Breaking News

Monthly Archives: ಜುಲೈ 2023

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ

ಮಹಾರಾಷ್ಟ ಸೇರಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಬೀಳುತ್ತಿರುವ ಹಿನ್ನೆಲೆ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿರುವ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗಿದೆ. ಬಸವಸಾಗರ ಜಲಾಶಯದಿಂದ 1 ಮೀಟರ್ ಎತ್ತರದಲ್ಲಿ 21 ಕ್ರಸ್ಟ್ ಗೇಟ್​ ಗಳ ಮೂಲಕ 1.50 ಲಕ್ಷ ಕ್ಯೂಸೆಕ್​ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ. ಬಸವಸಾಗರ ಜಲಾಶಯವು ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 33.31 ಟಿ ಎಂ ಸಿ ಇದ್ದು, ಅದರಲ್ಲಿ 26.42 ಟಿಎಂಸಿ …

Read More »

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರ ಏರಿಕೆಗೆ ಒಪ್ಪಿಗೆ

ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ನಂದಿನಿ ಹಾಲಿಗೆ 3 ರೂ. ಹೆಚ್ಚಳಕ್ಕೆ ಸಂಪುಟ ಸಭೆ ತೀರ್ಮಾನಿಸಿದೆ. ಕಳೆದ ವಾರ ಕೆಎಂಎಫ್ ಜೊತೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಾಲಿನ ದರ 3 ರೂ. ಹೆಚ್ಚಿಸಲು ನಿರ್ಧರಿಸಲಾಗಿತ್ತು. ಈ ಸಂಬಂಧ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಅದರಂತೆ ಇದೀಗ ಸಚಿವ ಸಂಪುಟ ಸಭೆಯಲ್ಲಿ ದರ ಏರಿಕೆಗೆ ತೀರ್ಮಾನಿಸಲಾಗಿದೆ. ಆ ಮೂಲಕ …

Read More »

ವಡೋದರಾದಲ್ಲಿ ಪ್ರತಿದಿನ 2 ಸಾವಿರ ಕಾಂಜಂಕ್ಟಿವಿಟಿಸ್ ಸೋಂಕು ಪ್ರಕರಣ

ವಡೋದರ (ಗುಜರಾತ್​): ದೇಶದ ಹಲವೆಡೆ ಕಾಂಜಂಕ್ಟಿವಿಟಿಸ್ ಸೋಂಕು ಪ್ರಕರಣಗಳು ಹೆಚ್ಚಾಗಿವೆ. ಗುಜರಾತ್​ನ ವಡೋದರಾದಲ್ಲಿ ಪ್ರತಿದಿನ 2 ಸಾವಿರ ಜನರಿಗೆ ಹೆಚ್ಚು ಕಾಂಜಂಕ್ಟಿವಿಟಿಸ್ ಸೋಂಕು ಪತ್ತೆಯಾಗುತ್ತಿದೆ. ಇದರಿಂದ ಕಳೆದ 15 ದಿನಗಳಿಂದ ಐ ಡ್ರಾಪ್ ಬಾಟಲ್ ಸೇರಿದಂತೆ ಔಷಧಗಳ ಮಾರಾಟದಲ್ಲಿ ಹೆಚ್ಚಳವಾಗಿದೆ. ನಿರಂತರ ಮಳೆಯಿಂದ ಕಾಂಜಂಕ್ಟಿವಿಟಿಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಮಕ್ಕಳಲ್ಲಿ ಈ ಸಮಸ್ಯೆ ಅತಿಯಾಗಿ ಕಾಡುತ್ತಿದೆ. ಕಣ್ಣಿನ ಹೊರಗಿನ ಚರ್ಮದ ಸೋಂಕಿನಿಂದ ಕಣ್ಣಿನ ಸೋಂಕು ಉಂಟಾಗುತ್ತದೆ. ಅದಕ್ಕಾಗಿಯೇ ಕಾಂಜಂಕ್ಟಿವಿಟಿಸ್ ಸೋಂಕು ಎಂದು …

Read More »

ಬೆಳಗಾವಿ ಹಿಂಡಲಗಾ ಜೈಲು.. ರಾಜ್ಯದಲ್ಲಿ ಕೈದಿಗಳನ್ನು ನೇಣಿಗೇರಿಸುವ ಏಕೈಕ ಕಾರಾಗೃಹವಿದು..!

ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಡಲು 1923ರಲ್ಲಿ ಬ್ರಿಟಿಷರಿಂದ ಸ್ಥಾಪಿತವಾದ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹವು ಶತಮಾ‌ನದ ಸಂಭ್ರಮದಲ್ಲಿದೆ. ದೇಶದ ಎರಡನೇ ಅತೀ ದೊಡ್ಡ ಜೈಲು ಮತ್ತು ಕೈದಿಗಳನ್ನು ಗಲ್ಲಿಗೇರಿಸುವ ರಾಜ್ಯದ ಏಕೈಕ ಕಾರಾಗೃಹ ಎಂಬ ಹೆಗ್ಗಳಿಕೆ ಹಿಂಡಲಗಾ ಜೈಲಿನದ್ದು. ಹೀಗೆ ಹಲವು ವಿಶೇಷತೆಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ. ಹೌದು.. ಬೆಳಗಾವಿಯಿಂದ ಕೇವಲ 6 ಕಿ ಮೀಟರ್ ದೂರದ ಹಿಂಡಲಗಾ ಎಂಬ ಗ್ರಾಮದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಕಾರಾಗೃಹ ನಿರ್ಮಿಸಲಾಗಿದೆ. 24 …

Read More »

ವಿಕಲಚೇತನ ವ್ಯಕ್ತಿಗೆ ಮನಬಂದಂತೆ ಥಳಿತ ಸ್ಪಷ್ಟನೆ ನೀಡಿದಪೊಲೀಸ್ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ

ಬೆಳಗಾವಿ : ನಗರದ ಉದ್ಯಮಬಾಗ ಪೊಲೀಸರು ವ್ಯಕ್ತಿಯೊಬ್ಬನಿಗೆ ಥಳಿಸಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ವಿಕಲಚೇತನ ವ್ಯಕ್ತಿಗೆ ಮನಬಂದಂತೆ ಪೊಲೀಸರು ಹೊಡೆದಿರುವುದು, ಸದ್ಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಿರಂಜನ ಚೌಗುಲೆ ವಿಕಲಚೇತನ ವ್ಯಕ್ತಿ ಪೊಲೀಸರಿಂದ ಹಲ್ಲೆಗೆ ಒಳಗಾಗಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ. ಘಟನೆ ಕುರಿತು‌ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿರುವ ನಿರಂಜನ್, ನಾನು ಊಟವನ್ನು ಪಾರ್ಸಲ್ ತೆಗೆದುಕೊಳ್ಳಲು ಹೊಟೇಲ್‌ಗೆ ಹೋಗಿದ್ದೆ. ಊಟ ಕಟ್ಟಿಸಿಕೊಂಡು ಹೊರಡುವಾಗ ಪೊಲೀಸರು ಬಂದು …

Read More »

ಕಲ್ಯಾಣ‌ ಕರ್ನಾಟಕ ಪ್ರದೇಶಗಳ ಅಭಿವೃದ್ಧಿ ಸಂಬಂಧ ಕಾರ್ಯಕ್ರಮಸಭೆ:

ಬೆಂಗಳೂರು: ಕಲ್ಯಾಣ‌ ಕರ್ನಾಟಕ ಪ್ರದೇಶಗಳ ಅಭಿವೃದ್ಧಿ ಸಂಬಂಧ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ ಸುಧಾಕರ್ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್ ಡಿಬಿ) ಸಭೆ ನಡೆಯಿತು.‌ ಸಭೆಯಲ್ಲಿ ಕಾಮಗಾರಿಗಳ ಮಂಜೂರಾತಿ ಸ್ಥಿತಿಗತಿ ಬಗ್ಗೆ ಸಮಾಲೋಚನೆ ನಡೆಸಲಾಯಿತು.   ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಆ ಭಾಗದ ಸಚಿವ ಶರಣಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪೂರ, ರಹೀಂಖಾನ್, ಶಿವರಾಜ ತಂಗಡಗಿ, ಬಿ.ನಾಗೇಂದ್ರ ಪಾಲ್ಗೊಂಡಿದ್ದರು. …

Read More »

ಮೊಬೈಲ್ ಚಾರ್ಜ್ ಹಾಕಲು ಹೋಗಿ ಯುವಕ ವಿದ್ಯುತ್ ತಗುಲಿ ಸಾವ ಸಂಭವಿಸಿದೆ

ಚಿಕ್ಕೋಡಿ: ಮೊಬೈಲ್ ಚಾರ್ಜ್ ಹಾಕಲು ಹೋಗಿ ಯುವಕ ವಿದ್ಯುತ್ ತಗುಲಿ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕೋಡಿಯಲ್ಲಿ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಶಿರಪ್ಪೆವಾಡಿ ಗ್ರಾಮದ ಆಕಾಶ ಸಂಕಪಾಳ (27) ಸಾವನ್ನಪ್ಪಿದ ದುರ್ದೈವಿ ಎಂದು ಗುರುತಿಸಲಾಗಿದೆ.   ಮುಂಜಾನೆ ಎಂಟು ಗಂಟೆ ಸುಮಾರಿಗೆ ಮನೆಯಲ್ಲಿ ಮೊಬೈಲ್ ಚಾರ್ಚ್ ಹಾಕುವುದಕ್ಕೆ ಯುವಕ ಮುಂದಾಗಿದ್ದಾನೆ. ಆಕಸ್ಮಿಕವಾಗಿ ವಿದ್ಯುತ್ ಕೈಗೆ ತಗುಲಿ ಸಾವು ಸಂಭವಿಸಿದೆ ಎಂದು ಮೃತ ಯುವಕನ ತಂದೆ ನಿಪ್ಪಾಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. …

Read More »

ಡೇಟಿಂಗ್ ಆಯಪ್ ಜಾಲ.. ಮಹಿಳೆ ಮಾತಿಗೆ ಮರುಳಾಗಿ ಕೋಟಿ ಕೋಟಿ ಕಳೆದುಕೊಂಡ

ಚೆನ್ನೈ, ತಮಿಳುನಾಡು: ಸೈಬರ್ ಅಪರಾಧಗಳಿಗೆ ಹೆಸರುವಾಸಿಯಾಗಿರುವ ಉತ್ತರ ರಾಜ್ಯದ ಹಲವು ಗ್ಯಾಂಗ್‌ಗಳು ದೇಶಾದ್ಯಂತ ನಾನಾ ರೀತಿಯಲ್ಲಿ ಅತ್ಯಾಧುನಿಕ ರೀತಿಯಲ್ಲಿ ವಂಚನೆ ನಡೆಸಿ ಸಾರ್ವಜನಿಕರಿಂದ ನಿರಂತರವಾಗಿ ಹಣ ದೋಚುತ್ತಿದ್ದಾರೆ. ಅಷ್ಟೇ ಅಲ್ಲ ಚೆನ್ನೈ ಮೂಲದ ಚಿನ್ನದ ವ್ಯಾಪಾರಿಯೊಬ್ಬರಿಗೆ ಕೋಟಿಗಟ್ಟಲೆ ವಂಚಿಸಿದ ಪ್ರಕರಣದಲ್ಲಿ ಚೆನ್ನೈ ಸೆಂಟ್ರಲ್ ಕ್ರೈಂ ಬ್ರಾಂಚ್ ಸೈಬರ್ ಕ್ರೈಂ ಪೊಲೀಸರು ಉತ್ತರ ರಾಜ್ಯದ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಡೇಟಿಂಗ್ ಆಯಪ್ ಮೂಲಕ ವಂಚನೆ: ತಮಗೆ ಆದ ವಂಚನೆ ಬಗ್ಗೆ ಚೆನ್ನೈನ ಪಾರ್ಕ್ …

Read More »

ರಾಜ್ಯಾದ್ಯಂತ ಮುಂಗಾರು ಅಬ್ಬರ ಮುಂದುವರೆದಿದೆ. ಗಡಿ ಜಿಲ್ಲೆ ಬೀದರ್​ನಲ್ಲೂ ಧಾರಾಕಾರ ಮಳೆ

ಬೀದರ್: ರಾಜ್ಯಾದ್ಯಂತ ಮುಂಗಾರು ಅಬ್ಬರ ಮುಂದುವರೆದಿದೆ. ಗಡಿ ಜಿಲ್ಲೆ ಬೀದರ್​ನಲ್ಲೂ ಧಾರಾಕಾರ ಮಳೆಯಾಗುತ್ತಿದೆ. ತಡರಾತ್ರಿ ಜಿಲ್ಲೆಯಲ್ಲಿ ಸರಾಸರಿ 8.77 ಮಿ.ಮೀ. ಮಳೆ ದಾಖಲಾಗಿದೆ. ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆರೆಗಳು ಭರ್ತಿಯಾಗಿವೆ. ಕೆಲವೆಡೆ ಪ್ರವಾಹ ಭೀತಿ ಉಂಟಾಗಿದೆ. ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗುವ ಆತಂಕ ರೈತರದ್ದು. ಮಂಗಳವಾರ ರಾತ್ರಿ ಬೀದರ್ ನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಬುಧವಾರವೂ ಅಲ್ಲಲ್ಲಿ ಮಳೆ …

Read More »

ಥಣಿಯಲ್ಲಿ ಮನೆ ಬಿದ್ದು ಯುವಕ; ವಿಜಯನಗರದಲ್ಲಿ ಗೋಡೆ ಕುಸಿದು ವೃದ್ಧೆ ಸಾವು

ಚಿಕ್ಕೋಡಿ: ಕಳೆದ ಹದಿನೈದು ದಿನಗಳಿಂದ ಸತತವಾಗಿ ಚಿಟಿಕೆ ಮಳೆ ಸುರಿಯುತ್ತಿದ್ದು ಮನೆಗೋಡೆ ಕುಸಿದು ಯುವಕ ಸಾವನ್ನಪ್ಪಿರುವ ಘಟನೆ ಅಥಣಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ತಾಸೆ ಗಲ್ಲಿಯ ನಿವಾಸಿ ಕಾಶಿನಾಥ ಅಪ್ಪಾಸಾಬ ಸುತಾರ (23) ಮೃತರೆಂದು ಗುರುತಿಸಲಾಗಿದೆ. ತನ್ನ ತಂದೆ ತಾಯಿ ಹಾಗೂ ಸಹೋದರನನ್ನು ಮನೆಯಿಂದ ಹೊರಕಳಿಸಿ ತಾನು ಹೊರಬರುವ ಹೊತ್ತಿಗೆ ಹಠಾತ್ ಮೈಮೇಲೆ ಮಣ್ಣು, ಕಲ್ಲು ಬಿದ್ದು ಯುವಕ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಅಥಣಿ ಪಿಎಸ್‌ಐ ಹಾಗೂ ಸಿಪಿಐ …

Read More »