Breaking News

Daily Archives: ಜುಲೈ 26, 2023

ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ನಾಳೆ ( ಜು. 26 ) ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.   ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ತುರ್ತು ಕ್ರಮಗಳನ್ನು ಕೈಗೊಂಡಿದೆ. …

Read More »

ಭೋರ್ಗರೆಯುತ್ತಿರುವ ನೇತ್ರಾವತಿ: 1974ರ ಬಳಿಕ ಮತ್ತೆ ಮುಳುಗುವ ಭೀತಿಯಲ್ಲಿ ಬಂಟ್ವಾಳ?

ಬಂಟ್ವಾಳ (ದಕ್ಷಿಣ ಕನ್ನಡ): 1923, ಆಗಸ್ಟ್​ 7 ಮತ್ತು 8.. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಮಹಾ ಪ್ರವಾಹವೊಂದು ಬಂದಿತ್ತು. ನೋಡಿದವರು ಯಾರಿದ್ದಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ, ಹಿರಿಯರಿಂದ ಕಿರಿಯರಿಗೆ ಮಾಹಿತಿ ವರ್ಗಾವಣೆ ಆಗುವುದೇನು ದೊಡ್ಡ ವಿಚಾರವಲ್ಲ. 1923ರ ಪ್ರವಾಹದಲ್ಲಿ ಬದುಕಿದ ಮಕ್ಕಳು ಈಗ ವೃದ್ಧಾಪ್ಯದಲ್ಲಿದ್ದಾರೆ. ತಮ್ಮ ಹಿರಿಯರು ಹೇಳಿದ್ದು ಅವರಿಗೆ ನೆನಪಿದೆ. ಅಲ್ಲದೇ 1974ರ ಆಗಸ್ಟ್​ ತಿಂಗಳಿನಲ್ಲೂ ದೊಡ್ಡದೊಂದು ಪ್ರವಾಹ ಬಂದಿತ್ತು. ಸದ್ಯ ಈ ಎಲ್ಲ …

Read More »

ಮಳೆ ತಗ್ಗಿದರೂ ಮುಂದುವರಿದ ಪ್ರವಾಹ: ಹೆದ್ದಾರಿಗಳಲ್ಲಿ ಗುಡ್ಡ ಕುಸಿತ,

ಕಾರವಾರ (ಉತ್ತರ ಕನ್ನಡ): ಉತ್ತರ ಕನ್ನಡದಲ್ಲಿ ಅಬ್ಬರಿಸುತ್ತಿದ್ದ ಮಳೆ ಕೊಂಚ ಕಡಿಮೆಯಾಗಿದ್ದು, ನದಿ ತೀರದ ಪ್ರದೇಶದಲ್ಲಿ ಸೃಷ್ಟಿಯಾಗಿದ್ದ ಪ್ರವಾಹ ಕೊಂಚ ಇಳಿಕೆಯಾಗಿದೆ. ಆದರೆ, ಪ್ರವಾಹ ಹಾಗೂ ಗಾಳಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಗುಡ್ಡ ಕುಸಿತದಿಂದಾಗಿ ಹಲವು ಹೆದ್ದಾರಿಗಳು ಬಂದ್​ ಆಗಿವೆ. ಜನ ಸಂಚಾರಕ್ಕೆ ಪರದಾಡಬೇಕಾದ ಸ್ಥಿತಿ ಮುಂದುವರಿದಿದೆ. ಉತ್ತರ ಕನ್ನಡದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಆರ್ಭಟಿಸುತ್ತಿದ್ದ ಮಳೆ ಅಬ್ಬರ ಸ್ವಲ್ಪ ಕಡಿಮೆಯಾಗಿದೆ. ಪರಿಣಾಮ ಗಂಗಾವಳಿ, ಅಘನಾಶಿನಿ, ವರದಾ ಹಾಗೂ …

Read More »

B.S.F. ಯೋಧನೊಬ್ಬ ಪಿಡಿಎಸ್ ಡೀಲರ್, ಆತನ ಪತ್ನಿ ಹಾಗೂ ಇಬ್ಬರು ಗ್ರಾಮಸ್ಥರು ಸೇರಿದಂತೆ ಒಟ್ಟು ನಾಲ್ವರ ಮೇಲೆ ಕತ್ತಿಯಿಂದ ಹಲ್ಲೆ

ಪಲಾಮು (ಜಾರ್ಖಂಡ್): ಬಿಎಸ್‌ಎಫ್ ಯೋಧನೊಬ್ಬ ಪಿಡಿಎಸ್ ಡೀಲರ್, ಆತನ ಪತ್ನಿ ಹಾಗೂ ಇಬ್ಬರು ಗ್ರಾಮಸ್ಥರು ಸೇರಿದಂತೆ ಒಟ್ಟು ನಾಲ್ವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಪಿಡಿಎಸ್ ಡೀಲರ್ (ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಯವ) ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಮೇದಿನಿ ರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಮೀನು ವಿವಾದದ ಹಿನ್ನೆಲೆ ಕತ್ತಿಯಿಂದ ಹಲ್ಲೆ: ಇಡೀ ಘಟನೆಯು ಪಲಮುವಿನ ಪಾಡ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಗೋಲ್ಹಾನಾದಲ್ಲಿ ನಡೆದಿದೆ. …

Read More »

ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವು

ಬೆಂಗಳೂರು : ನಗರದ ನಾಗವಾರದ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್​​ ಬಿದ್ದು ತಾಯಿ ಹಾಗೂ ಮಗು ಮೃತಪಟ್ಟ ಪ್ರಕರಣಕ್ಕೆ 10 ಕೋಟಿ ರೂ. ನಷ್ಟ ಪರಿಹಾರ ನೀಡಲು ಆದೇಶಿಸುವಂತೆ ಕೋರಿ ಮೃತ ಮಹಿಳೆಯ ಪತಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಲೋಹಿತ್ ಕುಮಾರ್ ವಿ. ಸುಲಾಖೆ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಬೆಂಗಳೂರು ಮೆಟ್ರೋ ರೈಲು …

Read More »

ಬೆಂಗಳೂರು ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಖದೀಮನನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ತಮಿಳುನಾಡಿನ ಧರ್ಮಪುರಿಯಿಂದ ಬೆಂಗಳೂರು ನಗರಕ್ಕೆ ಬಸ್​ನಲ್ಲಿ ಬಂದು ಮನೆಗಳ್ಳತನ ಮಾಡುತ್ತಿದ್ದ ಖದೀಮನನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ರಾಮಸ್ವಾಮಿ ಬಂಧಿತ ಆರೋಪಿ. ಈತನಿಂದ 30 ಲಕ್ಷ ರೂ ಮೌಲ್ಯದ 602 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಕಳೆದ 25 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಬನಶಂಕರಿ, ಸಿ.ಕೆ.ಅಚ್ಚುಕಟ್ಟು, ಮಡಿವಾಳ, ರಾಮಮೂರ್ತಿನಗರ ಹಾಗು ಕುಮಾರಸ್ವಾಮಿ ಲೇಔಟ್ ಸೇರಿದಂತೆ ನಗರದ ವಿವಿಧ ಪೊಲೀಸ್ …

Read More »