Breaking News

Daily Archives: ಜುಲೈ 29, 2023

ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರುಗಳ ನೇಮಕ ಮಾಡಿ ಸರ್ಕಾರ ಆದೇಶ

ಬೆಂಗಳೂರು : ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರುಗಳನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.   15ನೇ ಆಗಸ್ಟ್, 2023ರ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ (ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ) ಈ ಕೆಳಗೆ ಸೂಚಿಸಿದಂತೆ ಸಚಿವರುಗಳನ್ನು ಧ್ವಜಾರೋಹಣ ಮಾಡಲು ನೇಮಿಸಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರುಗಳ ನೇಮಕ ಗೃಹ ಸಚಿವ ಡಾ. ಜಿ. ಪರಮೇಶ್ವರ್ – ತುಮಕೂರು. …

Read More »

ನಮ್ಮ ನಾಯಕ ಡಿಕೆಶಿ, ಸಿಎಂ ಸಿದ್ದರಾಮಯ್ಯ ಅವರ ಜೊತೆ ಸೇರಿ ಪಕ್ಷ ಕಟ್ಟಿದ್ದರಿಂದ ಇಂದು ರಾಜ್ಯದಲ್ಲಿ ಅಧಿಕಾರ ಹಿಡಿದಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು : ಯುವಕರೇ ದೇಶದ ಆಸ್ತಿ, ಯುವಕರಿಂದಲೇ ದೇಶ ಮುನ್ನಡೆಯಬೇಕು. ದೇಶದ ಉಳಿವಿಗಾಗಿ ಯುವಕರು ಎಚ್ಚೆತ್ತುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಕರೆ ನೀಡಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, 2024ರ ಚುನಾವಣೆ ನಮ್ಮ ಮುಂದಿನ ಗುರಿಯಾಗಿದ್ದು, ಈ ಗುರಿ ತಲುಪಬೇಕಿದೆ ಎಂದರು. ಭವಿಷ್ಯದ ನಾಯಕರನ್ನು ರೂಪಿಸಲು ಯುವ ಘಟಕಗಳು ಪ್ರಮುಖ ಪಾತ್ರ …

Read More »

ತಡವಾಗಿಯಾದರೂ ಭೋರ್ಗರೆಯುತ್ತ ಮುಂಗಾರು ಮಳೆ ದೇಶಾದ್ಯಂತ ಹೆಚ್ಚಿನ ಅನಾಹುತ ಸೃಷ್ಟಿಸುತ್ತಿದೆ.

ಏತೂರುನಗರ (ತೆಲಂಗಾಣ): ತಡವಾಗಿಯಾದರೂ ಭೋರ್ಗರೆಯುತ್ತ ಮುಂಗಾರು ಮಳೆ ದೇಶಾದ್ಯಂತ ಹೆಚ್ಚಿನ ಅನಾಹುತ ಸೃಷ್ಟಿಸುತ್ತಿದೆ. ಆಂಧ್ರಪ್ರದೇಶ, ತೆಲಂಗಾಣದಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. 3 ದಿನಗಳಿಂದ ಸತತ ಮಳೆಯಾಗಿದ್ದು ಪ್ರವಾಹ ಉಂಟಾಗಿದೆ. ಹೈದರಾಬಾದ್​ಗೆ ಸಮೀಪವಿರುವ ಏರೂತುನಗರ ಮಂಡಲದ ಕೊಂಡಾಯಿ ಗ್ರಾಮ ದಿಢೀರ್​ ಮಳೆಗೆ ಮುಳುಗಡೆಯಾಗಿದ್ದು, 8 ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋದ ರ್ದುರ್ಘಟನೆ ನಡೆದಿದೆ. ತೀವ್ರ ಮಳೆ ಸುರಿದ ಕಾರಣ ಕೊಂಡಾಯಿ ಗ್ರಾಮದ ಕೆಲ ಮನೆಗಳು ಮುಳುಗಡೆಯಾಗಿವೆ. ಪ್ರಾಣ ರಕ್ಷಣೆಗೆಂದು 8 ಮಂದಿ …

Read More »

ಬಂದ್​, ಗ್ರಾಮದಲ್ಲೇ ಬಸಿಯುತ್ತಿರುವ ಮಳೆ ನೀರು..

ದಾವಣಗೆರೆ: ಜಿಲ್ಲೆಯ ಬಲ್ಲೂರು ಗ್ರಾಮದಲ್ಲಿ ಹಾದು ಹೋಗಿರುವ ಕಾಲುವೆಯನ್ನು ಬಂದ್ ಮಾಡಿದ್ದರಿಂದ ಮಳೆಗಾಲದಲ್ಲಿ ಇಡೀ ಗ್ರಾಮದಲ್ಲಿ ನೀರು ಹೊರಹೋಗದೆ ಬಸಿಯುತ್ತಿದೆ. ಇದರಿಂದ ಗ್ರಾಮಸ್ಥರು ಮನೆ ಶಾಲೆ ಎಲ್ಲಿ ಬೀಳುತ್ತೋ ಎಂಬ ಆತಂಕದಲ್ಲಿ‌ ಕಾಲ ಕಳೆಯುತ್ತಿದ್ದಾರೆ. ಮಳೆ ಹೆಚ್ಚು ಆಗುತ್ತಿರುವ ಕಾರಣ ಕೆಲ ಮನೆಗಳು ನೆಲಕ್ಕುರುಳಿವೆ. ಬಲ್ಲೂರು,‌ ಜಡಗನಹಳ್ಳಿ, ಶಿರಗಾನಹಳ್ಳಿ ಗ್ರಾಮದಲ್ಲಿ ಮಳೆ‌ನೀರು ಬಸಿಯುತ್ತಿರುವುದರಿಂದ‌ ನಮ್ಮ ಕಟ್ಟಡಗಳನ್ನು ಉಳಿಸಿಕೊಡಿ‌ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.‌ ಈ ಗ್ರಾಮಗಳು ನೀರಾವರಿ ಪ್ರದೇಶದಿಂದ 9 ರಿಂದ‌ 10 …

Read More »