Breaking News

Monthly Archives: ಅಕ್ಟೋಬರ್ 2023

ವಿದ್ಯುತ್​ ತಂತಿ ಸ್ಪರ್ಶಿಸಿ ಬೆಳಗಾವಿಯ ಭಾಗ್ಯನಗರದ 10ನೇ ಕ್ರಾಸ್​ನಲ್ಲಿ ಬಾಲಕ ಸಾವು

ಬೆಳಗಾವಿ: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನೋರ್ವ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿಯ ಭಾಗ್ಯನಗರದ 10ನೇ ಕ್ರಾಸ್​ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಉತ್ತರ ಪ್ರದೇಶ ಮೂಲದ ಕುಟುಂಬದ 14 ವರ್ಷದ ರಜತ್ ಗೌರವ ಮೃತ ಬಾಲಕ. ಕಾರು ತೊಳೆಯುತ್ತಿದ್ದ ವೇಳೆ ವಿದ್ಯುತ್​ ತಂತಿ ಸ್ಪರ್ಶಿಸಿ ಈ ಅವಘಡ ಸಂಭವಿಸಿದೆ. 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರಜತ್ ಶಾಲೆಗೆ ರಜೆ ಇದ್ದ ಕಾರಣ, ಬೆಳಗ್ಗೆ ಮನೆ ಮನೆಗೆ ದಿನಪತ್ರಿಕೆ ಹಾಕುವ ಕೆಲಸ ಮಾಡುತ್ತಿದ್ದ. ಇಂದು …

Read More »

ಅರಣ್ಯ ಇಲಾಖೆಯಿಂದ ವೀಕ್ಷಕರ ಹುದ್ದೆಗೆ ನೇಮಕಾತಿ; ಅಕ್ಟೋಬರ್​ 26 ಅರ್ಜಿ ಸಲ್ಲಿಕೆಗೆ ಕಡೆಯ ದಿನ

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 13 ವೃತ್ತಗಳ ಹಂತದಲ್ಲಿ ಒಟ್ಟು 310 ಹುದ್ದೆಗಳ ಭರ್ತಿಗೆ ಅರ್ಜಿಗೆ ಆಹ್ವಾನಿಸಲಾಗಿದೆ. ರಾಜ್ಯ ಅರಣ್ಯ ಇಲಾಖೆಯಲ್ಲಿ ವಿವಿಧ ವೃತ್ತಗಳಲ್ಲಿ ಹಂತದಲ್ಲಿ ಖಾಲಿ ಇರುವ ಅರಣ್ಯ ವೀಕ್ಷಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 310 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 13 ವೃತ್ತಗಳ ಹಂತದಲ್ಲಿ ಈ ಹುದ್ದೆಗೆ ನೇಮಕಾತಿ ನಡೆಯಲಿದೆ. ಎಸ್​ಎಸ್​ಎಲ್​ಸಿ ಓದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ಕುರಿತು ನೇಮಕಾತಿ, …

Read More »

ಬಳ್ಳಾರಿ: ಕಾಲೇಜಿನಿಂದ ವಿದ್ಯಾರ್ಥಿನಿ ಅಪಹರಿಸಿ ಗ್ಯಾಂಗ್ ರೇಪ್

ಬಳ್ಳಾರಿ: ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆತಂಕಕಾರಿ ಘಟನೆ ಬಳ್ಳಾರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಬಳ್ಳಾರಿ ಮಹಿಳಾ ಠಾಣೆಯಲ್ಲಿ ನಾಲ್ವರ ವಿರುದ್ಧ ಸಂತ್ರಸ್ತ ಯುವತಿಯ ತಂದೆ ದೂರು ದಾಖಲಿಸಿದ್ದಾರೆ. ಬಳ್ಳಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಮುಖ ಆರೋಪಿ ನವೀನ್ ಎಂಬಾತನನ್ನು ಬಂಧಿಸಿ, ಉಳಿದವರಿಗಾಗಿ ಬಲೆ ಬೀಸಿದ್ದಾರೆ. ಸಂತ್ರಸ್ತ ಯುವತಿ ಬಳ್ಳಾರಿ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅಕ್ಟೋಬರ್ 11 ರಂದು ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ವೇಳೆ …

Read More »

ಭಾರತದ ಬೌಲಿಂಗ್​ ದಾಳಿಗೆ ನಲುಗಿದ ಪಾಕ್​.. 191ಕ್ಕೆ ಸರ್ವಪತನ

ವಿಶ್ವಕಪ್​ನ 12ನೇ ಲೀಗ್​ ಪಂದ್ಯದಲ್ಲಿ ಭಾರತ – ಪಾಕಿಸ್ತಾನ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಿದ್ದು, ಟಾಸ್​ ಗೆದ್ದ ಭಾರತ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಅಹಮದಾಬಾದ್​ (ಗುಜರಾತ್​​): ಭಾರತ ವಿಶ್ವಕಪ್​ಗೂ ಮುನ್ನ ಏಷ್ಯಾಕಪ್​ ಫೈನಲ್​ನಲ್ಲಿ ತಾನು ಬೌಲಿಂಗ್​ನಲ್ಲಿ ಸಮರ್ಥ ತಂಡ ಎಂದು ವಿಶ್ವಕ್ಕೆ ಸಂದೇಶ ನೀಡಿತ್ತು. ಅದರಂತೆ ವಿಶ್ವಕಪ್​ನ ಎರಡು ಪಂದ್ಯದಲ್ಲಿ ನಿಯಂತ್ರಿತ ಬೌಲಿಂಗ್​ ಪ್ರದರ್ಶನ ನೀಡಿತ್ತು. ಪಾಕಿಸ್ತಾನದ ವಿರುದ್ಧದ ಮೂರನೇ ಪಂದ್ಯದಲ್ಲಿ ಅದೇ ಲಯದ ಬೌಲಿಂಗ್​ನ್ನು ಮುಂದುವರೆಸಿದೆ. ಸಿರಾಜ್​ …

Read More »

ʼನಟಿ ಲೀಲಾವತಿ ಕಟ್ಟಿಸಿರೋ ಆಸ್ಪತ್ರೆಗೆ ಸರ್ಕಾರದಿಂದ ಸಲ್ಲಬೇಕಾದ ಸೂಕ್ತ ನೆರವು ಕೊಡಿಸ್ತೇವೆʼ

ಬೆಂಗಳೂರು: ಹಿರಿಯ ನಟಿ ಲೀಲಾವತಿ ಆಸ್ಪತ್ರೆ ಉದ್ಘಾಟನೆಗೆ ಬನ್ನಿ ಎಂದು ಕರೆದಿದ್ದಾರೆ, ಡೇಟ್ ಕೇಳಿದ್ದಾರೆ, ನಾನೇ ಡೇಟ್ ಕೊಡ್ತೇನೆ ಆಸ್ಪತ್ರೆಗೆ ಸಹಾಯ ಕೂಡ ಮಾಡ್ತೇನೆ ಎಂದು ಡಿಸಿಎಂ ಡಿಕೆಶಿವಕುಮಾರ್‌ ಹೇಳಿದ್ದಾರೆ. ಹಿರಿಯ ನಟಿ ಲೀಲಾವತಿ ಭೇಟಿ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಹಿರಿಯ ನಟಿ ಅವರಿಗೆ ಸೈಟ್ ಕೊಡ್ತೇವೆ, ಆಸ್ಪತ್ರೆ ಸಿಬ್ಬಂದಿ ಸರ್ಕಾರದಿಂದ ಕೇಳಿದ್ದಾರೆ. ಸೈಟ್ಕೂಡ ಹೋಲ್ಡ್ ಆಗಿದೆ, ಏನು ಅಂತ ನೋಡ್ತೇನೆ. ಸರ್ಕಾರದಿಂದ ಅವರಿಗೆ ಸಲ್ಲಬೇಕಾದ ಸೂಕ್ತ ನೆರವನ್ನು ಕೊಡಿಸುತ್ತೇವೆ …

Read More »

ಹೆಚ್‌ಡಿಕೆ ಆಲ್‌ಮೋಸ್ಟ್‌ ವಿಪಕ್ಷ ನಾಯಕ ಆಗಿದ್ದಾರೆ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಬೆಂಗಳೂರು: ಹೆಚ್‌ಡಿಕೆ ಆಲ್‌ಮೋಸ್ಟ್‌ ವಿಪಕ್ಷ ನಾಯಕ ಆಗಿದ್ದಾರೆ, ಅದಕ್ಕೆ ಮಾತಾಡ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. ಐಟಿ ದಾಳಿ ಸಂಬಂಧ ಹೆಚ್‌ಡಿಕೆ ಆರೋಪ ಮಾಡಿರುವ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ದಾಖಲೆಗಳಿದ್ದರೆ, ಪೆನ್‌ಡ್ರೈವ್, ಡೈರಿ ಎಲ್ಲಾ ಅಮಿತ್ ಶಾಗೆ ಕೊಡಿ ಎಂದು ಸಾಲು ಹಾಕಿದ್ದಾರೆ.   ವಿಪಕ್ಷದಲ್ಲಿರೋರನ್ನು ಟಾರ್ಗೆಟ್ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಗುಜರಾತ್ ಸೇರಿ ಎಲ್ಲಾ ಕಡೆ ವಿಪಕ್ಷಗಳ ಮೇಲೆ ರೇಡ್ ಮಾಡ್ತಿದ್ದಾರೆ. ಎಷ್ಟು ಜನಬಿಜೆಪಿಯವರ …

Read More »

ಕಾಂಟ್ರಾಕ್ಟರ್ ಅಸೋಸಿಯೇಷನ್ ಸರ್ಕಾರಕ್ಕೆ ಕಮಿಷನ್ ಸಂಗ್ರಹಿಸುತ್ತಿದೆ: ಬೊಮ್ಮಾಯಿ

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಗುತ್ತಿಗೆದಾರರು ಜೊತೆಯಾಗಿ ಲೂಟಿ ಮಾಡುತ್ತಿದ್ದು, ಕಾಂಟ್ರಾಕ್ಟರ್ ಅಸೋಸಿಯೇಷನ್ ಸರ್ಕಾರದ ಕಮಿಷನ್ ಕಲೆಕ್ಷನ್ ಸೆಂಟರ್ ಆಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ. ಅಕ್ರಮ ಹಣ ಪತ್ತೆಯಾಗಿರುವ ಕುರಿತು ಇಡಿ ಹಾಗೂ ಸಿಬಿಐ ಎರಡೂ ತನಿಖೆಯಾಗಲಿ ಎಂದು ಆಗ್ರಹಿಸಿದ ಅವರು, ರಾಜ್ಯ ಸರ್ಕಾರ ಬಂದಾಗಿನಿಂದ ವರ್ಗಾವಣೆಯಿಂದ ಹಿಡಿದು ಎಲ್ಲದರಲ್ಲೂ ಭ್ರಷ್ಟಾಚಾರ ಇದೆ. ಬಹಿರಂಗವಾಗಿಯೇ ಕಮಿಷನ್ ದಂಧೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಗುತ್ತಿಗೆದಾರರ …

Read More »

ಭಾರತ – ಪಾಕಿಸ್ತಾ‌ನ ಪಂದ್ಯ: ಭಾರತದ ಗೆಲುವಿಗೆ ಕ್ರಿಕೆಟ್​ ಅಭಿಮಾನಿಗಳಿಂದ ವಿಶೇಷ ಪೂಜೆ

ಬೆಳಗಾವಿ : ಭಾರತ ಮತ್ತು ಪಾಕಿಸ್ತಾನ ನಡುವಣ ವಿಶ್ವಕಪ್​ ಪಂದ್ಯದಲ್ಲಿ ಭಾರತ ತಂಡವು ದಿಗ್ವಿಜಯ ಸಾಧಿಸಲಿ ಎಂದು ಬೆಳಗಾವಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಗರದ ರಾಣಿ ಚನ್ನಮ್ಮ ವೃತ್ತದ ಬಳಿ ಇರುವ ಗಣಪತಿ ಮಂದಿರದಲ್ಲಿ ಕ್ರಿಕೆಟ್​ ಪ್ರೇಮಿಗಳು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಕಳೆದ 31 ವರ್ಷಗಳಲ್ಲಿ ನಡೆದ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ- ಪಾಕಿಸ್ತಾನ ಏಳು ಬಾರಿ ಮುಖಾಮುಖಿಯಾಗಿದೆ. ಏಳು ಪಂದ್ಯಗಳಲ್ಲೂ ಭಾರತವೇ ಗೆಲುವು ಸಾಧಿಸಿದೆ. ಹಾಗಾಗಿ, …

Read More »

ಘಟಪ್ರಭಾದಲ್ಲಿ ಅಮಾನವೀಯ ಘಟನೆ: ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ

ಬೆಳಗಾವಿ: ಬಡಾವಣೆಯ ಕೆಲವರ ಗುಂಪೊಂದು ಓರ್ವ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಘಟಪ್ರಭಾದ ಮೃತ್ಯುಂಜಯ ಸರ್ಕಲ್​​ನಲ್ಲಿ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಈ ಮಹಿಳೆ ಹನಿಟ್ರ್ಯಾಪ್ ಹಾಗೂ ಬ್ಲಾಕ್​ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದಾಳೆ ಎಂದು ಆರೋಪಿಸಿರುವ ಬಡಾವಣೆಯ ಕೆಲವರ ಗುಂಪು ಈ ರೀತಿ ದೌರ್ಜನ್ಯ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೆಲ ದಿನಗಳ …

Read More »

K.P.C.C. ಕಾರ್ಯಾಧ್ಯಕ್ಷ ಸ್ಥಾನಕ್ಕೆ ಅಂಜಲಿ ನಿಂಬಾಳ್ಕರ್ ಹೆಸರು

ಖಾನಾಪೂರ ಕ್ಷೇತ್ರದ ಮಾಜಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರ ಸ್ಥಾನಕ್ಕೆ ಮಹಿಳಾ ಕೋಟಾದಡಿ ಅವರ ಹೆಸರು ಶಿಫಾರಸು ಮಾಡಲಾಗಿದೆ ಎಂದು ಖಚಿತ ಮಾಹಿತಿ ತಿಳಿದು ಬಂದಿದೆ. ಇದರ ಮೊದಲು ಮಾಜಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಕೆಪಿಸಿಸಿ ಸದಸ್ಯರಾಗಿ, ಕೆಪಿಸಿಸಿ ವಕ್ತಾರೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.ಪಕ್ಷ ನೀಡಿದ ಜವಾಬ್ದಾರಿಯನ್ನು ಅತ್ಯಂತ ದಕ್ಷತೆಯಿಂದ ನಿಭಾಯಿಸಿರುವ ಅನುಭವ ಹೊಂದಿರುವ ಕಾರಣ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರ ಸ್ಥಾನಕ್ಕೆ ಮಹಿಳಾ ಕೋಟಾದಡಿ ಶಿಫಾರಸು …

Read More »