ಚಿಕ್ಕೋಡಿಯಿಂದ ಕೇರೂರ ಮಾರ್ಗವಾಗಿ ಕಾಡಾಪೂರ ಕಡೆಗೆ ತುಂಬಿ ಹೊರಟ್ಟಿದ್ದ ಬಸ್‌ನಿಂದ ವೃದ್ದೆಯೊಬ್ಬಳು ಜಾರಿ ಬಿದ್ದ ಘಟನೆ ನಡೆದಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಪ್ರಭಾವಯಲ್ಲೆಡೆ ಜೋರಾಗಿಯೇ ಇದೆ ಉಚಿತ ಬಸ್ ಪ್ರಯಾಣ ಹಿನ್ನಲೆಯಲ್ಲಿ ಬೆಳಗಾವಿಯ ಚಿಕ್ಕೋಡಿ ಡಿಪೋ ದಿಂದ ಸರ್ಕಾರಿ ಸಾರಿಗೆ ಬಸ್ ಗಳು ಸಂಪೂರ್ಣ ತುಂಬಿ ಹೋಗುತ್ತಿವೆ. ಈ ಹಿನ್ನಲೆಯಲ್ಲಿ ಮಹಿಳೆಯರು ನಾ ಮುಂದು ತಾಮುಂದು ಎಂದು ಬಸ್ ಹತ್ತುವ ವೇಳೆ ವೃದ್ದೆಯೊಬ್ಬಳು ಜಾರಿ ಬಿದ್ದ ಘಟನೆ ಸಿ …
Read More »Monthly Archives: ಜೂನ್ 2023
ಹೆಸ್ಕಾಂ ಕಚೇರಿಗೆ ಬೀಗ ಜಡಿದರೈತರು
ವಿದ್ಯುತ್ ದರ ಹೆಚ್ಚಳ ಹಾಗೂ ಸಮರ್ಥವಾಗಿ ವಿದ್ಯುತ್ ಪೋರೈಸುತ್ತಿಲ್ಲ ಎಂದು ಸಿಟ್ಟುಗೆದ್ದ ಅನ್ನದಾತರು ಹೆಸ್ಕಾಂ ಕಚೇರಿಗೆ ಬೀಗ ಜಡಿದ ಘಟನೆ ಬೆಳವಾಡಿ ಗ್ರಾಮದಲ್ಲಿ ನಡೆದಿದೆ. ಹೌದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಹೆಸ್ಕಾಂ ಕಚೇರಿ ದೊಡವಾಡ ಮತ್ತು ನನುಗುಂಡಿಕೊಪ್ಪ, ಚಿಕ್ಕಬೆಳ್ಳಿಕಟ್ಟಿ ಗ್ರಾಮದ ರೈತರು ಪ್ರತಿಭಟನೆ ನಡೆಸಿ ಹೆಸ್ಕಾಂ ಕಚೇರಿಗೆ ಬೀಗ ಹಾಕಿದ್ದಾರೆ. ಹೆಸ್ಕಾಂ ಅಧಿಕಾರಿಗಳೇ ಕೊಟ್ಟ ಮಾತಿನಂತೆ ವಿದ್ಯುತ್ ಪೂರೈಸುತ್ತಿಲ್ಲ ಅಲ್ಲದೆ ಈಗ ವಿದ್ಯುತ್ ದರವನ್ನು ಸಹ …
Read More »ಹಾಡು ಹಗಲೇ ನಡು ರಸ್ತೆಯಲ್ಲಿ ಮಹಿಳೆಯ ಬರ್ಬರ ಹತ್ಯೆ
ಹಾಡು ಹಗಲೇ ನಡು ರಸ್ತೆಯಲ್ಲಿ ಯುವತಿಯ ಬರ್ಬರ ಹತ್ಯೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಹೊರವಲಯದಲ್ಲಿನ ಕೊಬೊಟೊ ಶೋರೂಂ ಬಳಿ ಗಂಗೂಬಾಯಿ ಯಂಕಂಚಿ (28) ಎಂಬ ಮಹಿಳೆಯನ್ನು ಹತ್ಯೆ ಮಾಡಲಾಗಿದೆ. ರಸ್ತೆಯಲ್ಲೆ ಮಾರಕಾಸ್ತ್ರಗಳಿಂದ ಯುವತಿಯ ಮೇಲೆ ದಾಳಿ ಮಾಡಿ ಹತ್ಯೆ ನಡೆಸಲಾಗಿದೆ. ಮಹಿಳೆ ಸ್ಕೂಟಿ ಮೇಲೆ ಹೊರಟಿದ್ದ ವೇಳೆ ದುಷ್ಕರ್ಮಿಗಳ ದಾಳಿ ನಡೆಸಿ ಹತ್ಯೆ ನಡೆಸಿದ ಬಳಿಕ ಹತ್ಯೆ ಮಾಡಿ ಸ್ಕೂಟಿಯನ್ನು ಕೊಂಡೊಯ್ದಿದ್ದಾರೆ. ಅಪರಿಚಿತ ದುಷ್ಕರ್ಮಿಗಳಿಂದ ನಡೆದ ದಾಳಿ …
Read More »ಗೃಹ ಜ್ಯೋತಿ: ಬಾಡಿಗೆದಾರರು ವಾಸದ ವಿಳಾಸಕ್ಕೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ: ಮತ್ತೆ ಗೊಂದಲ?
ಬೆಂಗಳೂರು : ಗೃಹ ಜ್ಯೋತಿ ಯೋಜನೆಯಡಿ ಫಲಾನುಭವಿಗಳ ಸಂಬಂಧ ಏರ್ಪಟ್ಟ ಗೊಂದಲಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ ಬಾಡಿಗೆದಾರರು ತಮ್ಮ ವಾಸದ ಮನೆ ವಿಳಾಸಕ್ಕೆ ಆಧಾರ್ ಸಂಖ್ಯೆ ಜೋಡಣೆ ಮಾಡುವ ಷರತ್ತು ಹಾಕಿದೆ. ಆದರೆ, ಈ ಸ್ಪಷ್ಟೀಕರಣದ ಷರತ್ತು ಇದೀಗ ಬಾಡಿಗೆದಾರರಲ್ಲಿ ಮತ್ತಷ್ಟು ಗೊಂದಲ ಉಂಟಾಗುವಂತೆ ಮಾಡಿದೆ. ಉಚಿತ 200 ಯೂನಿಟ್ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಬಗ್ಗೆ ಫಲಾನುಭವಿಗಳಲ್ಲಿ ಸಾಕಷ್ಟು ಅನುಮಾನ, ಗೊಂದಲ ಏರ್ಪಟ್ಟಿತ್ತು. ಈ …
Read More »ಹಿಂದೆ ನಡೆದ ಅಕ್ರಮಗಳ ತನಿಖೆಗಾಗಿ ಎಸ್‌ಐಟಿ ರಚನೆ?:
ಬೆಂಗಳೂರು: ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ, ನೇಮಕಾತಿ ಅಕ್ರಮಗಳ ತನಿಖೆಗೆ ಎಸ್‌ಐಟಿ ರಚಿಸಿವ ಬಗ್ಗೆ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಆ ಮೂಲಕ ಬಿಜೆಪಿ ಸರ್ಕಾರದ ಹಗರಣಗಳ ಆರೋಪಗಳನ್ನು ತನಿಖೆಗೆ ಒಳಪಡಿಸಿ ಬಿಜೆಪಿಯನ್ನು ಮತ್ತಷ್ಟು ಕಟ್ಟಿ ಹಾಕಲು ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಎಸ್‌ಐಟಿ ರಚಿಸುವ ಬಗ್ಗೆ ಸಮಾಲೋಚನೆ ನಡೆದಿದೆ. ಪಿಎಸ್‌ಐ ನೇಮಕಾತಿ ಅಕ್ರಮ, ವಿವಿಧ ನೇಮಕಾತಿ ಅಕ್ರಮಗಳ ತನಿಖೆಗೆ …
Read More »ಲಂಚ ಪಡೆಯುತ್ತಿದ್ದ ಹರಿಹರ ನಗರಸಭೆ ಸದಸ್ಯೆ ಲೋಕಾಯುಕ್ತ ಬಲೆಗೆ
ದಾವಣಗೆರೆ: ಲಂಚ ಸ್ವೀಕರಿಸುವ ವೇಳೆ ಹರಿಹರ ನಗರಸಭೆ ಕಾಂಗ್ರೆಸ್ ಸದಸ್ಯೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರನಿಂದ 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ನಗರಸಭೆ ಸದಸ್ಯೆ ನಾಗರತ್ನ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಜಿಲ್ಲೆಯ ಹರಹರ ನಗರಸಭೆ ಕಾಂಗ್ರೆಸ್ ಸದಸ್ಯೆ ನಾಗರತ್ನ ಜತೆಗೆ ಅವರ ಪತಿ ಮಂಜುನಾಥ, ಪುತ್ರ ರೇವಂತ ಸೇರಿ ಗುತ್ತಿಗೆದಾರ ಮಜೀದ್ ಎಂಬುವರಿಂದ ಲಂಚ ಸ್ವೀಕರಿಸುವ ವೇಳೆ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ …
Read More »NEET Result 2023: ರಾಯಚೂರಿನ ಖಾಸಗಿ ಕಾಲೇಜಿನ ಒಡಿಶಾ ವಿದ್ಯಾರ್ಥಿ ರಾಜ್ಯಕ್ಕೆ 127ನೇ ರ‍್ಯಾಂಕ್, ಸಿಇಟಿಯಲ್ಲೂ ಉತ್ತಮ ಸಾಧನೆ
ರಾಯಚೂರು : ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯ ಫಲಿತಾಂಶ ಜೂನ್ 13 ರಂದು ಮಂಗಳವಾರ ರಾತ್ರಿ ಪ್ರಕಟವಾಗಿತ್ತು. ಈ ಪರೀಕ್ಷೆಯಲ್ಲಿ ರಾಯಚೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಒಡಿಶಾ ಮೂಲದ ವಿದ್ಯಾರ್ಥಿಯೊಬ್ಬ 127ನೇ ರ‍್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ. ಅನುರಾಗ ರಂಜನ್ ನೀಟ್ ಪರೀಕ್ಷೆಯಲ್ಲಿ 127ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿರುವ ವಿದ್ಯಾರ್ಥಿ. ರಾಯಚೂರಿನ …
Read More »ಮಂಡ್ಯದಲ್ಲಿ ಅಂಬಿ ಪುತ್ರನ ಭರ್ಜರಿ ಬೀಗರೂಟ: 50 ಸಾವಿರ ಮಂದಿಗೆ ಸಿದ್ಧತೆ, 7 ಟನ್ ಮಟನ್, 7 ಟನ್ ಚಿಕನ್!
ಮಂಡ್ಯ: ಜೂನ್ 5 ರಂದು ದಾಂಪತ್ಯಕ್ಕೆ ಕಾಲಿರಿಸಿದ ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಬೀಗರ ಔತಣಕೂಟ ನಾಳೆ ಸಕ್ಕರೆನಾಡು ಮಂಡ್ಯದ ಗೆಜ್ಜಲಗೆರೆ ಕಾಲೋನಿ ಬಳಿ ನಡೆಯಲಿದೆ. ಎಷ್ಟೇ ಸಾವಿರ ಜನ ಬಂದ್ರೂ ಊಟದ ವ್ಯವಸ್ಥೆ ಮಾಡಲು ಸಕಲ ಸಿದ್ಧತೆ ಮಾಡಲಾಗುತ್ತಿದೆ. ಅಂಬರೀಶ್ಗೆ ಪ್ರಿಯವಾದ ಮಂಡ್ಯ ಶೈಲಿಯ ಬಾಡೂಟವನ್ನು ನಾಳೆ ತಯಾರಿಸಲಾಗುತ್ತದೆ. ಸಿದ್ದತೆ ಪರಿಶೀಲನೆ ಬಳಿಕ ಮಾಹಿತಿ ನೀಡಿದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, “ಬೆಳಗ್ಗೆ …
Read More »ಪಠ್ಯ ಪರಿಷ್ಕರಣೆ ಬಗ್ಗೆ ಬೊಮ್ಮಾಯಿ, ಸುನೀಲ್ ಕುಮಾರ್, ತೇಜಸ್ವಿ ಸೂರ್ಯ ಕಿಡಿ
ಬೆಂಗಳೂರು: ”ರಾಜ್ಯದಲ್ಲಿ ಮುಂಗಾರು ವೈಫಲ್ಯವಾಗಿ ಹಲವಾರು ಗ್ರಾಮದಲ್ಲಿ ಕುಡಿಯುವ ನಿರಿನ ಹಾಹಾಕಾರ ಉಂಟಾಗಿದೆ, ಅಂತರ್ಜಲ ಕುಸಿದಿದೆ. ರೈತರ ಪಾಲಿಗೆ ಮುಂಗಾರು ವೈಫಲ್ಯ ಬಹಳ ದೊಡ್ಡ ಹೊಡೆತ ಕೊಟ್ಟಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವ ಬದಲು, ದ್ವೇಷದ ತೀರ್ಮಾನಗಳನ್ನು ತೆಗೆದುಕೊಂಡು ಸಂಕಷ್ಟದಲ್ಲಿರುವ ಕರ್ನಾಟಕದ ಜನರಿಗೆ ಈ ಸರ್ಕಾರ ಶಾಪವಾಗಿದೆ” ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಈ ಕುರಿತು ಟ್ಚೀಟ್ ಮಾಡಿರುವ ಅವರು, ”ರಾಜ್ಯದಲ್ಲಿ ಕಾಂಗ್ರೆಸ್ …
Read More »ಪ್ರಯಾಣಿಕನ ₹5 ಲಕ್ಷ ಹಣ ಕದ್ದು ಕಾಲ್ಕಿತ್ತ ಕಳ್ಳನ ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ KSRTC ಸಿಬ್ಬಂದಿ!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲನಾ ಸಿಬ್ಬಂದಿಯ ಸಮಯೋಚಿತ ಸಾಹಸ ಕಾರ್ಯ ಮತ್ತು ಧೈರ್ಯದಿಂದಾಗಿ ಪ್ರಯಾಣಿಕನ 5 ಲಕ್ಷ ರೂಪಾಯಿ ಹಣ ಮರಳಿ ಸಿಕ್ಕಿದೆ. ಹಣ ಕದ್ದು ಓಡುತ್ತಿದ್ದ ಕಳ್ಳನನ್ನು ಬಸ್ ಚಾಲಕ ಮತ್ತು ನಿರ್ವಾಹಕ ಇಬ್ಬರೂ ಬೆನ್ನಟ್ಟಿ ಹಿಡಿದಿದ್ದು, ಮೆಚ್ಚುಗೆಗೆ ಕಾರಣವಾಗಿದೆ. ಜುಲೈ 14ರಂದು ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-4ರ ಕೆಎ-57 ಎಫ್ 3975 ಸಂಖ್ಯೆಯ ಬೆಂಗಳೂರು- ತಿರುನಲ್ಲಾರ್ ಮಾರ್ಗದ ಬಸ್ಸಿನ ಆಸನ ಸಂಖ್ಯೆ 17- 18 …
Read More »