Breaking News

Daily Archives: ಜುಲೈ 19, 2023

ರಾಯಚೂರು ಜಿಲ್ಲಾ ಪಂಚಾಯತಿಯಲ್ಲಿದೆ ಉದ್ಯೋಗ; 35 ಸಾವಿರ ರೂಪಾಯಿ ವೇತನ

ರಾಯಚೂರು ಜಿಲ್ಲಾ ಪಂಚಾಯತ್​ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಮೆರಿಟ್‌ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಈ ಹುದ್ದೆಗಳ ಭರ್ತಿ ನಡೆಯುತ್ತದೆ. ಹುದ್ದೆಗಳು ತಾತ್ಕಾಲಿಕವಾಗಿದ್ದು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ. ಹುದ್ದೆಗಳ ವಿವರ : ರಾಯಚೂರು ಜಿಲ್ಲಾ ಪಂಚಾಯತ್​ನಿಂದ ಮನರೇಗಾ ಅಡಿಯಲ್ಲಿ ಬ್ಲಾಕ್​ ಲೈವ್ಲಿಹುಡ್​​ ಎಕ್ಸ್​ಪರ್ಟ್​​, ಬ್ಲಾಕ್​ ಎನ್​ಆರ್​ಎಂ ಎಕ್ಸ್​​ಪರ್ಟ್ ಸೇರಿದಂತೆ ಒಟ್ಟು 8​​ ಹುದ್ದೆಗಳು. ವಿದ್ಯಾರ್ಹತೆ …

Read More »

ಪ್ರತಿಪಕ್ಷಗಳ ಸಭೆಯಲ್ಲಿ IAS ಅಧಿಕಾರಿಗಳ ಬಳಕೆಗೆ ಆಕ್ಷೇಪ

ಬೆಂಗಳೂರು: ನಗರದಲ್ಲಿ ನಡೆದ ಮಹಾಘಟಬಂಧನ್ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರ ಆತಿಥ್ಯಕ್ಕಾಗಿ ಐಎಎಸ್ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿ, ಆಡಳಿತ ಹಾಗೂ ಬಿಜೆಪಿ ಸದಸ್ಯರ ನಡುವೆ ಏರಿದ ದನಿಯಲ್ಲಿ ವಾಗ್ವಾದ ನಡೆಯಿತು. ಕಲಾಪವನ್ನು ಕೆಲಕಾಲ ಮುಂದೂಡಿದ ಪ್ರಸಂಗವೂ ನಡೆಯಿತು. ಬೆಳಗ್ಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆ ಬಿಜೆಪಿಯ ಹಿರಿಯ ಶಾಸಕ ಆರ್.ಅಶೋಕ್ ವಿಷಯ ಪ್ರಸ್ತಾಪಿಸಿದರು. ಈ ವಿಚಾರದ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿ ಸದನದಲ್ಲಿ …

Read More »

ಬೆಂಗಳೂರಿನಲ್ಲಿ ಸೆರೆಯಾದ ಶಂಕಿತ ಉಗ್ರರ ಹಿಂದಿರುವ ಮಾಸ್ಟರ್‌ಮೈಂಡ್ ಯಾರು ಗೊತ್ತಾ?

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸುತ್ತಿದ್ದ ಗಂಭೀರ ಆರೋಪದಡಿ ಐವರು ಶಂಕಿತ ಉಗ್ರರನ್ನು ನಗರ ಪೊಲೀಸರು ಇಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್ ನಿಲ್ದಾಣ ಸೇರಿದಂತೆ ನಗರದ ಜನಸಂದಣಿ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸಲು ಹೊಂಚು ಹಾಕುತ್ತಿದ್ದ ಆರೋಪದಡಿ ಸುಹೇಲ್, ಉಮರ್, ಜಾಹಿದ್, ಮುದಾಸಿರ್ ಹಾಗೂ ಫೈಜರ್ ಎಂಬವರನ್ನು ಬಂಧಿಸಲಾಗಿದೆ. ಇವರಿಂದ 7 ಕಂಟ್ರಿಮೇಡ್ ಪಿಸ್ತೂಲ್​ಗಳು, 45 ಜೀವಂತ ಗುಂಡುಗಳು, ವಾಕಿಟಾಕಿ ಸೆಟ್ಸ್, ಒಂದು ಡ್ರ್ಯಾಗರ್ ಹಾಗೂ 12 ಮೊಬೈಲ್ …

Read More »

ಬೆಂಗಳೂರಿನಲ್ಲಿ ಸೆರೆ ಸಿಕ್ಕ ಐವರು ಶಂಕಿತ ಉಗ್ರರಿಗೆ 15 ದಿನ ಪೊಲೀಸ್‌ ಕಸ್ಟಡಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರುನಗರದಲ್ಲಿ ಭಾರಿ ಸ್ಫೋಟ ಎಸಗಲು ದೊಡ್ಡ ಮಟ್ಟದಲ್ಲಿ ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಇಂದು ಬೆಳಗ್ಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದೇಶದ್ರೋಹ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ್ದರು. ಈ ಕುರಿತು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತುರ್ತು ಮಾಧ್ಯಮಗೋಷ್ಠಿ ನಡೆಸಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. “ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಯೋಜನೆ …

Read More »

ರಾಜಧಾನಿ ಬೆಂಗಳೂರು ಉಗ್ರರ ಸುರಕ್ಷಿತ ತಾಣವಾಗಿ ಪರಿವರ್ತನೆಯಾಗುತ್ತಿದೆ : ಬೊಮ್ಮಾಯಿ

ಬೆಂಗಳೂರು: ರಾಜಧಾನಿ ಬೆಂಗಳೂರು ಉಗ್ರರ ಸುರಕ್ಷಿತ ತಾಣವಾಗಿ ಪರಿವರ್ತನೆಯಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಳೆದ ಎರಡು‌ ತಿಂಗಳಿಂದ ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ.‌ ಬೆಂಗಳೂರಿನ ಕಾನೂನು ಸುವ್ಯವಸ್ಥೆ ಅಪರಾಧ ನಿಯಂತ್ರಣ ಕೈ ತಪ್ತಿದೆ. ದಿನನಿತ್ಯ ಕೊಲೆ ಸುಲಿಗೆ ಸಾಮಾನ್ಯವಾಗುತ್ತಿದೆ ಎಂದು ದೂರಿದರು. ಉಗ್ರರನ್ನು ಬಂಧಿಸಿದ ಸಿಸಿಬಿಗೆ ಅಭಿನಂದನೆ ಸಲ್ಲುಸುತ್ತೇನೆ. ಆದರೆ ಬಹಳಷ್ಟು ಕೇಸ್​ಗಳು ಪೊಲೀಸ್ ಠಾಣೆಯಲ್ಲಿ ರಿಜಿಸ್ಟರ್ ಆಗುತ್ತಿಲ್ಲ. ಕಾನೂನು ಸುವ್ಯವಸ್ಥೆ, …

Read More »

ಹಣದ ವಿಚಾರವಾಗಿ ಮಗನೇ ತಂದೆಯನ್ನು ಕೊಲೆ ಮಾಡಿ ಹೂತಿಟ್ಟ

ರಾಯಚೂರು: ಹಣದ ವಿಚಾರವಾಗಿ ಮಗನೇ ತಂದೆಯನ್ನು ಕೊಲೆ ಮಾಡಿ ಹೂತಿಟ್ಟಿರುವ ಆತಂಕಕಾರಿ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಯಚೂರು ತಾಲೂಕಿನ ವಡ್ಲೂರು ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಶಿವನಪ್ಪ(65) ಮಗನಿಂದ ಕೊಲೆಯಾಗಿರುವ ತಂದೆ ಎಂದು ತಿಳಿದುಬಂದಿದೆ. 35 ವರ್ಷದ ಮಗ ಈರಣ್ಣ ಕೊಲೆ ಮಾಡಿರುವ ಆರೋಪಿ. ಜುಲೈ 07ರಂದು ಕೊಲೆ ಮಾಡಿ, ವಡ್ಲೂರು ಕ್ರಾಸ್​ನ ಹತ್ತಿರ ಹೊಸದಾಗಿ ನಿರ್ಮಾಣ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹೂತಿಟ್ಟಿದ್ದಾನೆ. ಬಳಿಕ ತಾನೇ …

Read More »

6 ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ 13 ಕನ್ನಡ ಶಾಲೆಗಳಿಗೆ ಬೀಗ.

ಕಾರವಾರ (ಉತ್ತರ ಕನ್ನಡ) : ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಸರ್ಕಾರ ನಾನಾ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಆದರೂ ಸರ್ಕಾರಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಇದಕ್ಕೆ ಉದಾಹರಣೆ ಎಂಬಂತೆ ಗಡಿ ಜಿಲ್ಲೆ ಉತ್ತರ ಕನ್ನಡದಲ್ಲಿ ಸರ್ಕಾರಿ ಶಾಲೆಗಳು ಅವನತಿಯತ್ತ ಸಾಗಿದ್ದು, ಕಳೆದ 6 ವರ್ಷಗಳಲ್ಲಿ ಬರೋಬ್ಬರಿ 13 ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳೇ ಇಲ್ಲದೇ ಬಾಗಿಲು ಮುಚ್ಚಿವೆ. ಹೌದು, ಕಾರವಾರ ಕರ್ನಾಟಕದ ಗಡಿ ಪ್ರದೇಶವಾಗಿದ್ದು, ಗೋವಾ ಗಡಿಯಲ್ಲಿ …

Read More »

ಯಲಗೂರು ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ ಆರಂಭ: ನೇಪಾಳದ ಕರೆನ್ಸಿ ನೋಟು, ಭಕ್ತರಿಂದ ತರಹೇವಾರಿ ಬೇಡಿಕೆ ಪತ್ರಗಳು ಪತ್ತೆ

ವಿಜಯಪುರ: ಜಿಲ್ಲೆಯ ಸುಕ್ಷೇತ್ರ ಯಲಗೂರಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಭಾನುವಾರ ಆರಂಭವಾಗಿದೆ. ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರ ಜಾಗೃತ ದೇವರೆಂದೇ ಖ್ಯಾತಿಯಾಗಿರುವ ಶ್ರೀ ಯಲಗೂರು ಆಂಜನೇಯ ದೇವಸ್ಥಾನದಲ್ಲಿ ನಿಡಗುಂದಿ ತಹಶೀಲ್ದಾರ್ ಕಿರಣಕುಮಾರ ಅವರ ನೇತೃತ್ವದಲ್ಲಿ ಆಂಜನೇಯ ದೇವಸ್ಥಾನದ ಆಡಳಿತ ಮಂಡಳಿ ಹುಂಡಿ ಎಣಿಕೆ ಮಾಡುತ್ತಿದ್ದಾರೆ. ನೇಪಾಳದ ಕರೆನ್ಸಿ ನೋಟುನೇಪಾಳದ ಕರೆನ್ಸಿ ನೋಟು, ಬೇಡಿಕೆ ಪತ್ರ ಪತ್ತೆ: ಹುಂಡಿಯಲ್ಲಿ ನೇಪಾಳ ದೇಶದ ಕರೆನ್ಸಿಗಳು ಪತ್ತೆಯಾಗಿವೆ. ಜತೆಗೆ ದೇವರಿಗೆ ಬರೆದ …

Read More »

ವಿಸ್ಮಯಕಾರಿ ಘಟನೆ..ನಿಬ್ಬೆರಗಾದ ಜನ..ಆಂಜನೇಯನಿಗೆ ಕೈಮುಗಿದು ಪ್ರಾಣಬಿಟ್ಟ ಕೋತಿ.!

ಬೆಂಗಳೂರು: ಕೋತಿಯೊಂದು ವೀರಾಂಜನೇಯ ಸ್ವಾಮಿಗೆ ನಮಸ್ಕರಿಸಿ ಅಲ್ಲಿಯೇ ಪ್ರಾಣಬಿಟ್ಟಿರುವ ಅಪರೂಪದ ಘಟನೆಯೊಂದು ಬೆಂಗಳೂರಿನ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ನಡೆದಿದೆ. ಇಲ್ಲಿನ ರಾಮನಾಯಕನಹಳ್ಳಿಯ ವಿರಾಂಜನೇಯಸ್ವಾಮಿ ದೇವಾಲಯದ ಮುಖ್ಯದ್ವಾರದ ಬಳಿ ತಲೆಯಿಟ್ಟು ಕೋತಿಯೊಂದು ಕೈಮುಗಿದ ರೀತಿಯಲ್ಲಿ ಸಾವನ್ನಪ್ಪಿದೆ. ಇದನ್ನು ಕಂಡ ಗ್ರಾಮಸ್ಥರು ಇದೆಂತಹ ವಿಸ್ಮಯವೆಂದು ಉದ್ಘರಿಸಿದ್ದಾರೆ. ವೀರಾಂಜನೇಯನ ದೇವಸ್ಥಾನದ ಬಳಿ ಕೋತಿಯೊಂದು ಯಾವಾಗಲೂ ಓಡಾಡಿಕೊಂಡು ಇತ್ತು. ಜುಲೈ 17ರಂದು ಭೀಮನ ಅಮವಾಸ್ಯೆ ದಿನ ದೇವಾಲಯದ ಅರ್ಚಕ ರಾಮಕೃಷ್ಣಯ್ಯ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ …

Read More »

ಮೋದಿ ಅವರಿಗೆ ನಾವು ಬೀಳ್ಕೊಡುಗೆ ನೀಡುತ್ತೇವೆ : ಲಾಲು ಪ್ರಸಾದ್ ಯಾದವ್

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಾವು ಬೀಳ್ಕೊಡುಗೆ ನೀಡುತ್ತೇವೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ. ಅನಾರೋಗ್ಯದ ನಡುವೆಯೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಖಾಸಗಿ ಹೋಟೆಲ್‍ನ ಸಭೆಯಲ್ಲಿ ತಮ್ಮ ಪುತ್ರರೂ ಆದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೊಂದಿಗೆ ಭಾಗವಹಿಸಿದ್ದ ಅವರು, ಪ್ರಧಾನಮಂತ್ರಿಯವರಿಗೆ ನಾವು ಬೀಳ್ಕೊಡುಗೆ ನೀಡುತ್ತೇವೆ ಎಂದಿದ್ದಾರೆ.   ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಈ ಸಭೆ ಅಗತ್ಯವಿದೆ. ಪ್ರಧಾನಮಂತ್ರಿಯವರ ಶಾಸನಗಳು ಜನರಿಗೆ ಮಾರಕವಾಗಿದೆ. …

Read More »