ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಪ್ರಕರಣದಲ್ಲಿ ಬಂಧಿತರಾಗಿರುವ ಕೆ.ಆರ್ ಪುರ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಕಂದಾಯ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಪುತ್ತೂರು ಮೂಲದ ತಹಶೀಲ್ದಾರ್ ಅಜಿತ್ ಕುಮಾರ್ ರೈ ನ್ಯಾಯಾಂಗ ಬಂಧನದಲ್ಲಿದ್ದು, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು 1957ರ ನಿಯಮ 10(1)(A)(A) ಮತ್ತು 10(2(A) ಅನ್ವಯವಾಗುವಂತೆ ಮುಂದಿನ ಆದೇಶದವರೆಗೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ. ಏನಿದು ಪ್ರಕರಣ: ಅಕ್ರಮ ಆಸ್ತಿ …
Read More »Monthly Archives: ಜುಲೈ 2023
ತೋಟಗಾರಿಕೆ ವಿವಿ 12ನೇ ಘಟಿಕೋತ್ಸವ:16 ಚಿನ್ನ ಮುಡಿಗೇರಿಸಿಕೊಂಡ ಗ್ರಾಮೀಣ ಪ್ರತಿಭೆ
ಬಾಗಲಕೋಟೆ: ತೋಟಗಾರಿಕೆ ವಿವಿಯಲ್ಲಿ ಶನಿವಾರ ನಡೆದ 12ನೇ ಘಟಿಕೋತ್ಸವದಲ್ಲಿ ಕಿರಾಣಿ ವ್ಯಾಪಾರಸ್ಥನ ಮಗಳು ಧರಣಿಗೆ 16 ಚಿನ್ನದ ಪದಕಗಳು ಲಭಿಸಿವೆ. ರಾಜ್ಯದ ರಾಜ್ಯಪಾಲರು ಹಾಗೂ ತೋಟಗಾರಿಕಾ ವಿವಿಯ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಚಿನ್ನದ ಪದಕ ಸ್ವೀಕರಿಸಿದರು. ಕೋಲಾರ ಜಿಲ್ಲೆಯ ಸುಗಟೂರ ಗ್ರಾಮದ ಧರಣಿ ಶೆಟ್ಟಿ ಅವರು, ಕಿರಾಣಿ ವ್ಯಾಪಾರಸ್ಥ ನಾಗೇಂದ್ರ ಮತ್ತು ಸವಿತಾ ದಂಪತಿಯ ಮೊದಲ ಮಗಳು. ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ 10ನೇ ತರಗತಿಯ ವರೆಗೆ, ಸಹ್ಯಾದ್ರಿ ಕಾಲೇಜಿನಲ್ಲಿ …
Read More »ಆಗಸ್ಟ್ ತಿಂಗಳೊಳಗೆ ಐದೂ ಗ್ಯಾರಂಟಿ ಯೋಜನೆಗಳನ್ನು ನೂರಕ್ಕೆ ನೂರರಷ್ಟು ಜಾರಿ ಮಾಡುತ್ತೇವೆ ಎಂದು ಸಚಿವ ಶಿವರಾಜ ತಂಗಡಗಿ
ಕೊಪ್ಪಳ: ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರ ಭದ್ರತೆ ಕಾನೂನು ಜಾರಿಗೆ ತರಲಾಗಿದೆ. ನಾವು ಐದೂ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದರೆ ಬಿಜೆಪಿಯವರಿಗೆ ಇನ್ನು 10 ವರ್ಷ ಮಾಡಲು ಏನೂ ಕೆಲಸ ಇರುವುದಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದ 25 ಜನ ಬಿಜೆಪಿ ಸಂಸದರು ಪ್ರಧಾನ ಮಂತ್ರಿ ಬಳಿ ಹೋಗಿ …
Read More »ಈಜಲು ಹೋದ ಇಬ್ಬರು ಬಾಲಕರು ಭೀಮಾ ನದಿಯಲ್ಲಿ ಮುಳುಗಿ ಸಾವು
ಕಲಬುರಗಿ: ಈಜಲು ಹೋದ ಬಾಲಕರಿಬ್ಬರು ಭೀಮಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಜೇವರ್ಗಿ ತಾಲೂಕಿನ ಕೋನಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ. ಶನಿವಾರ ಮಧ್ಯಾಹ್ನದ ಹೊತ್ತಿಗೆ ಗ್ರಾಮದ ಹೊರವಲಯದಲ್ಲಿರುವ ಭೀಮಾ ನದಿಗೆ ಈಜಲು ಬಾಲಕರಿಬ್ಬರು ತೆರಳಿದ್ದರು. ಆದರೆ ಕಾಲು ಜಾರಿ ಓರ್ವ ನೀರು ಪಾಲಾಗುವಾಗ ಇನ್ನೋರ್ವನನ್ನು ರಕ್ಷಣೆಗೆ ಇಳಿದಿದ್ದ. ಆತನೂ ಕೂಡ ಮೃತಪಟ್ಟಿದ್ದಾನೆ. ದೇವಿಂದ್ರ ಹೊಸಮನಿ (17) ಹಾಗೂ ರಾಮು ದೊಡ್ಡಮನಿ(13) ಮೃತ ದುರ್ದೈವಿಗಳು. ನೀರಲ್ಲಿ ಮುಳುಗಿ ಸಾವನ್ನಪ್ಪಿದ ವಿಷಯವನ್ನು ಗ್ರಾಮಸ್ಥರು, ಪೊಲೀಸರಿಗೆ …
Read More »ಬಿಎಸ್ವೈಗೆ ಹೈಕಮಾಂಡ್ ಬುಲಾವ್
ಬೆಂಗಳೂರು: ನಾಳೆ ಬಿಜೆಪಿ ಶಾಸಕಾಂಗ ಸಭೆ ಇಲ್ಲ. ಯಡಿಯೂರಪ್ಪ ನಾಳೆ ಬೆಳಗ್ಗೆ ದೆಹಲಿಗೆ ಹೋಗಲಿದ್ದು, ಅಲ್ಲೇ ವಿಪಕ್ಷ ನಾಯಕನ ಆಯ್ಕೆಯಾಗಲಿದೆ. ವಿಪಕ್ಷ ನಾಯಕ ಹೆಸರು ನಾಳೆ ದೆಹಲಿಯಲ್ಲೇ ಘೋಷಣೆಯಾಗಲಿದೆ. ಆ ಮೂಲಕ ದೆಹಲಿಯಲ್ಲೇ ರಾಜ್ಯ ವಿಧಾನಸಭೆ ವಿಪಕ್ಷ ನಾಯಕರ ಗೊಂದಲಕ್ಕೆ ತೆರೆ ಬೀಳಲಿದೆ. ಹೈಕಮಾಂಡ್ ಬುಲಾವ್ ಹಿನ್ನಲೆ ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ. ಅಲ್ಲೇ ವಿಪಕ್ಷ ನಾಯಕನ ಆಯ್ಕೆಯಾಗಲಿದೆ. ನಾಳೆಯೇ ವಿಪಕ್ಷ ನಾಯಕನ ಹೆಸರು ಘೋಷಣೆಯಾಗಲಿದೆ. ವಿಪ್ ಆಯ್ಕೆಯೂ ಕೂಡ ನಾಳೆ ಆಗಲಿದೆ. …
Read More »ವಿದ್ಯುತ್ ಕಂಬಕ್ಕೆ ಮಾರ್ಕೆಟ್ನಲ್ಲಿ 20 ಸಾವಿರ ರೂ. ಬೆಲೆ ಇದ್ದರೆ, 60-70 ಸಾವಿರ ರೂ. ಹಾಕಿದ್ದಾರೆ
ಬೆಳಗಾವಿ: ಬೆಳಗಾವಿ ಅಷ್ಟೇ ಅಲ್ಲದೇ ಎಲ್ಲ ಕಡೆ ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಮೂಲ ನೀಲನಕ್ಷೆ ಪ್ರಕಾರ ಆಗಿಲ್ಲ. ಮೊನ್ನೆ ಕ್ಯಾಬಿನೆಟ್ನಲ್ಲೂ ಈ ಬಗ್ಗೆ ಚರ್ಚೆ ಆಗಿದೆ. ಅದಕ್ಕೆ ಸರ್ಕಾರದಿಂದ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಲೋಕೋಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯ ಪಟ್ಟರು. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳ ಜೊತೆಗಿನ ಸಭೆ ಬಳಿಕ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಥಮ ಸಭೆ …
Read More »ನಾವು ಕೊಟ್ಟ 5 ಗ್ಯಾರಂಟಿಗಳ ಪೈಕಿ ಮೂರು ಈಡೇರಿದೆ: ದಿನೇಶ್ ಗುಂಡೂರಾವ್
ಬೆಂಗಳೂರು: ನಾವು ನೀಡಿದ್ದ ಎಲ್ಲಾ ಗ್ಯಾರಂಟಿಗಳನ್ನೂ ಆರಂಭಿಸುತ್ತಿದ್ದೇವೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್ ನಮ್ಮ ಯೋಜನೆ ಜಾರಿಯಾಗಲ್ಲ ಎಂಬ ಸಂಭ್ರಮದಲ್ಲಿದ್ದವು. ಅವರಿಗೆ ನಿರಾಸೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚುನಾವಣಾ ಪೂರ್ವದಲ್ಲಿ ನಾವು ಕೊಟ್ಟ 5 ಗ್ಯಾರಂಟಿಗಳ ಪೈಕಿ ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆ ಇಂದಿನಿಂದ ಆರಂಭವಾಗಲಿದೆ. ಗೃಹಜ್ಯೋತಿ ಯೋಜನೆಯಡಿ ಈ ತಿಂಗಳಿನಿಂದ ನಮ್ಮ ಸರ್ಕಾರ 200 ಯೂನಿಟ್‌ವರೆಗೆ ವಿದ್ಯುತ್ ಉಚಿತವಾಗಿ …
Read More »ಬಿಪಿಎಲ್ ಕಾರ್ಡುದಾರರಿಗೆ ಈ ತಿಂಗಳು ಹಣ ಸಿಗೋದಿಲ್ಲ: ಸಚಿವ ಜಾರಕಿಹೊಳಿ
ಚಿಕ್ಕೋಡಿ (ಬೆಳಗಾವಿ): ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಪ್ರತಿ ಯೂನಿಟ್ಗೆ 170 ರೂಪಾಯಿ ಸರ್ಕಾರ ವರ್ಗಾವಣೆ ಮಾಡುತ್ತದೆ ಎಂದು ಘೋಷಣೆ ಮಾಡಲಾಗಿದೆ. ಆದರೆ, ಈ ತಿಂಗಳು ಯಾರಿಗೂ ಹಣ ಸಿಗೋದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಲ್ಲಿ ಬೆಳಗಾವಿ ಜಿಲ್ಲಾಡಳಿತ ವತಿಯಿಂದ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ರಾಜ್ಯದಲ್ಲಿ …
Read More »ಅವಧಿ ಮುಗಿದ ಆಹಾರ ಉತ್ಪನ್ನಗಳ ಮರು ಪ್ಯಾಕಿಂಗ್.. ಗೋದಾಮಿನ ಮೇಲೆ ಅಧಿಕಾರಿಗಳ ದಾಳಿ
ಬೆಂಗಳೂರು: ಬಳಕೆಯ ಅವಧಿ ಮುಗಿದ ಆಹಾರ ಉತ್ಪನ್ನಗಳನ್ನು ಮರು ಪ್ಯಾಕಿಂಗ್ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಗೋದಾಮಿನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಸಿಸಿಬಿ ಪೊಲೀಸರು ಜಂಟಿ ಆಗಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾಟನ್ ಪೇಟೆಯ ಖಾಸಗಿ ಟ್ರೇಡಿಂಗ್ ಕಂಪನಿಯ ಗೋದಾಮಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ಅವಧಿ ಮುಗಿದ ಆಹಾರಗಳುಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ಸೇರಿದ, ಬಳಕೆಯ ಅವಧಿ ಮೀರಿದ ಬಿಸ್ಕೆಟ್ಸ್, ಚಾಕೊಲೇಟ್, ಚಾಕೊಲೇಟ್ ಪೌಡರ್, ಅಡುಗೆ ಎಣ್ಣೆ, …
Read More »ಬಜೆಟ್ ಅಧಿವೇಶನ ಜುಲೈ 3 ರಿಂದ 14ರ ವರೆಗೆ ವಿಧಾನಸೌಧದ ಸುತ್ತಲೂ ನಿಷೇಧಾಜ್ಞೆ
ಬೆಂಗಳೂರು: ಬಜೆಟ್ ಅಧಿವೇಶನ ನಡೆಯುವ ಹಿನ್ನೆೆಲೆಯಲ್ಲಿ ಜುಲೈ 3 ರಿಂದ 14ರ ವರೆಗೆ ವಿಧಾನಸೌಧದ ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ. ಜು.3 ರಿಂದ 14ರ ವರೆಗೆ ವಿಧಾನಸೌಧದ ಸುತ್ತಲೂ 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅನುಮತಿ ಪಡೆದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ನಿಷೇಧಾಜ್ಞೆ ಜಾರಿಯಿರುವ ಸ್ಥಳದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದು, ಮೆರವಣಿಗೆ …
Read More »