ತಮಿಳುನಾಡು ಎಐಸಿಸಿ ಮತ್ತು ರಾಜ್ಯ ತಂಡಗಳೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆ ನಡೆಸಲಿದ್ದಾರೆ. ನವದೆಹಲಿ: ಮಣಿಪುರ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಗದ್ದಲದ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಆಗಸ್ಟ್ 1 ರಿಂದ 129 ಸದಸ್ಯರನ್ನು ಲೋಕಸಭೆಗೆ ಕಳುಹಿಸುವ ದಕ್ಷಿಣ ಭಾರತದ ಕರ್ನಾಟಕ ಸೇರಿ ಐದು ರಾಜ್ಯಗಳಲ್ಲಿನ ಪಕ್ಷದ ಸಿದ್ಧತೆಗಳನ್ನು ಖರ್ಗೆ ಅವಲೋಕನ ಮಾಡಲಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು …
Read More »Monthly Archives: ಜುಲೈ 2023
ನೊಣಗಳ ಸಮಸ್ಯೆಗೆ ಮುಕ್ತಿ ನೀಡಲು ಗ್ರಾಮಗಳಿಗೆ ಭಾನುವಾರ ಔಷಧಿ ಸಿಂಪಡಣೆ
ನೊಣಗಳ ಉಪಟಳದಿಂದ ಬೇಸತ್ತಿರುವ ದಾವಣಗೆರೆ ತಾಲೂಕಿನ ಹತ್ತೂರು ಗ್ರಾಮಕ್ಕೆ ತಕ್ಕಮಟ್ಟಿಗೆ ಮುಕ್ತಿ ಸಿಕ್ಕಂತಾಗಿದೆ. ‘ದಾವಣಗೆರೆಯ ಗ್ರಾಮಗಳಲ್ಲಿ ಹೆಚ್ಚಾಯಿತು ನೊಣಗಳ ಉಪಟಳ ಆತಂಕದಲ್ಲಿ ಜನ’ ಶೀರ್ಷಿಕೆಯಡಿಯಲ್ಲಿ ಈಟಿವಿ ಭಾರತ್ ಜುಲೈ 29 ರಂದು ವರದಿ ಮಾಡಿತ್ತು. ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಹೆಬ್ಬಾಳು ಗ್ರಾಮ ಪಂಚಾಯತಿ ಸಿಬ್ಬಂದಿ ನೊಣಗಳ ಸಮಸ್ಯೆಗೆ ಮುಕ್ತಿ ನೀಡಲು ಗ್ರಾಮಗಳಿಗೆ ಭಾನುವಾರ ಔಷಧಿ ಸಿಂಪಡಣೆ ಮಾಡಿದ್ದಾರೆ. ಔಷಧಿ ಸಿಂಪಡಣೆ ಮಾಡಿದ್ರೆ ಕೆಲ ಹೊತ್ತು ಮಾತ್ರ ನೊಣಗಳ ಕಾಟ ದೂರವಾಗ್ಬಹುದು. …
Read More »ಕಳೆದ 15 ದಿನಗಳಿಂದ ಉತ್ತಮ ಮಳೆ ಬಿತ್ತನೆ ಕಾರ್ಯ ಚುರುಕು
ಬೆಳಗಾವಿ: ಕಳೆದ 15 ದಿನಗಳಿಂದ ಉತ್ತಮ ಮಳೆಯಾಗಿರುವ ಹಿನ್ನೆಲೆ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ರೈತರು ಭೂಮಿ ಹದಗೊಳಿಸುವಲ್ಲಿ ನಿರತರಾಗಿದ್ದಾರೆ. . ಈ ಬಾರಿ ಮುಂಗಾರು ಮಳೆ ಎರಡು ತಿಂಗಳು ವಿಳಂಬವಾಗಿದ್ದರಿಂದ ಸವದತ್ತಿ ತಾಲೂಕಿನ ಕರಿಕಟ್ಟಿ ಸೇರಿ ಸುತ್ತಲಿನ ಹಲವಾರು ಗ್ರಾಮದ ರೈತರು ಬಿತ್ತನೆ ಮಾಡಿರಲಿಲ್ಲ. ಇತ್ತೀಚೆಗೆ ನಿರಂತರವಾಗಿ ಮಳೆಯಾಗಿದ್ದು, ಮಳೆರಾಯ ಈಗ ಒಂದಿಷ್ಟು ವಿರಾಮ ಕೊಟ್ಟಿದ್ದಾನೆ. ಹೀಗಾಗಿ ಬೀಜ, ಗೊಬ್ಬರ ತಂದು ಮನೆಯಲ್ಲಿ ಸಂಗ್ರಹ ಮಾಡಿದ್ದ ರೈತರು …
Read More »ರಾಜ್ಯ ಸರ್ಕಾರ ಸಂಪೂರ್ಣವಾಗಿ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ: ಬೊಮ್ಮಾಯಿ
ಬೆಳಗಾವಿ : “ರಾಜ್ಯ ಸರ್ಕಾರ ಸಂಪೂರ್ಣವಾಗಿ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ. ಅಧಿಕಾರಿಗಳ ವರ್ಗಾವಣೆಗಾಗಿ ಸರ್ಕಾರದಲ್ಲಿ ಪೈಪೋಟಿ ನಡೆಯುತ್ತಿದೆ” ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎಲ್ಲರೂ ವರ್ಗಾವಣೆ ದಂಧೆಯಲ್ಲಿದ್ದಾರೆ. ಮೊನ್ನೆ ನಡೆದ ಸಭೆ ವರ್ಗಾವಣೆಯ ಪೈಪೋಟಿ, ಭ್ರಷ್ಟಾಚಾರದ ಪೈಪೋಟಿ ಅಷ್ಟೇ. ಇದೀಗ ವರ್ಗಾವಣೆ ದಂಧೆಯಲ್ಲಿ ಚೌಕಾಸಿ ನಡೆಯುತ್ತಿದೆ” ಎಂದು ಹೇಳಿದರು. “ಲೋಕಸಭೆ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ …
Read More »ಮೆಹ್ರಮ್ ಇಲ್ಲದೆ 4 ಸಾವಿರ ಮುಸ್ಲಿಂ ಮಹಿಳೆಯರ ಹಜ್ ಯಾತ್ರೆ: ಮೋದಿ ಮೆಚ್ಚುಗೆ
ನವದೆಹಲಿ: ಈ ವರ್ಷ ನಾಲ್ಕು ಸಾವಿರಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರು ಮೆಹ್ರಮ್ (ಪುರುಷರ ನೆರವಿಲ್ಲದೆ) ಇಲ್ಲದೆ ಹಜ್ ಯಾತ್ರೆ ಕೈಗೊಂಡಿರುವುದು ಅತಿ ದೊಡ್ಡ ಪರಿವರ್ತನೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ತಮ್ಮ ಸರ್ಕಾರವು ಹಜ್ ನೀತಿಯಲ್ಲಿ ಮಾಡಿದ ಬದಲಾವಣೆಗಳಿಂದ ಹೆಚ್ಚು ಹೆಚ್ಚು ಜನರು ವಾರ್ಷಿಕ ಯಾತ್ರೆಗೆ ಹೋಗಲು ಅವಕಾಶವನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ರೆಡಿಯೋದಲ್ಲಿ ಪ್ರಸಾರವಾದ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ, ಪುರುಷರ ನೆರವಿಲ್ಲದೆ …
Read More »ಲಂಚ: ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಸೇರಿ ನಾಲ್ವರ ಬಂಧಿಸಿದ ಸಿಬಿಐ
ನವದೆಹಲಿ: ಲಂಚ ಪಡೆದ ಗಂಭೀರ ಆರೋಪದಡಿ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಇಬ್ಬರು ಜಂಟಿ ನಿರ್ದೇಶಕ ಶ್ರೇಣಿಯ ಅಧಿಕಾರಿಗಳು, ಹಿರಿಯ ತಾಂತ್ರಿಕ ಸಹಾಯಕ ಮತ್ತು ಅಲೋಕ್ ಇಂಡಸ್ಟ್ರೀಸ್‌ನ ಸಹವರ್ತಿ ಸೇರಿದಂತೆ ಒಟ್ಟು ನಾಲ್ವರನ್ನು ಶನಿವಾರ ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ. ತನಿಖೆಯ ವೇಳೆ ಅಧಿಕಾರಿಗಳಿಂದ ಸುಮಾರು 59.80 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಬಿಐ ಪ್ರಕಟಣೆ ತಿಳಿಸಿದೆ. ನವದೆಹಲಿಯಲ್ಲಿರುವ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಜಂಟಿ ನಿರ್ದೇಶಕ, ಹಿರಿಯ …
Read More »ಖಾನಾಪೂರ- ಗೋವಾ ರಾಜ್ಯ ಹೆದ್ದಾರಿಯ ರುಮೇವಾಡಿ ಕ್ರಾಸ್ ಬಳಿ ಈ ಸರ್ಕಸ್ ನಲ್ಲಿ ಇತ್ತೀಚೆಗೆ ಒಂದು ಜೀವಹಾನಿ ಕೂಡಾವಾಗಿದೆ.
ನೋಡಿ, ನೋಡಿ ಸರ್ಕಸ್ ನೋಡಿ ಅದು ಎಲ್ಲಿ ಅಂತೀರಾ ಅಲ್ಲೇ ರೀ ನಮ್ಮ ಖಾನಾಪೂರ- ಗೋವಾ ರಾಜ್ಯ ಹೆದ್ದಾರಿಯ ರುಮೇವಾಡಿ ಕ್ರಾಸ್ ಬಳಿ ಈ ಸರ್ಕಸ್ ನಲ್ಲಿ ಇತ್ತೀಚೆಗೆ ಒಂದು ಜೀವಹಾನಿ ಕೂಡಾವಾಗಿದೆ. ಗೋವಾ ದಿಂದ ಬೆಳಗಾವಿ, ಹಳಿಯಾಳ ದಿಂದ ಬೆಳಗಾವಿಗೆ ಸಂಪರ್ಕಿಸುವ ಈ ಮುಖ್ಯ ರಸ್ತೆ ಯು ಸುಮಾರು ಹತ್ತಾರು ಗ್ರಾಮಗಳಿಗೆ ಸಂಪರ್ಕದ ರಸ್ತೆ ಈ ರಸ್ತೆಯಲ್ಲಿ ಪ್ರತಿದಿನ, ಪ್ರತಿಕ್ಷಣವೂ ಸರ್ಕಸ್ ಮಾಡಿಯೇ ಮುಂದೆ ಹೋಗಬೇಕಾದ ಪರಿಸ್ಥಿತಿ. ಇದಕ್ಕೆ …
Read More »ಇಬ್ಬರು ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಸ್ಕ್ರೂಡ್ರೈವರ್ನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಇಬ್ಬರು ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಸ್ಕ್ರೂಡ್ರೈವರ್ನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಇಬ್ಬರು ಕೈದಿಗಳ ನಡುವೆ ಮಾರಾಮಾರಿ ನಡೆದಿದೆ. ಗಲಾಟೆಯಲ್ಲಿ ಓರ್ವ ಕೈದಿ ಸ್ಕ್ರೂಡ್ರೈವರ್ನಿಂದ ಮತ್ತೊಬ್ಬ ಕೈದಿಗೆ ಐದು ಬಾರಿ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಶಂಕರ ಭಜಂತ್ರಿ ಕೊಲೆ ಮಾಡಲು ಯತ್ನಿಸಿದ ಕೈದಿ. ಮಂಡ್ಯ ಮೂಲದ ಸಾಯಿಕುಮಾರ್ ಗಾಯಗೊಂಡ ವಿಚಾರಣಾಧೀನ ಕೈದಿ. ಸಾಯಿಕುಮಾರ್ ಅವರಿಗೆ …
Read More »ಹಾಸ್ಟೆಲ್ ಅಥವಾ ಪಿಜಿ ಕೊಠಡಿಗಳಲ್ಲಿ ವಾಸಿಸುವ ಜನರ ಜೇಬಿಗೆ ಕತ್ತರಿ
ಹಾಸ್ಟೆಲ್ ಅಥವಾ ಪಿಜಿ ಕೊಠಡಿಗಳಲ್ಲಿ ವಾಸಿಸುವ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಏಕೆಂದರೆ, ಇನ್ನು ಮುಂದೆ ಹಾಸ್ಟೆಲ್-ಪಿಜಿ ಬಾಡಿಗೆಗೆ ಶೇ 12ರಷ್ಟು ಜಿಎಸ್‌ಟಿ ಅನ್ವಯಿಸಲಿದೆ. ಹೌದು. “ಪಾವತಿಸಿದ ಬಾಡಿಗೆಗೆ ಶೇ 12ರಷ್ಟು ಜಿಎಸ್‌ಟಿ ಅನ್ವಯವಾಗುವುದರಿಂದ ವಿದ್ಯಾರ್ಥಿಗಳು ಹಾಸ್ಟೆಲ್ ಸೌಕರ್ಯಕ್ಕಾಗಿ ಹೆಚ್ಚಿನ ಹಣ ಪಾವತಿಸಲೇಬೇಕಾಗುತ್ತದೆ. ಹಾಸ್ಟೆಲ್‌ಗಳು ವಸತಿ ಘಟಕಗಳಲ್ಲ, ಆದ್ದರಿಂದ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ವಿನಾಯಿತಿ ನೀಡುವುದಿಲ್ಲ” ಎಂದು ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ ಎರಡು ಪ್ರತ್ಯೇಕ ಪ್ರಕರಣಗಳಿಗೆ …
Read More »ಮಳೆ ಹೆಚ್ಚಿರುವ ಕಾರಣ ಇಂದಿನಿಂದ ಕೊಡಚಾದ್ರಿ ಬೆಟ್ಟಕ್ಕೆ ಪ್ರವೇಶ ನಿಷೇಧ
ಶಿವಮೊಗ್ಗ: ಮುಂಗಾರು ಮಳೆ ಹೆಚ್ಚಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ಪ್ರಮುಖ ಜಲಪಾತ, ಸಫಾರಿ ಮತ್ತು ಚಾರಣ ತಾಣಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಕುದುರೆಮುಖದ ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ರಾಜ್ಯದ ಪ್ರಸಿದ್ಧ ಧಾರ್ಮಿಕ ಹಾಗೂ ಚಾರಣ ತಾಣವಾದ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಗಡಿಭಾಗವಾದ ಕೊಡಚಾದ್ರಿ ಬೆಟ್ಟಕ್ಕೂ ಪ್ರವೇಶ ನಿಷೇಧಿಸಲಾಗಿದೆ. ಮುಂಗಾರು ಮಳೆ ತೀವ್ರಗೊಂಡಿದ್ದು, ಜಲಪಾತಗಳ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಇದೆ. ಪ್ರವಾಸಿಗರು …
Read More »