿಸಿದ್ದು, ಪೂರ್ವಭಾವಿಯಾಗಿ ಕಿತ್ತೂರು ಚೆನ್ನಮ್ಮಾಜಿಯ ವೀರ ವಿಜಯ ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಚೆನ್ನಮ್ಮನ ಕಿತ್ತೂರು ಉತ್ಸವದ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ …

Read More »

ಬಜೆಟ್ ಪ್ರಗತಿ: 2023 – 24 ಬಜೆಟ್ ವರ್ಷದ ಆರು ತಿಂಗಳಲ್ಲಿ ಇಲಾಖಾವಾರು ಆರ್ಥಿಕ ಪ್ರಗತಿ ಏನಿದೆ..?

ಬೆಂಗಳೂರು: 2023-24 ಬಜೆಟ್ ವರ್ಷದ ಅರ್ಧ ವರ್ಷ ಕಳೆದಿದೆ. ಹೊಸ ಕಾಂಗ್ರೆಸ್ ಸರ್ಕಾರ ರಾಜ್ಯದ ಚುಕ್ಕಾಣಿ ಹಿಡಿದಿದ್ದು, ಪಂಚ ಗ್ಯಾರಂಟಿ ಕೇಂದ್ರೀಕೃತ ಆಡಳಿತ ನಡೆಸುತ್ತಿದೆ. ಆರ್ಥಿಕ ವರ್ಷದ ಆರು ತಿಂಗಳಲ್ಲಿ ರಾಜ್ಯದ ಬಜೆಟ್ ಅನುಷ್ಠಾನದ ಆರ್ಥಿಕ ಪ್ರಗತಿಯ ಸ್ಥಿತಿಗತಿ ಕುರಿತ ಸಂಪೂರ್ಣ ವರದಿ ಇಲ್ಲಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಲ್ಕುವರೆ ತಿಂಗಳು ಆಗಿದ್ದು, ರಾಜ್ಯಭಾರ ನಡೆಸುತ್ತಿದೆ. ಹೊಸ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳೊಂದಿಗೆ ಹೊಸ ಆಡಳಿತ ನಡೆಸುತ್ತಿದೆ. ಪಂಚ ಗ್ಯಾರಂಟಿ …

Read More »

ದಾಂಡೇಲಿಗೆ ಕರೆದೊಯ್ದು ಯುವತಿ ಮೇಲೆ ಮಾರಣಾಂತಿಕ ಹಲ್ಲೆ: ಆರೋಪಿ ಅಂದರ್

ಧಾರವಾಡ: ಅಜ್ಞಾತ ಸ್ಥಳಕ್ಕೆ ಎಳೆದೊಯ್ದು ಯುವತಿ ಮೇಲೆ‌ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಳೆದ ಅಕ್ಟೋಬರ್ 8 ರಂದು ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದ‌ ಬಳಿ ಯುವತಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಏನಿದು ಪ್ರಕರಣ?: ಯುವಕ ಹಾಗೂ ಯುವತಿ ಇಬ್ಬರೂ ಸೇರಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ಹೋಗಿದ್ದರು. ಈ‌ ವೇಳೆ, ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ‌ ತಾರಕಕ್ಕೇರಿದ್ದು, ಆರೋಪಿ ಯುವಕ ಕಟರ್​ನಿಂದ ಯುವತಿಗೆ …

Read More »

ದೆಹಲಿಯಲ್ಲಿ ಇಸ್ರೇಲ್‌ನಿಂದ ಮರಳಿದ ಕನ್ನಡಿಗರನ್ನು ಬರಮಾಡಿಕೊಂಡ ಟಿ.ಬಿ.ಜಯಚಂದ್ರ

ಬೆಂಗಳೂರು/ನವದೆಹಲಿ: ಇಸ್ರೇಲ್-ಹಮಾಸ್ ಉಗ್ರರ ನಡುವೆ ಯುದ್ಧ ಮುಂದುವರಿದಿದೆ. ಇಸ್ರೇಲ್‌ನಿಂದ 212 ಭಾರತೀಯ ಪ್ರಜೆಗಳನ್ನು ಹೊತ್ತ ಚಾರ್ಟರ್ ವಿಮಾನ ದೆಹಲಿ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಲ್ಯಾಂಡ್ ಆಯಿತು. ಇದರಲ್ಲಿ ಐವರು ಕನ್ನಡಿಗರೂ ಇದ್ದು ಬೆಂಗಳೂರು ವಿಮಾನ ನಿಲ್ದಾಣ ಬಂದು ತಲುಪಿದರು. ತಾಯ್ನಾಡಿಗೆ ಆಗಮಿಸಿದ ಮೊದಲ ಕನ್ನಡಿಗ ಈರಣ್ಣ ಮಾತನಾಡಿ, ”ಇಸ್ರೇಲ್​ನಲ್ಲಿ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ. ಹಮಾಸ್ ಉಗ್ರರ ದಾಳಿ ಇಸ್ರೇಲ್ ಜನರ ಮೇಲೆ ಪ್ರಭಾವ ಬೀರಿಲ್ಲ. ಗಾಜಾ ಗಡಿ ಭಾಗದಲ್ಲಿ ಮಾತ್ರ …

Read More »

ಮೈಸೂರು ನಗರದ ಟೌನ್​ಹಾಲ್​ನಲ್ಲಿ ಇಂದು ಮಹಿಷ ದಸರಾ ಆಚರಿಸಲಾಯಿತು.

ಮೈಸೂರು: ಮಹಿಷಾಸುರನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ನಗರದ ಟೌನ್‌ಹಾಲ್​ನಲ್ಲಿ ಇಂದು ಮಹಿಷ ಉತ್ಸವ ಸಮಿತಿಯವರು ಮಹಿಷ ದಸರಾ ಆಚರಿಸಿದರು. ಈ ಸಂದರ್ಭದಲ್ಲಿ ಹಲವು ಮುಖಂಡರು ಮಾತನಾಡಿ, ಮಹಿಷಾಸುರನ ಇತಿಹಾಸ ಹಾಗೂ ಮಹಿಷ ದಸರಾಗೆ ವಿರೋಧ ವ್ಯಕ್ತಪಡಿಸುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದರು.   ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ನಗರದ ಟೌನ್‌ಹಾಲ್‌ನಲ್ಲಿ ಉತ್ಸವ ಸಮಿತಿ ಮಹಿಷ ದಸರಾ ಆಚರಿಸಿತು. ಟೌನ್‌ಹಾಲ್ ಮುಂಭಾಗ ವೇದಿಕೆ ನಿರ್ಮಾಣ ಮಾಡಲಾಗಿತ್ತು. …

Read More »

ರಿಲಯನ್ಸ್​ ಜಿಯೋ ತನ್ನ ಹೊಸ ಜಿಯೋ ಭಾರತ್ ಸರಣಿಯ 4ಜಿ ಫೋನ್​ ಬಿಡುಗಡೆ ಮಾಡಿದೆ.

ಮುಂಬೈ: ರಿಲಯನ್ಸ್ ಜಿಯೋ ಜಿಯೋಭಾರತ್ ಬಿ 1 ಎಂಬ ಹೊಸ 4 ಜಿ ಫೋನ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಕೈಗೆಟುಕುವ ಬೆಲೆಯ ಜಿಯೋಭಾರತ್ ಸರಣಿಯ ಮುಂದಿನ ಫೋನ್ ಇದು. ಈ ಫೋನ್ 2.4 ಇಂಚಿನ ಡಿಸ್​ಪ್ಲೇ, ಅಲ್ಫಾ ನ್ಯೂಮೆರಿಕ್ ಕೀ ಪ್ಯಾಡ್, ಬಹುಭಾಷಾ ಬೆಂಬಲ ಮತ್ತು 2000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ. ಬೆಲೆ 1,299 ರೂ. ಆಗಿದ್ದು, ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಯುಪಿಐ ಪಾವತಿಗಳಿಗಾಗಿ ಜಿಯೋಪೇ ಬೆಂಬಲ, ಎಫ್‌ಎಂ ರೇಡಿಯೋ, …

Read More »

ಒಂದು ತಿಂಗಳೊಳಗೆ ಶೇ. 50ರಷ್ಟು ಬಾಕಿ ಮೊತ್ತ ಬಿಡುಗಡೆ ಮಾಡಿ: ಸರ್ಕಾರಕ್ಕೆ ಗಡುವು ನೀಡಿದ ಕೆಂಪಣ್ಣ

ಬೆಂಗಳೂರು : ಒಂದು ತಿಂಗಳೊಳಗೆ ಎಲ್ಲಾ ಇಲಾಖೆಗಳಲ್ಲೂ ಕನಿಷ್ಠ ಶೇ. 50ರಷ್ಟು ಬಾಕಿ ಇರುವ ಮೊತ್ತ ಬಿಡುಗಡೆ ಮಾಡದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಚಾಮರಾಜಪೇಟೆಯಲ್ಲಿರುವ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಗುತ್ತಿಗೆದಾರರ ಸಮಸ್ಯೆಗಳು ಬಗೆಹರಿಯುವುದಕ್ಕೆ ಬದಲಾಗಿ ಹೊಸದಾಗಿ ಮತ್ತಷ್ಟು ಸಮಸ್ಯೆಗಳು ಸೇರ್ಪಡೆಯಾಗಿವೆ. ಈಗಾಗಲೇ …

Read More »