Breaking News

Daily Archives: ಆಗಷ್ಟ್ 13, 2023

ಅತಿಲೋಕ ಸುಂದರಿ ಶ್ರೀದೇವಿ ನೆನೆದ ಗೂಗಲ್​ ಡೂಡಲ್​

ಬಾಲಿವುಡ್​ ಲೇಡಿ ಸೂಪರ್​ ಸ್ಟಾರ್​ ಶ್ರೀದೇವಿ ಹುಟ್ಟಿದ ದಿನವಿಂದು. ಡೂಡಲ್​ನಲ್ಲಿ ಅತಿಲೋಕ ಸುಂದರಿಯ ಚಿತ್ರವನ್ನು ಹಂಚಿಕೊಂಡು, ಗೂಗಲ್​ ಜನ್ಮದಿನದ ಶುಭಕೋರಿದೆ. ಇಂದು ಬಾಲಿವುಡ್​ ನಟಿ ಶ್ರೀದೇವಿ ಹುಟ್ಟಿದ ದಿನ. ಅವರಿಂದು ನಮ್ಮೊಂದಿಗೆ ಇದ್ದಿದ್ದರೆ ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. 90ರ ದಶಕದಲ್ಲಿ ಬಣ್ಣದ ಲೋಕವನ್ನಾಳಿ ಮಿಂಚಿ ಮರೆಯಾದ ಈ ನಟಿಗೆ ಈಗಲೂ ದೊಡ್ಡ ಅಭಿಮಾನಿಗಳ ದಂಡಿದೆ. ಈ ವಿಶೇಷ ದಿನದಂದು ಫ್ಯಾನ್ಸ್ ಅವರನ್ನು ನೆನೆದು ಬೇಸರ ಪಡುತ್ತಿದ್ದಾರೆ. ಇದೀಗ …

Read More »

ಬೆಂಗಳೂರಿನ ಹೋಟೆಲ್​ ಟಾರ್ಗೆಟ್ ಮಾಡಿ ಬಾಂಬ್ ಬೆದರಿಕೆ

ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆ ಸಮೀಪದಲ್ಲಿರುವಾಗಲೇ ಕೆಲ ಕಿಡಿಗೇಡಿಗಳು ಬೆಂಗಳೂರಿನ ಹೋಟೆಲ್​ ಟಾರ್ಗೆಟ್ ಮಾಡಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಪ್ರತಿಷ್ಠಿತ ಐಶಾರಾಮಿ ಹೋಟೆಲ್​ಗಳಲ್ಲಿ ಒಂದಾದ ಶಾಂಗ್ರೀಲಾಗೆ ಬಾಂಬ್ ಬೆದರಿಕೆ ಇ-ಮೇಲ್ ರವಾನಿಸಲಾಗಿದೆ‌. ಬೆಂಗಳೂರಿನ ಶಾಂಗ್ರೀಲಾ ಹೋಟೆಲ್ ಸೇರಿ ದೇಶದ ಎಲ್ಲಾ ಬ್ರಾಂಚ್​ಗೂ ಬಾಂಬ್ ಬೆದರಿಕೆ ಹಾಕಿದ್ದಾರೆ. luisamaclare@proton.me ಎಂಬ ಇ -ಮೇಲ್ ಐಡಿ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಎಲ್ಲ ಬ್ರಾಂಚ್​ಗಳಲ್ಲೂ ಬಾಂಬ್ ಇಟ್ಟಿರೋದಾಗಿ ತಿಳಿಸಿದ್ದಾರೆ. ಬೆದರಿಕೆ ಸಂದೇಶ ಬಂದ …

Read More »

ಸ್ವಾತಂತ್ರ್ಯ ದಿನಾಚರಣೆಗೆ ಕೇವಲ ಎರಡು ದಿನಗಳು ಬಾಕಿ ಉಳಿದಿದ್ದು, ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯಲ್ಲಿ ವಿವಿಧ ಸಶಸ್ತ್ರ ಪಡೆಗಳ ಸಂಪೂರ್ಣ ಉಡುಗೆ ಪೂರ್ವಾಭ್ಯಾಸ

ನವದೆಹಲಿ: ಆ.15 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿಯಾಗಿ, ಭಾರತೀಯ ಸಶಸ್ತ್ರ ಪಡೆಗಳ ಡ್ರೆಸ್ ರಿಹರ್ಸಲ್ ಇಂದು ಇಲ್ಲಿನ ರಾಷ್ಟ್ರೀಯ ರಾಜಧಾನಿಯ ಕೆಂಪು ಕೋಟೆಯಲ್ಲಿ ಪ್ರಾರಂಭವಾಗಿದೆ. ಇಂದಿನ ಫುಲ್ ಡ್ರೆಸ್ ರಿಹರ್ಸಲ್‌(ಸಂಪೂರ್ಣ ಉಡುಗೆ ಪೂರ್ವಾಭ್ಯಾಸ)ನಲ್ಲಿ ಮಿಲಿಟರಿ ಬ್ಯಾಂಡ್, ನೌಕಾ ಮತ್ತು ವಾಯುಪಡೆಯ ಘಟಕಗಳು ಸೇರಿದಂತೆ ವಿವಿಧ ತುಕಡಿಗಳು ಭಾಗವಹಿಸಿದ್ದವು. 77ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಭದ್ರತೆ ಬಿಗಿಗೊಳಿಸಲಾಗಿದೆ. ಭಾರತ ಮಂಗಳವಾರ ತನ್ನ 77ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ ಪ್ರಧಾನ …

Read More »

ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದುಭೀಕರ ರಸ್ತೆ ಅಪಘಾತ

ಚಿತ್ರದುರ್ಗ: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದುಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ದಂಪತಿ ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದುರ್ಘಟನೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್​ ಠಾಣೆ ವ್ಯಾಪ್ತಿಯ ಮಲ್ಲಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ನಡೆದಿದೆ. ಮೃತರನ್ನು ಸಂಗನಬಸವ (36), ರೇಖಾ (29), ಅಗಸ್ತ್ಯ (7) ಹಾಗೂ ಭೀಮಾಶಂಕರ್ (26) ಎಂದು ಗುರುತಿಸಲಾಗಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಡಗಿ ಗ್ರಾಮದ ನಿವಾಸಿಗಳಾದ ಖಾಸಗಿ ಬ್ಯಾಂಕ್​​ ನೌಕರರಾಗಿರುವ …

Read More »

ಭಾರತೀಯ ಮನೋವೈದ್ಯರ ಸಂಘದ ರಾಜ್ಯ ಶಾಖೆ ವಾರ್ಷಿಕ ಸಮ್ಮೇಳನದಲ್ಲಿ ಇಂದು ಎ ಎಸ್‌ ಕಿರಣ್ ಕುಮಾರ್​ ಅವರಿಗೆ ಡಾ. ಆರ್ ಎಲ್ ಕಪೂರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಾಗಲಕೋಟೆ: ಇಸ್ರೋದ ಮಾಜಿ ಅಧ್ಯಕ್ಷ ಪದ್ಮಶ್ರೀ ಪುರಸ್ಕೃತ ಪ್ರೊ. ಎ ಎಸ್‌ ಕಿರಣ್ ಕುಮಾರ್ ಅವರಿಗೆ ಶನಿವಾರ ಡಾ. ಆರ್ ಎಲ್ ಕಪೂರ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ಬಾಗಲಕೋಟೆ ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಎಸ್ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಹಾನಗಲ್ ಶ್ರೀ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಭಾರತೀಯ ಮನೋವೈದ್ಯರ ಸಂಘದ ರಾಜ್ಯ ಶಾಖೆ 33ನೇ ವಾರ್ಷಿಕ ಸಮ್ಮೇಳನದಲ್ಲಿ, ಡಾ. ಆರ್ …

Read More »

ಹೆರಿಗೆಗೆಂದು ತವರಿಗೆ ಬಂದ ಗರ್ಭಿಣಿ ಸಹೋದರಿ ಮೇಲೆ ಆಕೆಯ ಇಬ್ಬರು ಸಹೋದರರ ಅತ್ಯಾಚಾರ

(ಮಹಾರಾಷ್ಟ್ರ): ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಅತ್ಯಂತ ನೀಚ ಹಾಗೂ ಹೀನ ಕೃತ್ಯವೊಂದು ವರದಿಯಾಗಿದೆ. ಹೆರಿಗೆಗೆಂದು ತವರಿಗೆ ಬಂದ ಏಳು ತಿಂಗಳ ಗರ್ಭಿಣಿ ಸಹೋದರಿ ಮೇಲೆ ಆಕೆಯ ಇಬ್ಬರು ಸಹೋದರರು ಅತ್ಯಾಚಾರ ಎಸಗಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇಲ್ಲಿನ ಗಡ್ಚಿರೋಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಸಂತ್ರಸ್ತೆ ಕೆಲವು ದಿನಗಳ ಹಿಂದೆ ಹೆರಿಗೆಗಾಗಿ ತನ್ನ ಪೋಷಕರ ಮನೆಗೆ ಬಂದಿದ್ದಳು. ಆಗಸ್ಟ್ 10ರಂದು …

Read More »

3 ಮಂದಿ ವಿರುದ್ಧ ದೂರು ದಾಖಲು: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ

ಬೆಳಗಾವಿ: ಆ ಕುಟುಂಬ ಬದುಕು ಕಟ್ಟಿಕೊಳ್ಳಲು ತಮ್ಮ ಹುಟ್ಟೂರು ಬಿಟ್ಟು ಬೆಳಗಾವಿಗೆ ವಲಸೆ ಬಂದಿತ್ತು. ಪ್ರಾಮಾಣಿಕವಾಗಿ ಕಷ್ಟ ಪಟ್ಟು ದುಡಿಯುತ್ತಿದ್ದವರಿಗೆ ಆ ದೇವರು ಮಾತ್ರ ಕೈ ಹಿಡಿಯಲಿಲ್ಲ. ಹೌದು, ವಿಧಿಯಾಟಕ್ಕೆ ಮೂರು ಅಮಾಯಕ ಜೀವಗಳು ಬಲಿಯಾಗಿವೆ. ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈ ತೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿಯ ಶಾಹು ನಗರದ 7ನೇ ಕ್ರಾಸ್ ನ‌ ನಿರ್ಮಾಣ ಹಂತದ ಕಟ್ಟಡದಲ್ಲಿ ಶನಿವಾರ ಬೆಳಗ್ಗೆ ವಿದ್ಯುತ್ ಅವಘಡದಿಂದ ರಾಮದುರ್ಗ ತಾಲೂಕಿನ‌ ಅರಬೆಂಚಿ ತಾಂಡಾದ ಈರಪ್ಪ …

Read More »

ಬಹುಶಃ ನನ್ನ ಕೊನೆಯ ಚುನಾವಣೆ ಮುಗಿದಿದೆ, ಲೋಕಸಭೆಗೆ ಸ್ಪರ್ಧಿಸಲ್ಲ: ಬಸವರಾಜ ರಾಯರಡ್ಡಿ

ಕೊಪ್ಪಳ: ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಇಂದಿನ ರಾಜಕಾರಣ ನನಗೆ ಒಗ್ಗುವುದಿಲ್ಲ. 12 ಚುನಾವಣೆಗಳನ್ನು ಎದುರಿಸಿದ್ದೇನೆ. ಈಗಿನ ರಾಜಕೀಯ ವ್ಯವಸ್ಥೆ ಸರಿಯಿಲ್ಲ. ಬಹುಶಃ ನನ್ನ ಕೊನೆಯ ಚುನಾವಣೆ ಮುಗಿದಿದೆ ಎಂದು ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಶ್ರಾವಣ ಸಂಭ್ರಮ ಹೆಸರಿನಲ್ಲಿ ಕೊಪ್ಪಳದಲ್ಲಿ ಶನಿವಾರ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರಿಗೆ ಅವರು ಆಯೋಜಿಸಿದ್ದ ಔತಣ ಕೂಟದ ವೇಳೆ ಮಾಧ್ಯಮದವರ ಜೊತೆ ಅವರು ಮಾತನಾಡಿದರು. ಭ್ರಷ್ಟಾಚಾರದ ವಿಷಯದಲ್ಲಿ ಕರ್ನಾಟಕ ಬ್ರ್ಯಾಂಡ್ ಆಗುತ್ತಿರುವುದು …

Read More »