ನವದೆಹಲಿ: ರಾಜಕೀಯ ಚಾಣಕ್ಯ ಎಂದು ಕರೆಯಲ್ಪಡುವ ಮಹಾರಾಷ್ಟ್ರದ ನಾಯಕ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಮತ್ತೊಂದು ಹಿನ್ನಡೆ ಅನುಭವಿಸಿದ್ದಾರೆ. ನಾಗಾಲ್ಯಾಂಡ್‌ನ ಎಲ್ಲ ಏಳೂ ಎನ್‌ಸಿಪಿ ಶಾಸಕರು ಅಜಿತ್ ಪವಾರ್ ಬಣಕ್ಕೆ ಬೆಂಬಲ ಸೂಚಿಸಿ, ಶರದ್ ಪವಾರ್ಗೆ ಶಾಕ್ ನೀಡಿದ್ದಾರೆ. ಈಶಾನ್ಯ ರಾಜ್ಯದ ಈ ಎನ್‌ಸಿಪಿ ಶಾಸಕರು ಗುರುವಾರ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ಗೆ ಬೆಂಬಲ ಸೂಚಿಸಿ ಪತ್ರ ಕಳುಹಿಸಿರುವುದಾಗಿ ನಾಗಾಲ್ಯಾಂಡ್‌ನ ಎನ್‌ಸಿಪಿ ಅಧ್ಯಕ್ಷ ವಂತುಂಗೋ …
Read More »Monthly Archives: ಜುಲೈ 2023
ರಾಯಚೂರು: ತಂದೆಯನ್ನು ಹತ್ಯೆ ಮಾಡಿ ಹೆದ್ದಾರಿ ಪಕ್ಕದಲ್ಲಿ ಹೂತಿಟ್ಟ ಶವವನ್ನು ಹೊರತೆಗೆದ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣದ ತನಿಖೆ ನಡೆಸಿದ ಘಟನೆ ಗುರುವಾರ ರಾಯಚೂರಿನಲ್ಲಿ ನಡೆಯಿತು. ಆರೋಪಿ ಈರಣ್ಣ (35) ಎಂಬಾತ ಜುಲೈ 7ರಂದು ತನ್ನ ತಂದೆ ಶಿವನಪ್ಪ(70) ಅವರನ್ನು ಕೊಲೆಗೈದು ಶವವನ್ನು ಹೆದ್ದಾರಿ ಪಕ್ಕದಲ್ಲಿನ ಜಮೀನಿನಲ್ಲಿ ಹೂತಿದ್ದ. ವಡ್ಲೂರು ಗ್ರಾಮದಲ್ಲಿ ನಡೆದ ಘಟನೆ 12 ದಿನಗಳ ಬಳಿಕ ಬೆಳಕಿಗೆ ಬಂದಿತ್ತು. ಪ್ಲಾಸ್ಟಿಕ್ ಚೀಲದಲ್ಲಿತ್ತು ಶವ: ಗುರುವಾರ ರಾಯಚೂರು ಸಹಾಯಕ ಆಯುಕ್ತೆ ಮೆಹಬೂನಿ ಸಮ್ಮುಖದಲ್ಲಿ ರಾಯಚೂರು ಗ್ರಾಮೀಣ ಪೊಲೀಸರು ಮೃತದೇಹ ಹೂತಿಟ್ಟ ಸ್ಥಳಕ್ಕೆ ತೆರಳಿ, ಜೆಸಿಬಿ ಮೂಲಕ ಅಗೆದು ಶವ ಹೊರತೆಗೆದರು. ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿಟ್ಟು ಹೂತಿಟ್ಟಿದ್ದು ಕಂಡುಬಂದಿದೆ. ಶವ ಹೊರ ತೆಗೆದ ನಂತರ ಪಂಚನಾಮ ಮಾಡಿ, ಕಾನೂನು ನಿಯಮಗಳನ್ನು ಅನುಸರಿಸಲಾಯಿತು. ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿ ಮತ್ತೆ ಅಲ್ಲೇ ಸಂಸ್ಕಾರ ನಡೆಸಲಾಯಿತು. ಜಿಟಿಜಿಟಿ ಮಳೆಯ ನಡುವೆ ಕಾರ್ಯಾಚರಣೆ ನಡೆಯಿತು. ಸ್ಥಳದಲ್ಲಿ ನೂರಾರು ಜನ ಸೇರಿದ್ದರು. ಹಣಕ್ಕಾಗಿ ಜಗಳ, ಕೊಲೆಯಲ್ಲಿ ಅಂತ್ಯ: ಭೂಸ್ವಾಧೀನದಲ್ಲಿ ಶಿವನಪ್ಪ ಜಮೀನು ಕಳೆದುಕೊಂಡಿದ್ದು, ಪರಿಹಾರದ ಹಣ ಪಡೆದಿದ್ದರು. ಈ ಹಣದ ವಿಚಾರವಾಗಿ ತಂದೆಯನ್ನು ಪೀಡಿಸಿ ಮಗ ಜಗಳವಾಡಿದ್ದನು. ಕಳೆದ ಜುಲೈ 7ರಂದು ಜಗಳ ತೀವ್ರಗೊಂಡು ಮನೆಯಲ್ಲಿದ್ದ ಪೈಪ್ ತೆಗೆದುಕೊಂಡು ತಂದೆಗೆ ಮಗ ಹೊಡೆದಿದ್ದ. ತೀವ್ರ ಗಾಯಗೊಂಡ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದ. ಬಳಿಕ ಯಾರಿಗೂ ವಿಚಾರ ತಿಳಿಯದಂತೆ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಒಬ್ಬನೇ ಜಮೀನಿಗೆ ಸಾಗಿಸಿ ಗುಂಡಿ ಅಗೆದು ಹೂತಿಟ್ಟಿದ್ದ. ಯಾರಿಗೂ ಅನುಮಾನ ಬರದಂತೆ ತಂದೆ ಕಾಣೆಯಾಗಿದ್ದಾನೆ ಎಂದು ರಾಯಚೂರು ಗ್ರಾಮೀಣ ಪೊಲೀಸರಿಗೆ ಸುಳ್ಳು ದೂರು ನೀಡಿದ್ದ. ಆದರೆ ಕುಟುಂಬಸ್ಥರಿಗೆ ಮಗನ ಮೇಲೆ ಅನುಮಾನ ಬಂದಿತ್ತು. ಹೀಗಾಗಿ ಮಗನನ್ನು ಪದೇ ಪದೇ ವಿಚಾರಿಸಿದ್ದಾರೆ. ಅಂತಿಮವಾಗಿ, ಆರೋಪಿ ಈರಣ್ಣ ತಾನೇ ಜು.19ರಂದು ಪೊಲೀಸ್ ಸ್ಟೇಷನ್ಗೆ ಬಂದು ತಪ್ಪೊಪ್ಪಿಕೊಂಡು ಶರಣಾಗಿದ್ದ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ರಾಯಚೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು: ತಂದೆಯನ್ನು ಹತ್ಯೆ ಮಾಡಿ ಹೆದ್ದಾರಿ ಪಕ್ಕದಲ್ಲಿ ಹೂತಿಟ್ಟ ಶವವನ್ನು ಹೊರತೆಗೆದ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣದ ತನಿಖೆ ನಡೆಸಿದ ಘಟನೆ ಗುರುವಾರ ರಾಯಚೂರಿನಲ್ಲಿ ನಡೆಯಿತು. ಆರೋಪಿ ಈರಣ್ಣ (35) ಎಂಬಾತ ಜುಲೈ 7ರಂದು ತನ್ನ ತಂದೆ ಶಿವನಪ್ಪ(70) ಅವರನ್ನು ಕೊಲೆಗೈದು ಶವವನ್ನು ಹೆದ್ದಾರಿ ಪಕ್ಕದಲ್ಲಿನ ಜಮೀನಿನಲ್ಲಿ ಹೂತಿದ್ದ. ವಡ್ಲೂರು ಗ್ರಾಮದಲ್ಲಿ ನಡೆದ ಘಟನೆ 12 ದಿನಗಳ ಬಳಿಕ ಬೆಳಕಿಗೆ ಬಂದಿತ್ತು. ಪ್ಲಾಸ್ಟಿಕ್ ಚೀಲದಲ್ಲಿತ್ತು ಶವ: ಗುರುವಾರ ರಾಯಚೂರು ಸಹಾಯಕ ಆಯುಕ್ತೆ …
Read More »ಭದ್ರಾವತಿ: ರೌಡಿಶೀಟರ್ ಬರ್ಬರ ಹತ್ಯೆ
ಶಿವಮೊಗ್ಗ: ರೌಡಿಶೀಟರ್ ಮುಜೀಬ್ (32) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಕಳೆದ ರಾತ್ರಿ ಭದ್ರಾವತಿಯಲ್ಲಿ ನಡೆದಿದೆ. ಬೊಮ್ಮನಕಟ್ಟೆ ಬಳಿಯ ಹಳೆ ನಂಜಾಪುರದಲ್ಲಿ ಘಟನೆ ಜರುಗಿದೆ. ಮುಜೀಬ್ ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯಾಗಿದ್ದ. ಇಂದು ಬೆಳಗ್ಗೆ ಸ್ಥಳೀಯರು ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೇಪರ್‌ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಜೀಬ್‌ಗೆ ಎರಡು ಮದುವೆಯಾಗಿದ್ದು, ಮೊದಲನೇ ಪತ್ನಿಗೆ ಇಬ್ಬರು ಮತ್ತು ಎರಡನೇ ಪತ್ನಿಗೆ ಒಂದು …
Read More »ಧಾರವಾಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಶಾಲೆಯಿಂದ ಮನೆಗೆ ವಾಪಸ್ ತೆರಳಲು ಮಕ್ಕಳು ಪರದಾಟ
ಧಾರವಾಡ: ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದ್ದು, ಕಳೆದ ಮೂರು ದಿನದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಜಿಲ್ಲೆಯ ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದ ಸೇತುವೆ ಜಲಾವೃತಗೊಂಡಿದೆ. ಮನೆಗಳಿಗೆ ವಾಪಸ್ ಆಗಲು ಶಾಲಾ ಮಕ್ಕಳು ಪರದಾಟ ನಡೆಸಬೇಕಾಯಿತು. ಟ್ರ್ಯಾಕ್ಟರ್ ಮತ್ತು ಜೆಸಿಬಿ ಮೂಲಕ ಮಕ್ಕಳು ಹಳ್ಳ ದಾಟಿದ್ದಾರೆ. ಕಂಬಾಗರಣವಿ ಗ್ರಾಮದ ಹೊರವಲಯದಲ್ಲಿರುವ ಹಳ್ಳದ ಸೇತುವೆ ನಿರಂತರ ಮಳೆಯಿಂದ ಜಲಾವೃತಗೊಂಡ ಹಿನ್ನೆಲೆಯಲ್ಲಿ ಸೇತುವೆ ಒಂದು ಬದಿಗೆ ಬಸ್ ಮಕ್ಕಳನ್ನು ಬಿಟ್ಟು ಹೋಗಿದೆ. ಹೀಗಾಗಿ ಮಕ್ಕಳನ್ನು …
Read More »ಮೋಟಾರು ವಾಹನಗಳ ತೆರಿಗೆ ಪರಿಷ್ಕರಣೆ ತಿದ್ದುಪಡಿ ವಿಧೇಯಕ ಅಂಗೀಕಾರ: ಇನ್ಮುಂದೆ ತೆರಿಗೆ ಹೆಚ್ಚಳ, ಯಾವ ವಾಹನಕ್ಕೆ ಎಷ್ಟು?
ಬೆಂಗಳೂರು: ಮೋಟಾರು ವಾಹನ ತೆರಿಗೆಗಳನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಗುರುವಾರ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ 2023 ಅಂಗೀಕೃತವಾಯಿತು. ಸಿಎಂ ಸಿದ್ದರಾಮಯ್ಯ 2023-24ರ ಸಾಲಿಗೆ ಮಂಡಿಸಿದ ಬಜೆಟ್ ಪ್ರಸ್ತಾವನೆಯಂತೆ ತೆರಿಗೆ ಪರಿಷ್ಕರಣೆ ಸಂಬಂಧ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿದೆ. ಹೀಗಾಗಿ, ಇನ್ನು ಮುಂದೆ ವಾಹನ ಮಾಲೀಕರ ಜೇಬಿಗೆ ಹೆಚ್ಚಿನ ಹೊರೆ ಬೀಳಲಿದೆ. ಸರಕು ವಾಹನಗಳ ಪೂರ್ಣಾವಧಿ ತೆರಿಗೆ ಪರಿಷ್ಕರಣೆ: ಸರಕು ವಾಹನದ ಒಟ್ಟಾರೆ ತೂಕ 1,500 ಕೆ.ಜಿ …
Read More »ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದ ನಾಲ್ವರು ಅಪರಾಧಿಗಳಿಗೆ ಮರಣದಂಡನೆಯೇ ಸೂಕ್ತ ಎಂದ ಮಣಿಪುರ ಸಿಎಂ
ಇಂಫಾಲ: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೇ 4ರಂದು ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಗುಂಪಿನಲ್ಲಿ ಭಾಗಿಯಾಗಿ, ಅವರನ್ನು ಅಮಾನುಷವಾಗಿ ಎಳೆದುಕೊಂಡು ಹೋಗುತ್ತಿದ್ದ ಓರ್ವ ವ್ಯಕ್ತಿ ಸೇರಿದಂತೆ ಗುರುವಾರ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ನಿನ್ನೆ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್, “ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇದು ಅಮಾನವೀಯ ಘಟನೆ. ಅಪರಾಧಿಗಳು ಮರಣದಂಡನೆಗೆ ಅರ್ಹರು” ಎಂದು ಹೇಳಿದರು. ಇದಾದ ಕೆಲವೇ …
Read More »ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಕಡಿಮೆ ದರದಲ್ಲಿ ಆಹಾರ ಪದಾರ್ಥ ವಿತರಣೆ
ಹುಬ್ಬಳ್ಳಿ: ಸಾರ್ವಜನಿಕರಿಗೆ ಗುಣಮಟ್ಟದ ಸಾರಿಗೆ ಸೇವೆ ಜೊತೆಗೆ ಸುರಕ್ಷಿತ ಪ್ರಯಾಣದ ಸೇವೆಯನ್ನು ಒದಗಿಸುತ್ತಿರುವ ನೈಋತ್ಯ ರೈಲ್ವೆ ಇಲಾಖೆ ಈಗ ಮತ್ತೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ಪ್ರಯಾಣಿಕರ ಆರ್ಥಿಕ ಹೊರೆಯನ್ನು ತಗ್ಗಿಸುವ ಮೂಲಕ ಕಡಿಮೆ ದರದಲ್ಲಿಯೇ ಗುಣಮಟ್ಟದ ಆಹಾರ ನೀಡುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ವಿಶ್ವದ ಅತಿದೊಡ್ಡ ರೈಲ್ವೆ ಫ್ಲಾಟ್ ಫಾರಂ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಜೊತೆಗೆ ಸಾಕಷ್ಟು ಜನಪರ ಕಾರ್ಯವನ್ನು ಮಾಡಿರುವ ನೈಋತ್ಯ ರೈಲ್ವೆ ವಲಯವು, ಈಗ ಪ್ರಯಾಣಿಕರಿಗೆ ಕಡಿಮೆ ದರದಲ್ಲಿಯೇ ಗುಣಮಟ್ಟದ …
Read More »ಕಂಗಾಲಾಗಿದ್ದ ಬೆಳಗಾವಿ ರೈತರ ಮೊಗದಲ್ಲಿ ಮಂದಹಾಸ
ಬೆಳಗಾವಿ: ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಬೆಳಗಾವಿ ರೈತರು ಕಂಗಾಲಾಗಿದ್ದರು. ಕಳೆದೊಂದು ವಾರದಿಂದ ಸುರಿಯಿತ್ತಿರುವ ಮಳೆಯಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಬಿಟ್ಟು ಬಿಡದೇ ಮಳೆಯಾಗುತ್ತಿರುವುದರಿಂದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ. ನೀರಿಲ್ಲದೇ ಕಮರುತ್ತಿದ್ದ ಭತ್ತದ ಸಸಿಗಳಿಗೆ ಸದ್ಯ ಜೀವ ಕಳೆ ಬಂದಂತಾಗಿದೆ. ನೀರಿಲ್ಲದೇ ಖಾಲಿ ಖಾಲಿಯಾಗಿದ್ದ ಬೆಳಗಾವಿ ಸುತ್ತಮುತ್ತಲಿನ ರೈತರ ಗದ್ದೆಗಳಲ್ಲಿ ಈಗ ಕಣ್ಣು ಹಾಯಿಸಿದಲ್ಲೆಲ್ಲ ನೀರು ಕಾಣಿಸುತ್ತಿದೆ. ರೈತರ ಪ್ರಾರ್ಥನೆಗೆ ವರುಣ ದೇವ ಕೃಪೆ ತೋರಿದ್ದಾನೆ. ಜಿಲ್ಲೆಯಾದ್ಯಂತ ವಾರದಿಂದ ಬಿಟ್ಟು …
Read More »ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೋಟೆಲ್ ಕ್ಯಾಶಿಯರ್ನ ಕೊಲೆಯಾಗಿದೆ.
ಬೆಂಗಳೂರು : ನಗರದ ಪ್ರತಿಷ್ಠಿತ ಹೋಟೆಲ್ ಕ್ಯಾಶಿಯರ್ನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಇಲ್ಲಿನ ಜೀವನ್ ಭೀಮಾನಗರ ಮುರುಗೇಶ್ ಪಾಳ್ಯದಲ್ಲಿ ನಡೆದಿದೆ. ಖಾಸಗಿ ಹೋಟೆಲ್ ಅಂಡ್ ಸರ್ವಿಸ್ ಅಪಾರ್ಟ್‌ಮೆಂಟಿನ ಕ್ಯಾಶಿಯರ್ ಸುಭಾಷ್ ಕೊಲೆಯಾದವರು ಎಂದು ಗುರುತಿಸಲಾಗಿದೆ. ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬಾತನಿಂದ ಕೃತ್ಯ ನಡೆದಿದ್ದು, ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸುಭಾಷ್ ವಾಸವಿದ್ದ ರೂಮಿನಲ್ಲಿ ಸೋಫಾ ಮೇಲೆ ಮಲಗಿದ್ದಾಗ ಆತನಿಗೆ ಚಾಕುವಿನಿಂದ ಇರಿದು ಹತ್ಯೆಗೈಯಲಾಗಿದೆ. ಬೆಳಗ್ಗೆ …
Read More »ಮನೆಯ ಅಲ್ಮೇರಾದಲ್ಲಿ ಬಚ್ಚಿಟ್ಟಿದ್ದ ನಾಲ್ಕು ಹ್ಯಾಂಡ್ ಗ್ರೆನೇಡ್ ವಶಕ್ಕೆ: ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಮಾಹಿತಿ
ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪದಡಿ ಐವರು ಶಂಕಿತ ಭಯೋತ್ಪಾದಕರನ್ನ ಬಂಧಿಸಿರುವ ಸಿಸಿಬಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಪ್ರಕರಣದ ಐದನೇ ಆರೋಪಿ ಜಾಯಿದ್ ತಬರೇಜ್ ನ ಕೊಡಿಗೆಹಳ್ಳಿಯಲ್ಲಿರುವ ಮನೆಯಲ್ಲಿದ್ದ ನಾಲ್ಕು ಜೀವಂತ ಗ್ರೆನೇಡ್ ಜಪ್ತಿ ಮಾಡಿದ್ದಾರೆ. ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಆರೋಪದಡಿ ಸುಹೇಲ್, ಜಾಹಿದ್, ಮುದಾಸಿರ್, ಫೈಜರ್ ಹಾಗೂ ಉಮರ್ ಎಂಬುವರನ್ನು ನಿನ್ನೆ ಸಿಸಿಬಿ ಪೊಲೀಸರು ಬಂಧಿಸಿ 7 ಕಂಟ್ರಿ ಮೇಡ್ ಪಿಸ್ತೂಲ್, 42 …
Read More »