Breaking News

Daily Archives: ಅಕ್ಟೋಬರ್ 19, 2023

ನೋಟುಗಳ ಸುರಿಮಳೆಯ ವಿಡಿಯೋ ವೈರಲ್: ಸಚಿವ ಶಿವಾನಂದ ಪಾಟೀಲ್ ಹೇಳಿದ್ದೇನು?

ಬೆಂಗಳೂರು: “ನಾನು ಮದುವೆಗೆ ಹೋಗಬಾರದೇ?. ಅದು ಅಲ್ಲಿಯವರ ಸಂಸ್ಕೃತಿ. ಅದಕ್ಕೆ ನಾನೇನು ಮಾಡುವುದಕ್ಕೆ ಆಗುತ್ತದೆ” ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು. ಹೈದರಾಬಾದ್​ನಲ್ಲಿ ಸಚಿವ ಶಿವಾನಂದ ಪಾಟೀಲ್ ಭಾಗವಹಿಸಿದ್ದ ಮದುವೆ ಸಮಾರಂಭವೊಂದರಲ್ಲಿ ನೋಟುಗಳ ಸುರಿಮಳೆಗೈದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಹೈದರಾಬಾದ್‌ನಲ್ಲಿ ಬರ ಇದೆಯಾ?. ಅಲ್ಲಿಯ ಗೃಹ ಸಚಿವರೇ ಕಾರ್ಯಕ್ರಮಕ್ಕೆ ಬಂದಿದ್ದರು. ಈಗ ವೈರಲ್ ಮಾಡ್ತೀರಾ ನೀವು?. ಯಾರೋ …

Read More »

ಆಯುಧಪೂಜೆಗೆ ವಿಧಾನಸೌಧ, ವಿಕಾಸಸೌಧದಲ್ಲಿ ಅರಿಶಿನ ಕುಂಕುಮ ಬಳಸದಂತೆ ಸುತ್ತೋಲೆ: ಸಿಎಂ ಸ್ಪಷ್ಟನೆ

ಬೆಂಗಳೂರು: ಆಯುಧಪೂಜೆಯ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಅರಿಶಿನ, ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಹೊರಡಿಸಿರುವ ವಿಚಾರ ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುತ್ತವೆ. ಇದರಿಂದಾಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು …

Read More »

ಇಂದು ಭಾರತ-ಬಾಂಗ್ಲಾದೇಶ ಮಧ್ಯೆ ಕದನ.. ಬಲಾಬಲ

ಪುಣೆ(ಮಹಾರಾಷ್ಟ್ರ): ಮೊದಲ ಪಂದ್ಯದಲ್ಲಿ ಸ್ವಲ್ಪ ಕಷ್ಟವೆನಿಸಿದ್ರೂ ಆಸ್ಟ್ರೇಲಿಯಾ ತಂಡವನ್ನು ಭಾರತ ಸೋಲಿಸಿತು. ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸುಲಭ ಜಯ ಸಾಧಿಸಿತ್ತು. ಆದ್ರೆ ಹೈವೋಲ್ಟೇಜ್​ ಪಂದ್ಯವಾಗಿದ್ದ ಪಾಕಿಸ್ತಾನ ವಿರುದ್ಧ ನಿಜವಾದ ಸ್ಪರ್ಧೆ ಇರಲಿಲ್ಲ. ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಸ್​ಗೆ ಫೇವರಿಟ್ ಎನಿಸಿಕೊಂಡಿದೆ. ಇಂದು ಬಾಂಗ್ಲಾದೇಶದೊಂದಿಗೆ ಹಣಾಹಣಿ ನಡೆಯಲಿದೆ. ಸಾಮರ್ಥ್ಯ ಮತ್ತು ಫಾರ್ಮ್‌ನಲ್ಲಿ ರೋಹಿತ್ ತಂಡಕ್ಕೆ ಬಾಂಗ್ಲಾದೇಶ ಯಾವುದೇ ಸಾಟಿಯಲ್ಲ. ಹಾಗಂತ ಕಡೆಗಣನೆ ಸಲ್ಲದು. ಯಾಕೆಂದರೆ ಇಂಗ್ಲೆಂಡ್‌ಗೆ ಅಫ್ಘಾನಿಸ್ತಾನ ಮತ್ತು …

Read More »

ಪಾದಚಾರಿಗಳಿಗೆ ಕಾರು ಡಿಕ್ಕಿ; ಯುವತಿ ಸಾವು, ನಾಲ್ವರಿಗೆ ಗಾಯ-

ಮಂಗಳೂರು: ಫುಟ್​ಪಾತ್​ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಐವರು ಯುವತಿಯರಿಗೆ ಕಾರು ಡಿಕ್ಕಿ ಹೊಡೆದ ಘಟನೆ ಮಂಗಳೂರಿನಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ಓರ್ವ ಯುವತಿ ಸಾವನ್ನಪ್ಪಿದ್ದಾರೆ. ಸುರತ್ಕಲ್​ನ ಕಾನ ಬಾಳದ ರೂಪಶ್ರೀ (23) ಸಾವನ್ನಪ್ಪಿದವರು. ಸ್ವಾತಿ, ಹಿತ್ನವಿ, ಕೃತಿಕಾ, ಯತಿಕಾ ಗಾಯಗೊಂಡಿದ್ದಾರೆ. ಸಂಜೆ 4 ಗಂಟೆಯ ಸುಮಾರಿಗೆ ಐವರು ಯುವತಿಯರು ಮಂಗಳೂರು ಕಾರ್ಪೊರೇಷನ್ ಈಜುಕೊಳದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಎಸ್.ಎಲ್.ಶೆಟ್ ಜ್ಯುವೆಲರ್ಸ್ ಬಳಿಯ ಫುಟ್‌ಪಾತ್‌ ಬಳಸಿ ಸಂಚರಿಸುತ್ತಿದ್ದಾಗ ಹಿಂದಿನಿಂದ ಫುಟ್‌ಪಾತ್‌ ಮೇಲೇರಿ ಬಂದ ಕಾರು …

Read More »

ರಾಜ್ಯ ಕಾಂಗ್ರೆಸ್ ಸರ್ಕಾರದ ಆಯುಸ್ಸು ಬಹಳ ಕಡಿಮೆ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಆಯುಸ್ಸು ಬಹಳ ಕಡಿಮೆ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಗ್ಯಾರಂಟಿ ಜಾರಿ ಮಾಡಲಾಗದೆ ಪರಿತಪಿಸುತ್ತಿದ್ದಾರೆ. ಅವರ ತಪ್ಪುಗಳನ್ನು ಸದಾ ಎಳೆಎಳೆಯಾಗಿ ಜನರ ಮುಂದಿಡುತ್ತೇವೆ. ಕಾಂಗ್ರೆಸ್ ಸರ್ಕಾರವನ್ನು ತೆಗೆಯುವವರೆಗೂ ನಮ್ಮ ಹೋರಾಟ ನಡೆಯಲಿದೆ. ಈ …

Read More »