ಬೆಳಗಾವಿ: ತಾಲೂಕಿನ ಹಿಂಡಲಗಾ ಗ್ರಾಮದ ಹುತಾತ್ಮ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ನಾಡದ್ರೋಹಿ ಎಂಬ ಘೋಷಣೆ ಕೂಗುವ ಮೂಲಕ ಮತ್ತೆ ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡಿದ್ದಾರೆ. 1986ರಲ್ಲಿ ಗಡಿ ಗಲಾಟೆಯಲ್ಲಿ ಮೃತಪಟ್ಟ ಮರಾಠಿ ಭಾಷಿಕರಿಗೆ ಎಂಇಎಸ್ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಎನ್‌ಸಿಪಿ ಶಾಸಕ ರಾಜೇಶ್ ಪಾಟೀಲ್ ಕೂಡ ಭಾಗಿಯಾಗುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಕಾರಣರಾಗಿದ್ದಾರೆ. ಈ ವೇಳೆ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, …
Read More »Monthly Archives: ಜೂನ್ 2023
ಕೆಎಸ್ಆರ್ಟಿಸಿ, ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಒಬ್ಬನ ಸಾವು, ಮೂವರಿಗೆ ಗಂಭೀರ ಗಾಯ
ಬೆಳಗಾವಿ: ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಖಾನಾಪುರ ತಾಲೂಕಿನ ಗೊಲ್ಲಿಹಳ್ಳಿ ಗ್ರಾಮದ ಬಳಿ ನಡೆದಿದೆ. ಯಲ್ಲಪ್ಪ ವಣ್ಣೂರ್ (25) ಅಪಘಾತದಲ್ಲಿ ಮೃತ ಪಟ್ಟವರು. ಒಂದೇ ಬೈಕ್ನಲ್ಲಿ ಚಲಿಸುತ್ತಿದ್ದ ಪಲ್ಲವಿ ವಣ್ಣೂರ್ (16), ಐಶ್ವರ್ಯಾ ವಣ್ಣೂರ್ (16), ಭೀಮಪ್ಪ ವಣ್ಣೂರ್ (40) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿರಸಿಯಿಂದ ಬೆಳಗಾವಿ ಕಡೆಗೆ …
Read More »ನಕ್ಸಲರಿಗಿಂತ ಸಿ.ಟಿ.ರವಿ ಡೇಂಜರ್: ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ
ಚಿಕ್ಕಮಗಳೂರು: ಜಾತಿ, ಧರ್ಮದ ಬಗ್ಗೆ ಪದೇ ಪದೇ ಮಾತನಾಡಿ ಮತ ಕೇಳುವುದು, ಹಿಂದೂ ರಾಷ್ಟ್ರ ಮಾಡ್ತೀನಿ ಅನ್ನೋದು, ಸಂವಿಧಾನ ಬದಲಾಯಿಸ್ತೀವಿ ಅನ್ನೋ ಹೇಳಿಕೆಗಳು ನಕ್ಸಲರಿಗಿಂತ ಡೇಂಜರಸ್ ಪದಗಳು. ಹಾಗಾಗಿ ಇವರು ನಕ್ಸಲರಿಗಿಂತ ಡೇಂಜರ್ ಎಂದು ಸಿ.ಟಿ.ರವಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಕಿಡಿಕಾರಿದರು. ಚಿಕ್ಕಮಗಳೂರಲ್ಲಿ ಮಾಜಿ ಶಾಸಕ ಸಿ.ಟಿ.ರವಿ ಅವರ ಅರ್ಬನ್ ನಕ್ಸಲ್ ಹೇಳಿಕೆ ಬಗ್ಗೆ ಭೋಜೇಗೌಡ ಹೀಗೆ ಪ್ರತಿಕ್ರಿಯೆ ನೀಡಿದರು. ಸಂವಿಧಾನ ಬದಲಾವಣೆ, ರಾಷ್ಟ್ರಧ್ವಜ ಇಳಿಸಿ ಭಗವಾಧ್ವಜ ಹಾಕ್ತೀವಿ …
Read More »ಹಸೆಮಣೆ ಏರಬೇಕಿದ್ದ ವ್ಯಕ್ತಿಯಬರ್ಬರ ಹತ್ಯೆ
ಹುಬ್ಬಳ್ಳಿ: ಹಸೆಮಣೆ ಏರಬೇಕಿದ್ದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ನಡೆದಿದೆ. ನಿಂಗಪ್ಪ ಬೂದಪ್ಪ ನವಲೂರ (28) ಕೊಲೆೆಯಾದ ವ್ಯಕ್ತಿ. ದುಷ್ಕರ್ಮಿಗಳು ತೋಟದ ಮನೆಯಲ್ಲಿ ಕಣ್ಣಿಗೆ ಕಾರದ ಪುಡಿ ಎರಚಿ ಬಳಿಕ ಕತ್ತು ಹಿಸುಕಿ ಕೊಂದಿದ್ದಾರೆ ಎನ್ನಲಾಗಿದೆ. ತಾವರಗೇರೆ ಗ್ರಾಮದ ಯುವತಿ ಜತೆ ಮದುವೆ ನಿಶ್ಚಯವಾಗಿತ್ತು. ಜೂನ್ 7 ರಂದು ಮದುವೆ ನಡೆಯಬೇಕಿತ್ತು. ಗುರುವಾರ ಮಧ್ಯರಾತ್ರಿ ಕೊಲೆ ನಡೆದಿದ್ದು, ನಿಖರ ಕಾರಣ ತಿಳಿದು …
Read More »ಕ್ಷುಲ್ಲಕ ಕಾರಣಕ್ಕೆ ಮಗನನ್ನೇ ಕೊಂದು ಹಾಕಿದ ಚಿಕ್ಕಪ್ಪ!
ಬೆಂಗಳೂರು : ಕಳೆದ ಎರಡ್ಮೂರು ದಿನಗಳಿಂದ ರಾಜ್ಯದ ರಾಜಧಾನಿಯಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆ ರಾತ್ರಿ ನಗರದಲ್ಲಿ ಮತ್ತೊಂದು ಹತ್ಯೆಯಾಗಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಗನನ್ನೇ ಚಿಕ್ಕಪ್ಪ ಕೊಲೆ ಮಾಡಿರುವ ಘಟನೆ ನಡೆದಿದೆ. ಕೆಂಗೇರಿ ಉಪನಗರದ ಹೊಯ್ಸಳ ಸರ್ಕಲ್ ಸಮೀಪದ ಹ್ಯಾಪಿ ಡೇ ಬಾರ್ ಬಳಿ ಘಟನೆ ನಡೆದಿದೆ. ಕೆಂಗೇರಿಯ ಗಾಂಧಿನಗರ ನಿವಾಸಿ ನವೀನ್ (25) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಂಠಪೂರ್ತಿ ಕುಡಿದು, ಹಳೆ ವೈಷಮ್ಯದ ವಿಚಾರಕ್ಕೆ ಆರಂಭವಾದ ಗಲಾಟೆ …
Read More »ಮಂಡ್ಯದ ಖ್ಯಾತ ವೈದ್ಯ ಡಾ.ವೇಣುಗೋಪಾಲ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಮಂಡ್ಯ: ಖ್ಯಾತ ವೈದ್ಯ ಡಾ.ವೇಣುಗೋಪಾಲ್ (57) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮದ್ದೂರು ತಾಲೂಕಿನ ಕುದುರಗುಂಡಿ ಗ್ರಾಮದ ಕೆರೆಯ ಬಳಿ ಇಂದು (ಶುಕ್ರವಾರ) ಬೆಳಿಗ್ಗೆ ಕಂಡುಬಂದಿದೆ. ಇವರು ಮಂಡ್ಯದ ಉಮ್ಮಡಹಳ್ಳಿ ಗೇಟ್ ಸಮೀಪದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಸಾಂಜೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಡಾ.ವೇಣುಗೋಪಾಲ್ ಎಂದಿನಂತೆ ಗುರುವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು ಹಲವು ಮಂದಿಗೆ ಚಿಕಿತ್ಸೆ ನೀಡಿದ್ದಾರೆ. ಮಧ್ಯಾಹ್ನ 3-4 ಗಂಟೆಯ ಸುಮಾರಿಗೆ ಆಸ್ಪತ್ರೆಯಿಂದ ಹೊರಟು ಮದ್ದೂರು …
Read More »ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಮಟ್ಟ ವ್ಯಾಪಕವಾಗಿ ಕುಸಿತ
ಬೆಳಗಾವಿ: ಬೆಳಗಾವಿ ಮಹಾನಗರಕ್ಕೆ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಮಟ್ಟ ವ್ಯಾಪಕವಾಗಿ ಕುಸಿತಕ್ಕೊಳಗಾಗಿದೆ. ಈ ಬಾರಿಯ ಮುಂಗಾರು ಸಕಾಲದಲ್ಲಿ ಬಿರುಸು ಪಡೆಯದೆ ಕೈಕೊಟ್ಟಲ್ಲಿ ಬೆಳಗಾವಿ ಮಹಾನಗರ ನೀರಿಗೆ ಬರ ಎದುರಿಸುವ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಶೋಭಾ ಸೋಮನಾಚೆ ಹಾಗೂ ಉಪಮೇಯರ್ ರೇಷ್ಮಾ ಪಾಟೀಲ್ ಅವರು ರಕ್ಕಸಕೊಪ್ಪ ಜಲಾಶಯಕ್ಕೆ ಭೇಟಿ ನೀಡಿ ಸ್ಥಿತಿಗತಿಗಳ ಪರಿಶೀಲನೆ ನಡೆಸಿದರು. ಕೆಯುಐಡಿಎಫ್‌ಸಿ ಅಧೀಕ್ಷಕ ಎಂಜಿನಿಯರ್ ಅಶೋಕ್ …
Read More »2000 ರೂ. ನೋಟು ಬದಲಾಯಿಸಿಕೊಡುವುದಾಗಿ ವಂಚಿಸಿದ ಕಾನಸ್ಟೆಬಲ್
ಬೆಳಗಾವಿ : 500 ರೂ ಮುಖಬೆಲೆಯ 5 ಲಕ್ಷ ರೂ. ನೀಡಿದರೆ 2000 ರೂ. ಮುಖ ಬೆಲೆಯ 6 ಲಕ್ಷ ರೂ. ನೀಡುವುದಾಗಿ ಹೇಳಿ ವಂಚಿಸಿದ ಮೀರಜ್ ಠಾಣೆ ಪೊಲೀಸ್ ಕಾನಸ್ಟೆಬಲ್ ಸೇರಿ ಮೂವರನ್ನು ಕಾಗವಾಡ ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಪ್ರಮುಖ ಆರೋಪಿ ಹುಡುಕಾಟ ನಡೆಸಲಾಗುತ್ತಿದೆ. ಮೀರಜ್ ನ ಸಮೀರ್ ಬೋಸ್ಲೆ ಎನ್ನುವವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಕಾಗವಾಡ ಠಾಣೆ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. …
Read More »ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ವಿವರ ಜಾರಿ
ಬೆಂಗಳೂರು – ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ವಿವರ ನೀಡಿದೆ. ಎಲ್ಲಾ ಗ್ಯಾಂರಟಿ ಯೋಜನೆಗಳು ಇದೇ ವರ್ಷ ಜಾರಿಯಾಗಲಿದೆ ಎಂದು ಸರಕಾರ ತಿಳಿಸಿದೆ. ಸಚಿವಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಗೃಹ ಜ್ಯೋತಿ ಅಡಿ ವಿದ್ಯುತ್ ಬಳಕೆಯ 12 ತಿಂಗಳ ಸರಾಸರಿ ಆಧಾರದ ಮೇಲೆ ಶೇ.10ರಷ್ಟು ಹೆಚ್ಚು ಸೇರಿಸಿ ಉಚಿತವಾಗಿ ನೀಡುತ್ತೇವೆ ಎಂದು ತಿಳಿಸಿದರು. ಜುಲೈ 1ರಿಂದ ಈ ಯೋಜನೆ ಜಾರಿಯಾಗಲಿದೆ. ಶಕ್ತಿ ಯೋಜನೆಯಡಿ …
Read More »ಖಾನಾಪುರ ಬಳಿ ಭೀಕರ ಅಪಘಾತ
ಬೆಳಗಾವಿ: ನಾಲ್ಕು ಜನರು ಸಾಗುತ್ತಿದ್ದ ಬೈಕ್ ಬಸ್ ಗೆ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದು, ಇತರ ಮೂವರು ಗಂಭೀರ ಗಾಯಗೊಂಡಿದ್ದಾರೆ. ಖಾನಾಪುರ ತಾಲೂಕಿನ ಗೋಲಿಹಳ್ಳಿ ಬಳಿ ಅಪಘಾತ ಸಂಭವಿಸಿದೆ. ಬೈಕ್ ಹಾಗೂ ಕೆಎಸ್ಆರ್ ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಬೈಕ್ ನಲ್ಲಿ ಒಂದೇ ಕುಟುಂಬದ ನಾಲ್ವರು ತೆರಳುತ್ತಿದ್ದರು. ಯಲ್ಲಪ್ಪ ಪ್ರಕಾಶ ವಣ್ಣೂರ(25) ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ. ಪಲ್ಲವಿ ವಣ್ಣೂರ(16), ಐಶ್ವರ್ಯಾ ವಣ್ಣೂರ(15) ಭೀಮಪ್ಪ ಬಸಪ್ಪ ವಣ್ಣೂರ(40) ಗಾಯಗೊಂಡಿದ್ದಾರೆ. ಗಾಯಾಳುಗಳ ದೇಹದ ಭಾಗಗಳು …
Read More »