Breaking News

Daily Archives: ಆಗಷ್ಟ್ 20, 2023

ರಷ್ಯಾದ ಚಂದ್ರಯಾನ ನೌಕೆಯಾದ ಲೂನಾ -25 ಕಕ್ಷೆ ಇಳಿಕೆ ವೇಳೆ ತಾಂತ್ರಿಕ ಸಮಸ್ಯೆಯಿಂದಾಗಿ ಚಂದ್ರನ ಮೇಲೆ ಅಪ್ಪಳಿಸಿದೆ.

ನವದೆಹಲಿ: ಭಾರತಕ್ಕೂ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಲು ಉದ್ದೇಶಿಸಿದ್ದ ರಷ್ಯಾದ ಲೂನಾ-25 ಬಾಹ್ಯಾಕಾಶ ನೌಕೆಯು ತಾಂತ್ರಿಕ ಸಮಸ್ಯೆಗೆ ತುತ್ತಾಗಿ ಚಂದ್ರನ ಮೇಲೆ ಅಪ್ಪಳಿಸಿ ಪತನವಾಗಿದೆ. 47 ವರ್ಷಗಳ ಬಳಿಕ ಮತ್ತೆ ಚಂದ್ರಯಾನ ಕೈಗೊಂಡಿದ್ದ ಸಾಹಸ ವಿಫಲವಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆಯಾದ ರೋಸ್ಕೋಸ್ಮಾಸ್ ಭಾನುವಾರ ತಿಳಿಸಿದೆ. ಆಗಸ್ಟ್​ 21 ರಂದು ರಷ್ಯಾ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ಚಂದ್ರನ ಅಧ್ಯಯನಕ್ಕಾಗಿ ಲೂನಾ- 25 ರಾಕೆಟ್​ ಅನ್ನು ಉಡಾವಣೆ ಮಾಡಿತ್ತು. ಚಂದ್ರಯಾನ-3 …

Read More »

ಕಾಂಗ್ರೆಸ್​ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರಿಗೆ ಅರಸು ಪ್ರಶಸ್ತಿ ನೀಡಿ ಸಿಎಂ ಸಿದ್ದರಾಮಯ್ಯ ಗೌರವಿಸಿದರು.

ಬೆಂಗಳೂರು: ದೇವರಾಜ ಅರಸು ಅವರ ಕಾರ್ಯಕ್ರಮಗಳ ಅನುಕೂಲ ಪಡೆದ ಫಲಾನುಭವಿಗಳು ಮತ್ತು ಅವರ ಮಕ್ಕಳು ಶಾಶ್ವತವಾಗಿ ಸಾಮಾಜಿಕ ನ್ಯಾಯದ ಪರವಾಗಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯುವ ಸಮೂಹಕ್ಕೆ ಕರೆ ನೀಡಿದ್ದಾರೆ. ದೇವರಾಜ ಅರಸ ಅವರು ಜಾರಿಗೆ ತಂದಿದ್ದು, ಕಾಗೋಡು ತಿಮ್ಮಪ್ಪನವರು ಹೋರಾಟ ಮಾಡಿದ್ದು, ಉಳುವವನೇ ಭೂಮಿ ಒಡೆಯ ಆಗಬೇಕು ಎನ್ನುವುದಾಗಿತ್ತು. ಆದರೆ, ಈಗ ಬಿಜೆಪಿ ಬಂದ ಮೇಲೆ “ಉಳ್ಳವನೇ ಭೂಮಿ ಒಡೆಯ” ಎನ್ನುವಂತಾಗಿದೆ ಎಂದು ಟೀಕಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ …

Read More »

ಸಿಎಂ ಸಿದ್ದರಾಮಯ್ಯ ಭೇಟಿಯಾದ ಎಸ್​ಟಿ ಸೋಮಶೇಖರ್

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಜೊತೆ ವೇದಿಕೆ ಹಂಚಿಕೊಂಡು ರಾಜಕೀಯ ಚರ್ಚೆಯ ಕೇಂದ್ರ ಬಿಂದುವಾಗಿರುವ ಯಶವಂತಪುರ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಆಪರೇಷನ್ ಹಸ್ತದ ಚರ್ಚೆ ನಡುವೆ ಸೋಮಶೇಖರ್ ಅವರ ಈ ನಡೆ ಇದೀಗ ಸಾಕಷ್ಟು ಕುತೂಹಲ ಮೂಡಿಸಿದೆ. ಮಾಜಿ ಸಚಿವ ಹಾಗೂ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುಮಾರಪಾರ್ಕ್ ಈಸ್ಟ್​​ನಲ್ಲಿರುವ ಸಿಎಂ ಅಧಿಕೃತ ನಿವಾಸದಲ್ಲಿ …

Read More »

ಮೂಡಲಗಿ ವಲಯದ 29 ಪ್ರೌಢ ಶಾಲೆಗಳಿಂದ ಶೇ 100 ರಷ್ಟು ಫಲಿತಾಂಶ

ಗೋಕಾಕ : ಶೈಕ್ಷಣಿಕ ಕ್ಷೇತ್ರದಲ್ಲಿ ಮೂಡಲಗಿ ವಲಯವು ಉತ್ತಮ ಸಾಧನೆ ಮಾಡುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿಯೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಲು ಶಿಕ್ಷಕರು ಶ್ರಮಿಸುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಮೂಡಲಗಿ ಶೈಕ್ಷಣಿಕ ವಲಯದ 2021-22ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ 29 ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸ್ಮರಣಿಕೆ ಹಾಗೂ ತಮ್ಮ ಅಭಿನಂದನಾ ಪತ್ರ ವಿತರಿಸಿ …

Read More »

ರಾಜ್ಯದಲ್ಲಿ ಮಹಿಳೆಯರಿಗೂ ಮುಖ್ಯಮಂತ್ರಿ ಆಗುವ ಯೋಗ ಕೂಡಿ ಬರಲಿ ಎಂದು ಕೋಡಿಮಠದ ಡಾ.ಶಿವಾನಂದ ಸ್ವಾಮೀಜಿ

ಬೆಳಗಾವಿ: ರಾಜ್ಯದಲ್ಲಿ ಮಹಿಳೆಯರಿಗೂ ಮುಖ್ಯಮಂತ್ರಿ ಆಗುವ ಯೋಗ ಕೂಡಿ ಬರಲಿ ಎಂದು ಕೋಡಿಮಠದ ಡಾ.ಶಿವಾನಂದ ಸ್ವಾಮೀಜಿ ಹೇಳಿದರು. ಬೆಳಗಾವಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯವೇ ಈಗ ಮಹಿಳೆಯರದ್ದು. ಅವರಿಂದ ಎಲ್ಲವನ್ನೂ ಕಿತ್ತುಕೊಳ್ಳುವ ಕೆಲಸ ನಡೆಯುತ್ತಿದೆ. ಮಹಿಳೆಯರು ಮುಖ್ಯಮಂತ್ರಿ ಆದರೆ ತಪ್ಪೇನು? ಅವರಿಗೂ ಒಂದು ದಿನ ಅಧಿಕಾರ ಸಿಗಲಿ ಎಂದರು. ನಾಯಕತ್ವ ಬದಲಾವಣೆ ವಿಚಾರಕ್ಕೆ, ರಾಜಕಾರಣದ ಬಗ್ಗೆ ಏನೂ ಹೇಳಲ್ಲ. ಆದರೆ, ಸರ್ಕಾರಕ್ಕೆ‌ ತೊಂದರೆಯಿಲ್ಲ. ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ …

Read More »

“ಬಾಂಬೆ ಬಾಯ್ಸ್ ತಾವು ತೋಡಿದ ಬಾವಿಗೆ ಬಿಜೆಪಿಗರು ತಾವೇ ಬಿದ್ದಿದ್ದಾರೆ. : ಸಚಿವ ಸತೀಶ್​ ಜಾರಕಿಹೊಳಿ

ಚಾಮರಾಜನಗರ: “ನಮ್ಮನ್ನು ಜಗ್ಗಬಾರದು ಎಂದೇ ನಾವು ಅವರನ್ನು ಜಗ್ಗಿದ್ದೇವೆ” ಎಂದು ಹೇಳುವ ಮೂಲಕ ಆಪರೇಷನ್​ ಹಸ್ತ ವಿಚಾರವನ್ನು ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ಒಪ್ಪಿಕೊಂಡರು. ಚಾಮರಾಜನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಬಿಜೆಪಿಗರು ಸುಮ್ಮನಿರುವವರಲ್ಲ. ಡಿಸ್ಟರ್ಬ್​ ಮಾಡುತ್ತಲೇ ಇರುತ್ತಾರೆ. ರಾಜಕೀಯದಲ್ಲಿ ಇವೆಲ್ಲ ಇದ್ದಿದ್ದೇ” ಎಂದರು. “ವಿವಿಧ ಪಕ್ಷಗಳಿಂದ 20 ಮಂದಿ ಕಾಂಗ್ರೆಸ್​ಗೆ ಬರಲಿದ್ದಾರೆ. ಆಪರೇಷನ್​ ಕಮಲ ಸಂಬಂಧ ಆಡಳಿತ ನಡೆಸುವವರಿಗೆ 24 ತಾಸು ಕೂಡ ಭಯ ಇದ್ದೇ ಇರುತ್ತದೆ” ಎಂದು ಹೇಳಿದರು. ಬಳಿಕ …

Read More »

ಲೋಕಸಭೆ ಚುನಾವಣೆ: ಮಕ್ಕಳು, ಪತ್ನಿ, ಸಹೋದರರ ಕಣಕ್ಕಿಳಿಸಲು ‘ಕೈ’ ಕಲಿಗಳ ಕಸರತ್ತು

ಬೆಂಗಳೂರು: 2024ರ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳನ್ನು ಗೆಲ್ಲಿಸುವ ಒತ್ತಡಕ್ಕೆ ಸಿಲುಕಿರುವ ರಾಜ್ಯ ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಕುಟುಂಬಸ್ಥರನ್ನೇ ಕಣಕ್ಕಿಳಿಸಲು ಕಸರತ್ತು ನಡೆಸಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿರುವುದರಿಂದ ಅತ್ಯಧಿಕ ಸಂಸದರನ್ನು ಗೆಲ್ಲಿಸಿಕೊಡುವ ಟಾರ್ಗೆಟ್ ಅನ್ನು ಪಕ್ಷದ ಹೈಕಮಾಂಡ್ ಕೆಪಿಸಿಸಿಗೆ ನೀಡಿದೆ. ಬಿಜೆಪಿ ವಿರುದ್ಧ ಹೆಚ್ಚಿನ ಕ್ಷೇತ್ರಗಳನ್ನು ಜಯಿಸುವ ಸಲುವಾಗಿ ಕೆಲವು ಕಡೆ ಸಚಿವರನ್ನೇ ಕಣಕ್ಕಿಳಿಸಲು ಹೈಕಮಾಂಡ್ ಯೋಚಿಸುತ್ತಿದೆ. ಇದರ ಸುಳಿವು ಅರಿತ ಸಚಿವರು ಚುನಾವಣೆಗೆ ತಾವು ಕಣಕ್ಕಿಳಿಯುವ …

Read More »

188 ಹೊಸ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಸಂಪುಟ ತೀರ್ಮಾನ:

ಬೆಂಗಳೂರು: ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್ ಆರಂಭಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.   ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, 188 ಹೊಸ ಇಂದಿರಾ ಕ್ಯಾಂಟೀನ್ ಸ್ಥಾಪನೆ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಹಾಗೂ ಹಾಲಿ ಇರುವ ಕ್ಯಾಂಟೀನ್‌ಗಳ ದುರಸ್ತಿ, ನವೀಕರಣ ಹಾಗೂ ಗುಣಮಟ್ಟ ಉತ್ತಮಪಡಿಸಲು ಒಟ್ಟು …

Read More »

ನಕಲಿ ಖಾತೆ ತೆರೆದು ಅಕ್ರಮ ಹಣ ವ್ಯವಹಾರ ನಡೆಸಿದ ಹ್ಯಾಕರ್​: ರಿಯಾದ್​ನಲ್ಲಿ ಕಡಬದ ಯುವಕ ಜೈಲುಪಾಲು

ಮಂಗಳೂರು (ದಕ್ಷಿಣ ಕನ್ನಡ): 2021ರಲ್ಲಿ ಇಲ್ಲಿನ ಬಿಕರ್ನಕಟ್ಟೆ ಮೂಲದ ಶೈಲೇಶ್ ಕುಮಾರ್‌ ಎಂಬವರ ಫೇಸ್​ಬುಕ್​ ಖಾತೆಯನ್ನು ಹ್ಯಾಕ್​ ಮಾಡಿ ಅದರಲ್ಲಿ ಸೌದಿ ರಾಜನ ಬಗ್ಗೆ ಅವಹೇಳನಕಾರಿ ಕಮೆಂಟ್ ಬರೆದ ಪರಿಣಾಮ ಆತ ಸೌದಿ ಜೈಲಿನಲ್ಲಿ ಬಂಧಿಯಾಗಿದ್ದ. ಈಗ ಅದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಇದರಲ್ಲಿ ನಕಲಿ ಬ್ಯಾಂಕ್​ ಖಾತೆ ತೆರೆದು ಅಕ್ರಮ ಹಣ ವ್ಯವಹಾರ ಮಾಡಲಾಗಿದೆ. ಇದರಿಂದ ಈಗ ಜಿಲ್ಲೆಯ ಕಡಬದ ಐತೂರು ಗ್ರಾಮದ ಚಂದ್ರಶೇಖರ ಎಂ.ಕೆ. ಎಂಬ …

Read More »

ಯೋಧರ ಸೇವೆ ಸದಾ ಸ್ಮರಣೀಯ..’: ಲಡಾಖ್‌ ದುರಂತಕ್ಕೆ ಮೋದಿ, ಖರ್ಗೆ, ರಾಹುಲ್‌ ಸೇರಿದಂತೆ ಗಣ್ಯರ ಸಂತಾಪ

ನವದೆಹಲಿ : ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಲೇಹ್ ಜಿಲ್ಲೆಯ ಕಯಾರಿ ಪಟ್ಟಣದಿಂದ 7 ಕಿ.ಮೀ ದೂರದಲ್ಲಿ ಸೇನಾ ಟ್ರಕ್​ ಆಳವಾದ ಕಂದಕಕ್ಕೆ ಉರುಳಿಬಿದ್ದು ಜೂನಿಯರ್ ಕಮಿಷನ್ಡ್ ಆಫೀಸರ್ ಜೆಸಿಒ (Junior Commissioned Officer-JCO) ಸೇರಿದಂತೆ ಒಂಬತ್ತು ಮಂದಿ ಸೈನಿಕರು ಮೃತಪಟ್ಟ ದುರ್ಘಟನೆ ನಿನ್ನೆ ನಡೆದಿದೆ. ಯೋಧರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.     ಪ್ರಧಾನಮಂತ್ರಿ ಕಾರ್ಯಾಲಯವು ಸಾಮಾಜಿಕ …

Read More »