Breaking News

Monthly Archives: ಆಗಷ್ಟ್ 2023

ಹೆತ್ತ ಅಮ್ಮನನ್ನೇ ಕೊಂದನಾ ಕುಡುಕ ಮಗ?

ಶಿವಮೊಗ್ಗ: ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎಂದು ಕರೆಯುತ್ತಾರೆ. ಆದರೆ, ಇಂತಹ ದೇವರನ್ನೇ ಹೆತ್ತ ಮಗನೊಬ್ಬ ಕೊಂದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಭದ್ರಾವತಿ ಪಟ್ಟಣದ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಾವಿನಕೆರೆ ಕಾಲೋನಿ ‌ನಿವಾಸಿ ಸುಲೋಚನಮ್ಮ ಮೃತರು. ಆಕೆಯ ಮಗ ಸಂತೋಷ್​ ಕೊಲೆ ಆರೋಪಿ. ಕುಡಿದ ಮತ್ತಿನಲ್ಲಿ ಭಾನುವಾರ ರಾತ್ರಿ ಸಂತೋಷ್​ ತನ್ನ ತಾಯಿಯನ್ನು ಬಡಿಗೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ತೋಟದಲ್ಲಿ ಮಲಗಿ …

Read More »

ಕಾರವಾರ: ಮೀನುಗಾರರ ಬಲೆಗೆ ಬಿದ್ದ 48 ಸೆ.ಮೀ ಉದ್ದ, 1.2 ಕೆಜಿ ತೂಕದ ಬಂಗುಡೆ!

ಕಾರವಾರ : ಭಾರತದಲ್ಲಿ ಇದುವರೆಗೆ ಪತ್ತೆಯಾದ ಬಂಗುಡೆ ಮೀನುಗಳಲ್ಲಿ ಅತಿ ದೊಡ್ಡದು ಹಾಗೂ ಉದ್ದವಿರುವ ಬಂಗುಡೆ ಮೀನೊಂದು ಕಾರವಾರದ ಅರಬ್ಬಿ ಸಮುದ್ರದಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ. ನೋಡಲು ಜನರು ಮುಗಿಬಿದ್ದರು. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಆನಂದು ರಾಮಾ ಹರಿಕಂತ್ರ ಅವರಿಗೆ ಸೇರಿದ, ಎಂ.ಐ. ಇಂಜಿನ್​ ಹೊಂದಿದ ಪಾತಿ ದೋಣಿಯ ಬೀಡು ಬಲೆಗೆ ಮೀನು ಬಿದ್ದಿದೆ. ಈ ಬಂಗುಡೆ 48 ಸೆಂ.ಮೀ ಉದ್ದವಿದ್ದು, ಸುಮಾರು 12 ಸೆಂ.ಮೀ ಅಗಲವಿದೆ. 1.2 ಕೆ.ಜಿ …

Read More »

ಕೋವಿಡ್ ಅಕ್ರಮ ತನಿಖೆಗೆ ಆಯೋಗ ರಚನೆ ಹಿಂದೆ ದುರುದ್ದೇಶವಿದೆ: ಸುಧಾಕರ್ ಕಿಡಿ

ಬೆಂಗಳೂರು: ಕೋವಿಡ್ ವೇಳೆ ಔಷಧ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖಾ ಆಯೋಗ ರಚನೆ ರಾಜಕೀಯ ಪ್ರೇರಿತವಾಗಿದೆ. ಈ ತನಿಖೆಗೆ ಆದೇಶ ನೀಡಿರುವುದರ ಹಿಂದೆ ದುರುದ್ದೇಶ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯ ಮಾಜಿ ಸಚಿವ ಡಾ. ಕೆ.ಸುಧಾಕರ್ ಆರೋಪಿಸಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್ ನಿರ್ವಹಣೆ ವೇಳೆ ನಡೆದಿರುವ ಔಷಧ, ಪರಿಕರ ಇತ್ಯಾದಿ ಖರೀದಿ, ಆಮ್ಲಜನಕ ಕೊರತೆಯಿಂದ ಸಂಭವಿಸಿದ ಸಾವಿನ ಕುರಿತು …

Read More »

ರಾಜ್ಯದೆಲ್ಲೆಡೆ ಟೊಮೆಟೊ ದರಗಳಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದೆ.

ಬೆಂಗಳೂರು : ಸುಮಾರು ಒಂದೂವರೆ, ಎರಡು ತಿಂಗಳ ಕಾಲ ಕೆ.ಜಿಗೆ 100 ರಿಂದ 150 ರೂಪಾಯಿಯಿದ್ದ ಟೊಮೆಟೊ ಬೆಲೆ ಇದೀಗ 20 ರೂ.ಗೆ ಕುಸಿದಿದೆ. ನಗರದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬರುತ್ತಿದ್ದು, ದರ ಇಳಿಕೆಯಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.   ಆಂಧ್ರಪ್ರದೇಶದ ಮಾರುಕಟ್ಟೆಯಿಂದ ಯಥೇಚ್ಛವಾಗಿ ಟೊಮೆಟೊ ಪೂರೈಕೆಯಾಗುತ್ತಿದೆ. ಬೆಂಗಳೂರು ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರದಿಂದ ಬರುವ ಟೊಮೆಟೊ ಪ್ರಮಾಣವೂ ಹೆಚ್ಚಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆ.ಜಿ ನಾಟಿ ಟೊಮೆಟೊ ಬಾಕ್ಸ್ …

Read More »

ಗಲ್ಲಿಗೆ ಬದಲು ಜೀವಾವಧಿ: ಅಪರಾಧಿಯ ಶಿಕ್ಷೆ ಬದಲಿಸಿದ ಹೈಕೋರ್ಟ್

ಬೆಂಗಳೂರು : ತನ್ನ ಇಬ್ಬರು ಪತ್ನಿಯರು ಹಾಗೂ ಓರ್ವ ಪುತ್ರಿಯನ್ನು ಕೊಲೆಗೈದು ಕಳೆದ 30 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಲಬುರಗಿ ಜಿಲ್ಲೆಯ ಅಫ್ಜಲ್ಪುರದ ಅಪರಾಧಿ ಸಾಯಿಬಣ್ಣ ಎಂಬಾತನಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಮಾರ್ಪಡಿಸಿರುವ ಹೈಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಅಪರಾಧಿಗೆ 70 ವರ್ಷ ವಯಸ್ಸಾಗಿದೆ ಎಂಬ ಕಾರಣದಿಂದ ಕೋರ್ಟ್ ಶಿಕ್ಷೆಯನ್ನು ಮಾರ್ಪಡಿಸಿತು. ಈ ಆದೇಶದಿಂದ ಆರೋಪಿ ಗಲ್ಲು ಶಿಕ್ಷೆಯಿಂದ ಪಾರಾಗಿದ್ದು, ತನ್ನ ಜೀವ ಇರುವವರೆಗೂ ಜೈಲಿನಲ್ಲಿರಬೇಕಾಗಿದೆ. ತನಗೆ ವಿಧಿಸಿದ್ದ ಜೈಲು …

Read More »

ಮಹಾರಾಜ ಟ್ರೋಫಿಯ 2ನೇ ಸೆಮಿಫೈನಲ್​ನಲ್ಲಿ ಹಾಲಿ ಚಾಂಪಿಯನ್​ ಗುಲ್ಬರ್ಗ ತಂಡಕ್ಕೆ ಸೋಲುಣಿಸಿದ ಮೈಸೂರು ವಾರಿಯರ್ಸ್​ ಫೈನಲ್​ ತಲುಪಿತು.

ಬೆಂಗಳೂರು: ಕರ್ನಾಟಕ ತೊರೆದು ವಿದರ್ಭ ಕ್ರಿಕೆಟ್​ ಸೇರಿರುವ ಬ್ಯಾಟರ್​ ಕರುಣ್ ನಾಯರ್ ಅಬ್ಬರದ ಶತಕ ಹಾಗೂ ರವಿಕುಮಾರ್ ಸಮರ್ಥ್ ಅವರ ಅರ್ಧಶತಕವು ಹಾಲಿ ಚಾಂಪಿಯನ್​ ಗುಲ್ಬರ್ಗಾ ಮಿಸ್ಟಿಕ್ಸ್​ ತಂಡಕ್ಕೆ ಸೋಲು ತಂದು ಮಹಾರಾಜ ಟ್ರೋಫಿಯಲ್ಲಿ‌ ಮೈಸೂರು ವಾರಿಯರ್ಸ್ ತಂಡ ಫೈನಲ್ ಟಿಕೆಟ್​ ಪಡೆಯುವಂತೆ ಮಾಡಿತು. ಎರಡನೇ ಸೆಮಿಫೈನಲ್​ ಪಂದ್ಯದಲ್ಲಿ ತೀವ್ರ ಹಣಾಹಣಿ ಮಧ್ಯೆ ಗುಲ್ಬರ್ಗಾ 36 ರನ್‌ಗಳಿಂದ ಪರಾಜಯ ಕಂಡಿತು. ಇಂದು (ಮಂಗಳವಾರ) ಹುಬ್ಬಳ್ಳಿ ಟೈಗರ್ಸ್​ ಮತ್ತು ಮೈಸೂರು ವಾರಿಯರ್ಸ್​ ನಡುವೆ …

Read More »

ರಜನಿಕಾಂತ್​ ನಟನೆಯ ‘ಜೈಲರ್​’ ಸಿನಿಮಾ ಬಿಡುಗಡೆಯಾದ 18ನೇ ದಿನಕ್ಕೆ 600 ಕೋಟಿ ರೂಪಾಯಿ ಕ್ಲಬ್​ ಸೇರಿದೆ.

ರಜನಿಕಾಂತ್​ ನಟನೆಯ ‘ಜೈಲರ್​’ ಸಿನಿಮಾ ಬಿಡುಗಡೆಯಾದ 18ನೇ ದಿನಕ್ಕೆ 600 ಕೋಟಿ ರೂಪಾಯಿ ಕ್ಲಬ್​ ಸೇರಿದೆ. ‘ಜೈಲರ್​’.. ಸೂಪರ್​ ಹಿಟ್​ ಸೌತ್​ ಸಿನಿಮಾ. ಆಗಸ್ಟ್​ 10ರಂದು ಬಿಡುಗಡೆಯಾಗಿ, ಮೂರು ವಾರ ಕಳೆದರೂ ನಾನ್​ ಸ್ಟಾಪ್​ ಇಲ್ಲದೇ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಕಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​ ನಟನೆಯನ್ನು ಕಣ್ತುಂಬಿಕೊಳ್ಳಲು ಜನರು ಥಿಯೇಟರ್​ಗೆ ಮುಗಿಬೀಳುತ್ತಿದ್ದಾರೆ. ಈ ಕಾರಣಕ್ಕಾಗಿ ಚಿತ್ರವು ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್​ ಮಾಡುತ್ತಿದೆ. ರಿಲೀಸ್​ ಆದ 18ನೇ ದಿನಕ್ಕೆ 600 ಕೋಟಿ ರೂಪಾಯಿ …

Read More »

ರಿಲಯನ್ಸ್​ ಮಂಡಳಿಗೆ ಅಂಬಾನಿ ಪುತ್ರರ ನೇಮಕ.. ಕಂಪನಿಯ ಅಧಿಕಾರ ಹಸ್ತಾಂತರಕ್ಕೆ ಉದ್ಯಮಿ ಮುಖೇಶ್​ ಸಜ್ಜು?

ಮುಂಬೈ: ಜಿಯೋ ಮೂಲಕ ಎಲ್ಲರ ಮನೆಮಾತಾಗಿರುವ ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ತಮ್ಮ ಕಂಪನಿಯ ಅಧಿಕಾರವನ್ನು ತಮ್ಮ ಮಕ್ಕಳ ಕೈಗೆ ನೀಡಲು ಅಂತಿಮ ಸಿದ್ಧತೆ ನಡೆಸಿದ್ದಾರೆ. ಕಳೆದ ವರ್ಷವಷ್ಟೇ ಆಕಾಶ್​ ಅಂಬಾನಿಯನ್ನು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷರಾಗಿ ನೇಮಿಸಿದ್ದರು. ಇದೀಗ ಇನ್ನಿಬ್ಬರು ಮಕ್ಕಳಾದ ಇಶಾ ಮತ್ತು ಅನಂತ್​ ಅಂಬಾನಿಯನ್ನೂ ಕಂಪನಿಗೆ ನೇಮಕ ಮಾಡಲಾಗಿದೆ. ಅಂಬಾನಿ ಪುತ್ರರಾದ ಇಶಾ, ಆಕಾಶ್ ಮತ್ತು ಅನಂತ್ ಅಂಬಾನಿ ಅವರನ್ನು ಸೋಮವಾರ ಎನರ್ಜಿ ಟು …

Read More »

ನಮ್ಮ ಪಕ್ಷದ 19 ಮಂದಿ ಶಾಸಕರು ಸಹ ಪಕ್ಷದ ನಿಷ್ಠೆ ಉಳ್ಳವರು ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ

ಬೆಂಗಳೂರು : ಎರಡು ರಾಷ್ಟ್ರೀಯ ಪಕ್ಷಗಳು ಏನೇ ಕಸರತ್ತು ನಡೆಸಲಿ. ನಮ್ಮ ಪಕ್ಷದ 19 ಮಂದಿ ಶಾಸಕರು ಪಕ್ಷದ ನಿಷ್ಠೆ ಉಳ್ಳವರಾಗಿದ್ದು, ಯಾರೂ ಕೂಡ ಜೆಡಿಎಸ್ ಬಿಡುವುದಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ಅವರು ಆಪರೇಷನ್ ಹಸ್ತ ಎಂಬ ಮಾತಿಗೆ ಪ್ರತಿಕ್ರಿಯಿಸಿದರು. ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಶಾಸಕರು ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜೆಡಿಎಸ್ …

Read More »

ಕೆಎಸ್​ಆರ್​ಟಿಸಿ ಬಸ್ ಮತ್ತು ಕಾರಿನ ನಡುವೆ ರಾಮನಗರದಲ್ಲಿ ಭೀಕರ ಅಪಘಾತ ಸಂಭವಿಸಿದೆ.

ರಾಮನಗರ: ಕೆಎಸ್​ಆರ್​ಟಿಸಿ ಬಸ್ ಮತ್ತು ಕ್ವಾಲಿಸ್ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಸಾತನೂರು ಕೆಮ್ಮಾಳೆ ಗೇಟ್​ಬಳಿ ಇಂದು ನಡೆದಿದೆ. ಮಹದೇಶ್ವರ ಬೆಟ್ಟದಿಂದ ವಾಪಸ್ ಆಗ್ತಿದ್ದ ಕಾರು ಬೆಂಗಳೂರಿನಿಂದ ಮಳವಳ್ಳಿ ಕಡೆ ಸಂಚರಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಕಾರು ಸಂಪೂರ್ಣ ಜಖಂ ಆಗಿದೆ. ಬಸ್‌ನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಸಾತನೂರು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರವಾಗಿ ಗಾಯಗೊಂಡವರನ್ನು ರಾಮನಗರದ ಜಿಲ್ಲಾಸ್ಪತ್ರೆಗೆ …

Read More »